ಸರ್ಕಾರಿ ಖಜಾನೆಯಲ್ಲಿ ಕಾಸಿಲ್ವಾ?; ತಾನೇ ಘೋಷಸಿದ ಅನುದಾನದಲ್ಲಿ ಭಾರೀ ಬಾಕಿ ಉಳಿಸಿಕೊಂಡ ಸರ್ಕಾರ!

By Sathish Kumar KH  |  First Published Dec 18, 2024, 5:44 PM IST

ರಾಜ್ಯ ಸರ್ಕಾರ 2024-25ನೇ ಸಾಲಿನಲ್ಲಿ ಇಲಾಖೆಗಳಿಗೆ ಘೋಷಣೆ ಮಾಡಿದ ಅನುದಾನಕ್ಕೂ ಹಾಗೂ ಹಂಚಿಕೆ ಮಾಡಿದ ಅನುದಾನಕ್ಕೂ ಭಾರೀ ವ್ಯತ್ಯಾಸವಿದೆ. ಪಂಚ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿರುವ ಕಾಂಗ್ರೆಸ್ ಸರ್ಕಾರದ ಖಜಾನೆಯಲ್ಲಿ ಕಾಸಿಲ್ಲ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಎಂದು ವಿಪಕ್ಷಗಳಿಂದ ಟೀಕೆ ಮಾಡಲಾಗಿದೆ. ಗ್ಯಾರಂಟಿಗಳ ಹೊಡೆತಕ್ಕೆ ವಿವಿಧ ಇಲಾಖೆಗಳ ಅನುದಾನಕ್ಕೆ ಕತ್ತರಿ ಹಾಕಿತಾ ಸರ್ಕಾರ? ಎಂಬ ಪ್ರಶ್ನೆಗಳು ಕೇಳಿಬಂದಿವೆ.


ಬೆಂಗಳೂರು (ಡಿ.18): ರಾಜ್ಯದಲ್ಲಿ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ಶಾಸಕರು ಅಭಿವೃದ್ಧಿಗೆ ಹಣವಿಲ್ಲ ಎಂದು ಪರದಾಡುತ್ತಿದ್ದಾರೆ. ಆದರೆ, ಸರ್ಕಾರ ಪಂಚ ಗ್ಯಾರಂಟಿ ನಡುವೆ ಭಾರೀ ಅಭಿವೃದ್ಧಿ ಕಾರ್ಯಗಳನ್ನು ಮಾಡಲಿದೆ ಎಂದು ವಿಪಕ್ಷಗಳ ಆರೋಪದಿಂದ ನುಣಿಚಿಕೊಳ್ಳುತ್ತಲೇ ಬಂದಿದೆ. ಆದರೆ, ರಾಜ್ಯ ಸರ್ಕಾರ 2024-25ನೇ ಸಾಲಿನಲ್ಲಿ ಇಲಾಖೆಗಳಿಗೆ ಘೋಷಣೆ ಮಾಡಿದ ಅನುದಾನಕ್ಕೂ ಹಾಗೂ ಹಂಚಿಕೆ ಮಾಡಿದ ಅನುದಾನಕ್ಕೂ ಭಾರೀ ವ್ಯತ್ಯಾಸವಿದೆ. ಪಂಚ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿರುವ ಕಾಂಗ್ರೆಸ್ ಸರ್ಕಾರದ ಖಜಾನೆಯಲ್ಲಿ ಕಾಸಿಲ್ಲ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಎಂದು ವಿಪಕ್ಷಗಳಿಂದ ಟೀಕೆ ಮಾಡಲಾಗಿದೆ.

ರಾಜ್ಯ ರಾಜಕಾರಣದಲ್ಲಿ ಅನುದಾನ ವಿಚಾರ ಸದ್ದು ಮಾಡುತ್ತಿದೆ. ಅಭಿವೃದ್ಧಿಗೆ ಅನುದಾನ ಸಿಕ್ಕಿಲ್ಲ ಎಂದು ಸರ್ಕಾರದ ವಿರುದ್ದ ಅಸಮಾಧಾನ ಹೊರ ಹಾಕುವವರ ಸಂಖ್ಯೆ ಹೆಚ್ಚಾಗಿದೆ. ವಿಪಕ್ಷಗಳು ಮಾತ್ರವಲ್ಲದೇ ಸ್ವಪಕ್ಷಗಳ ಶಾಸಕರಿಂದಲೂ ಅನುದಾನಕ್ಕೆ ಬೇಡಿಕೆ ಹೆಚ್ಚಾಗಿದೆ. ಆದರೆ, ಸರ್ಕಾರ ವಿವಿಧ ಇಲಾಖೆಗಳಿಗೆ ಘೋಷಣೆ ಮಾಡಿದಂತೆ ಅನುದಾನ ಹಂಚಿಕೆಯನ್ನು ಮಾಡಿಲ್ಲ. ಎಲ್ಲ ಇಲಾಖೆಗಳಿಗೆ ಘೋಷಣೆ ಮಾಡಿರುವುದು ಒಂದು ಅನುದಾನವಾದರೆ, ಇಲ್ಲಿ ಹಂಚಿಕೆ ಮಾಡಿದ ಅನುದಾನ ಮಾತ್ರ ಭಾರೀ ವ್ಯ್ಯಾಸವಾಗಿದೆ.

Tap to resize

Latest Videos

undefined

ಹೀಗಾಗಿ, ಗ್ಯಾರಂಟಿಗಳ ಹೊಡೆತಕ್ಕೆ ವಿವಿಧ ಇಲಾಖೆಗಳ ಅನುದಾನಕ್ಕೆ ಕತ್ತರಿ ಹಾಕಿತಾ ಸರ್ಕಾರ? ಎಂಬ ಪ್ರಶ್ನೆಗಳು ಕೇಳಿಬಂದಿವೆ. 2024-25 ಸಾಲಿನಲ್ಲಿ ಸರ್ಕಾರದಿಂದ 3,10,248 ಕೋಟಿ ಅನುದಾನ ಘೋಷಣೆ ಮಾಡಿತ್ತು. ಆದರೆ, ಸರ್ಕಾರದಿಂದ ಕೇವಲ 1,81,785 ಕೋಟಿ ರೂ. ಅನುದಾನ ಮಾತ್ರ ಬಿಡುಗಡೆ ಮಾಡಿದೆ. ವರ್ಷಾಂತ್ಯದವರೆಗೆ ಸರ್ಕಾರದಿಂದ 1,28,462 ಕೋಟಿ ರೂ. ಅನುದಾನ ಬಾಕಿ ಉಳಿಸಿಕೊಂಡಿದೆ. ಇದು ಸುವರ್ಣ ನ್ಯೂಸ್ ಹೇಳುತ್ತಿರುವ ಅಂಕಿ ಅಂಶ ಅಲ್ಲ, ಸರ್ಕಾರವೇ ತೆಗೆದಿಟ್ಟ ಅಂಶವಾಗಿದೆ. ಇದಕ್ಕೆ ವಿಧಾನಸಭೆಯಲ್ಲಿ ಸರ್ಕಾರವೇ ನೀಡಿರುವ ಅಂಕಿ-ಅಂಶ ಇಲ್ಲಿದೆ ನೋಡಿ..

ಇನ್ನು 2-3 ತಿಂಗಳು ಕಳೆದರೆ ಸಿಎಂ ಸಿದ್ದರಾಮಯ್ಯ ಮತ್ತೆ ಬಜೆಟ್ ಮಂಡಿಸಲಿದ್ದಾರೆ. ಆದರೆ, ಬಜೆಟ್‌ನಲ್ಲಿ ಘೋಷಿಸಿದಂತೆ ಅನುದಾನ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ. ವಿವಿಧ ಇಲಾಖೆಗಳ‌ ಅನುದಾನ ಗ್ಯಾರಂಟಿಗಳಿಗೆ ಡೈವರ್ಟ್ ಮಾಡಿದೆಯಾ ಕಾಂಗ್ರೆಸ್? ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಯಾವ್ಯಾವ ಇಲಾಖೆಗೆ ಎಷ್ಟೆಷ್ಟು ಅನುದಾನ ಕಡಿಮೆಯಾಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ..

ಇದನ್ನೂ ಓದಿ: ಬೆಳಗಾವಿ ವಿಭಜನೆ ಸದ್ಯಕ್ಕಿಲ್ಲ: ಸಚಿವ ಕೃಷ್ಣ ಬೈರೇಗೌಡ

ಅಲ್ಪ ಸಂಖ್ಯಾತ ಕಲ್ಯಾಣ
ಘೋಷಿತ ಅನುದಾನ    ಬಿಡುಗಡೆ                 ಬಾಕಿ
3051.72 ಕೋಟಿ          1326.60 ಕೋಟಿ       1725.12 ಕೋಟಿ

ಆಹಾರ ಇಲಾಖೆ         
ಘೋಷಿತ ಅನುದಾನ     ಬಿಡುಗಡೆ             ಬಾಕಿ 
9948.24 ಕೋಟಿ           4082.69 ಕೋಟಿ    5865.55 ಕೋಟಿ

ಇಂಧನ ಇಲಾಖೆ
ಘೋಷಿತ ಅನುದಾನ     ಬಿಡುಗಡೆ                 ಬಾಕಿ   
23173.89 ಕೋಟಿ         14892.83 ಕೋಟಿ     8281.06 ಕೋಟಿ

ಉನ್ನತ ಶಿಕ್ಷಣ    
ಘೋಷಿತ ಅನುದಾನ    ಬಿಡುಗಡೆ               ಬಾಕಿ     
5807.66 ಕೋಟಿ           4099.02 ಕೋಟಿ    1708.64 ಕೋಟಿ

ಕಂದಾಯ ಇಲಾಖೆ
ಘೋಷಿತ ಅನುದಾನ    ಬಿಡುಗಡೆ              ಬಾಕಿ       
3093.99 ಕೋಟಿ           2177.26 ಕೋಟಿ    916.73 ಕೋಟಿ

ಕಾರ್ಮಿಕ ಇಲಾಖೆ
ಘೋಷಿತ ಅನುದಾನ       ಬಿಡುಗಡೆ                  ಬಾಕಿ   
777.59 ಕೋಟಿ                510.02 ಕೋಟಿ         267.57 ಕೋಟಿ

ಕೃಷಿ ಇಲಾಖೆ
ಘೋಷಿತ ಅನುದಾನ   ಬಿಡುಗಡೆ                ಬಾಕಿ       
4991.01 ಕೋಟಿ          2351.29 ಕೋಟಿ      2639.72 ಕೋಟಿ

ಗ್ರಾಮೀಣಾಭಿವೃದ್ದಿ
ಘೋಷಿತ ಅನುದಾನ     ಬಿಡುಗಡೆ               ಬಾಕಿ  
21512.08 ಕೋಟಿ          7095.07 ಕೋಟಿ    14417.01 ಕೋಟಿ

ಜಲಸಂಪನ್ಮೂಲ
ಘೋಷಿತ ಅನುದಾನ    ಬಿಡುಗಡೆ              ಬಾಕಿ  
16809.67 ಕೋಟಿ         7587.20 ಕೋಟಿ    9222.47 ಕೋಟಿ

ನಗರಾಭಿವೃದ್ದಿ    
ಘೋಷಿತ ಅನುದಾನ     ಬಿಡುಗಡೆ     ಬಾಕಿ   
14935.81 ಕೋಟಿ    7372. 62 ಕೋಟಿ     7563.19 ಕೋಟಿ

ಪರಿಶಿಷ್ಟ ಪಂಗಡ ಇಲಾಖೆ  
ಘೋಷಿತ ಅನುದಾನ     ಬಿಡುಗಡೆ                ಬಾಕಿ   
1719.64 ಕೋಟಿ           583.59 ಕೋಟಿ        1136.05 ಕೋಟಿ

ಮಹಿಳಾ & ಕಲ್ಯಾಣ
ಘೋಷಿತ ಅನುದಾನ    ಬಿಡುಗಡೆ                 ಬಾಕಿ   
34439.56 ಕೋಟಿ         18646.16 ಕೋಟಿ    15793.4 ಕೋಟಿ

ಲೋಕೋಪಯೋಗಿ
ಘೋಷಿತ ಅನುದಾನ     ಬಿಡುಗಡೆ               ಬಾಕಿ 
 10176.12 ಕೋಟಿ         5684.72 ಕೋಟಿ    4491.4 ಕೋಟಿ

ಶಿಕ್ಷಣ ಇಲಾಖೆ        
ಘೋಷಿತ ಅನುದಾನ     ಬಿಡುಗಡೆ‌                 ಬಾಕಿ   
37,055.44 ಕೋಟಿ          22,932.80 ಕೋಟಿ    14,122.64 ಕೋಟಿ

ಸಮಾಜ ಕಲ್ಯಾಣ    
ಘೋಷಿತ ಅನುದಾನ     ಬಿಡುಗಡೆ     ‌‌         ಬಾಕಿ 
5095.77 ಕೋಟಿ            3028.71ಕೋಟಿ     2067.71 ಕೋಟಿ
    
ಹಿಂದುಳಿದ ವರ್ಗ    
ಘೋಷಿತ ಅನುದಾನ     ಬಿಡುಗಡೆ               ಬಾಕಿ   
3528.09 ಕೋಟಿ            1680.88 ಕೋಟಿ    1847.21 ಕೋಟಿ

ಸಾರಿಗೆ ಇಲಾಖೆ
ಘೋಷಿತ ಅನುದಾನ     ಬಿಡುಗಡೆ              ಬಾಕಿ   
6534.87 ಕೋಟಿ            4023.87 ಕೋಟಿ    2511 ಕೋಟಿ

click me!