ಎಡವಿದ ಈ ಹಿಂದಿನ ಸರ್ಕಾರ, ಕೇಂದ್ರ ಸರ್ಕಾರದ ಖಜಾನೆ ಸೇರಿದ ರಾಜ್ಯದ ಕ್ಯಾಂಪಾ ಹಣ!

By Suvarna News  |  First Published Jul 28, 2024, 4:38 PM IST

ಈ ಹಿಂದಿನ  ಬಿಜೆಪಿ ಸರ್ಕಾರ  ಎಡವಿದ್ದು,  ಅದರ ಪರಿಣಾಮ ಇದೀಗ ಕ್ಯಾಂಪಾ  ಅನುದಾನಕ್ಕಾಗಿ ಕೇಂದ್ರ ಸರ್ಕಾರದ ಮುಂದಕ್ಕೆ ಕೈಯೊಡ್ಡಬೇಕಾದ  ಪರಿಸ್ಥಿತಿ ನಿರ್ಮಾಣವಾಗಿದೆ ಎಂದು 2022- 23ನೇ ಸಾಲಿನ  ಸಿಎಜಿಯಲ್ಲಿ ಉಲ್ಲೇಖಿಸಲಾಗಿದೆ.  


ಗಿರೀಶ್ ಗರಗ

ಬೆಂಗಳೂರು (ಜು.28):  ಅಭಿವೃದ್ಧಿ ಕಾರ್ಯಗಳೀಗಾಗಿ ನಾಶ ಮಾಡುವ ಅರಣ್ಯಕ್ಕೆ ಪರ್ಯಾಯವಾಗಿ ಅರಣ್ಯ ಅಭಿವೃದ್ಧಿಗೆ ಮೀಸಲಿಡುವ  ಪರಿಹಾರರ್ಥ ಅರಣ್ಯೀಕರಣ ನಿಧಿ(ಕ್ಯಾಂಪಾ) ಬಳಕೆಯಲ್ಲಿ ಈ ಹಿಂದಿನ ಸರ್ಕಾರ (ಬಿಜೆಪಿ ಸರ್ಕಾರ) ಎಡವಿದ್ದು,  ಅದರ ಪರಿಣಾಮ ಇದೀಗ ಕ್ಯಾಂಪಾ  ಅನುದಾನಕ್ಕಾಗಿ ಕೇಂದ್ರ ಸರ್ಕಾರದ ಮುಂದಕ್ಕೆ ಕೈಯೊಡ್ಡಬೇಕಾದ  ಪರಿಸ್ಥಿತಿ ನಿರ್ಮಾಣವಾಗಿದೆ ಎಂದು 2022- 23ನೇ ಸಾಲಿನ ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳ ಲೆಕ್ಕಪರಿಶೋಧನಾ ವರದಿ (ಸಿಎಜಿ) ಯಲ್ಲಿ ಉಲ್ಲೇಖಿಸಲಾಗಿದೆ.  

Tap to resize

Latest Videos

ಅರಣ್ಯ ಪ್ರದೇಶದಲ್ಲಿ ಆಣೆಕಟ್ಟು, ಕೈಗಾರಿಕೆ, ರಸ್ತೆಗಳ ನಿರ್ಮಾಣ, ಗಣಿಗಾರಿಕೆ ಸೇರಿದಂತೆ ಇನ್ನಿತರ ಚಟುವಟಿಕೆ ನಡೆಸಿದರೆ ಅದರಿಂದಾಗುವ ಅರಣ್ಯ ನಾಶಕ್ಕೆ ಬದಲಾಗಿ ಪರ್ಯಾಯ ವಾಗಿ ಅರಣ್ಯ ಅಭಿವೃದ್ಧಿಗಾಗಿ ಇಂತಿಷ್ಟು ಹಣ ನೀಡಬೇಕು. ಹಾಗೇಯೇ ಗಣಿಗಾರಿಕೆ ಸೇರಿದಂತೆ ಇನ್ನಿತರೆ ಚಟುವಟಿಕೆಗಳನ್ನು  ನಡೆಸಲು ಪರ್ಯಾಯ ಭೂಮಿಯನ್ನೂ ನೀಡಬೇಕು.

ಅನುದಾನ ಕೊರತೆ, ಸರ್ವಪಕ್ಷ ಸಭೆಯಲ್ಲಿ ತೀವ್ರ ವಿರೋಧ, ಹೆಚ್ಚು ದಿನ ರಸ್ತೆ ಪಕ್ಕ ನಿಂತ ವಾಹನ ಹರಾಜು

ಹೀಗೇ ನೀಡಲಾಗುವ ಹಣವನ್ನು ರಾಜ್ಯ ಕ್ಯಾಂಪಾ ನಿಧಿಯಲ್ಲಿ ಸಂಗ್ರಹಿಸಿ ನಂತರ ಅರಣ್ಯೀಕರಣಕ್ಕೆ ಬಳಸಿಕೊಳ್ಳಲಾಗುತ್ತದೆ.   ಅಲ್ಲದೆ ಹೀಗೆ ಸಂಗ್ರಹಿಸಲಾಗುವ ನಿಧಿಯ ಮೊತ್ತದಲ್ಲಿ  ಶೇ.10ರಷ್ಟನ್ನು ಮಾತ್ರ ಕೇಂದ್ರ ಪರಿಹಾರಾರ್ಥ ಅರಣ್ಯೀಕರಣ ನಿಧಿಕ್ಕೆ ನೀಡಬೇಕು ಹಾಗೂ ಉಳಿದ ಶೇ. 90ರಷ್ಟನ್ನು  ರಾಜ್ಯ ಪರಿಹಾರಾರ್ಥ ಅರಣ್ಯೀಕರಣ ಕಾರ್ಯಕ್ಕೆ ಬಳಸಿಕೊಳ್ಳಬೇಕು ಎಂಬ ನಿಯಮವಿದೆ. 

ಆದರೆ  2019-20 ರಿಂದ 2022-23 ರವರೆಗೆ ಸಂಗ್ರಹಿಸಲಾದ ಕ್ಯಾಂಪಾ ನಿಧಿಯ ಸಂಪೂರ್ಣ ಹಣವನ್ನು ಆರ್ಥಿಕ ಇಲಾಖೆ ಕೇಂದ್ರ ಪರಿಹಾರಾರ್ಥ ಅರಣೀಕರಣ ನಿಧಿಗೆ ಪಾವತಿಸಲಾಗಿದೆ. ಹೀಗಾಗಿ ಆ ನಿಧಿಯ ಹಣ ವನ್ನು ಪಡೆಯಲು ಇದೀಗ ರಾಜ್ಯ ಅರಣ್ಯ  ಇಲಾಖೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಎದುರು ಕೈಯೊಡ್ಡಬೇಕಾದ ಪರಿಸ್ಥಿತಿ ಎದುರಾಗುವಂತಾಗಿದೆ.

ದೇಶದಲ್ಲೇ ಅತಿ ಹೆಚ್ಚು ಆನೆ ಹೊಂದಿರುವ ಕರ್ನಾಟಕದಲ್ಲಿ 3 ವರ್ಷದಲ್ಲಿ 283 ಆನೆ ಸಾವು!

ಸರಿಪಡಿಸುವುದಾಗಿ ಅಧಿಕಾರಿಗಳ ಸಮಜಾಯಿಷಿ 
ಪರಿಹಾರಾರ್ಥ ಆರಣ್ಯಕರಣಕ್ಕಾಗಿ ನೀಡಲಾಗುವ ನಿರ್ವಹಣೆ ಮತ್ತು ಬಳಕೆದಾರರ ಶುಲ್ಕ ವನ್ನು ರಾಷ್ಟ್ರೀಯ ಪರಿಹಾರಾರ್ಥ ಅರಣೀಕರಣ ನಿಧಿಗೆ ವರ್ಗಾಯಿಸಲು ಪರಿವೇಶ್ ಪೋರ್ಟಲ್ ಸಿದಪಡಿಸಲಾಗಿದೆ. ಅಲ್ಲಿಯವರೆಗೆ ನಿಧಿಯನ್ನು ಸಂಪೂರ್ಣವಾಗಿ ಕೇಂದ್ರ ಕ್ಯಾಂಪಾ ನಿಧಿಗೆ ವರ್ಗಾಯಿಸಲಾಗುತ್ತಿತ್ತು. ಪೋರ್ಟಲ್ ಜಾರಿ ನಂತರ ನಿಧಿ ಪಾವತಿಗೆ ಸೂಕ್ತ ವ್ಯವಸ್ಥೆ ಜಾರಿ ಮಾಡಿ, ಶೇ. 10ರಷ್ಟನ್ನು ಮಾತ್ರ ಕೇಂದ್ರ ನಿಧಿಗೆ ವರ್ಗಾಯಿಸುವ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ಆದರೆ, ಅದನ್ನೂ ರಾಜ್ಯ ಅರಣ್ಯ ಇಲಾಖೆ ಸಮರ್ಪಕವಾಗಿ ಬಳಸಿ ಕೊಂಡಿಲ್ಲ. ಈ ಕುರಿತು ಸಿಎಜಿ ವರದಿ ಸಿದ್ಧಪಡಿಸುವ ವೇಳೆ ಕೇಳಿದಾಗ ಹಲವು ಗೊಂದಲಗ ಳಿಂದ ಪೂರ್ಣ ಪ್ರಮಾಣದ ಹಣವನ್ನು ಕೇಂದ್ರದ ಕ್ಯಾಂಪಾ ನಿಧಿಗೆ ವರ್ಗಾಯಿಸಲಾಗುತ್ತಿತ್ತು. ಹೀಗಾಗಿ ರಾಜ್ಯದ ಪಾಲನ್ನು ವಾಪಾಸು ನೀಡುವಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಮನವಿ ಮಾಡಲಾಗಿದೆ. ಮುಂದಿನ ದಿನ ಗಳಲ್ಲಿ ಇತರ ರಾಜ್ಯಗಳು ಅಳವಡಿಸಿಕೊಂಡಿರುವ ಕಾರ್ಯವಿಧಾನವನ್ನು ನಾವೂ ಅಳವಡಿ ಸಿಕೊಳ್ಳುವುದಾಗಿ ರಾಜ್ಯ ಆರ್ಥಿಕ ಇಲಾಖೆ ತಿಳಿಸಿದೆ ಎಂದು ಸಿಎಂ ಅಧಿಕಾರಿಗಳು ಹೇಳಿದ್ದಾರೆ.

56.08 ಕೋಟಿ ರು. ಜಾಗದಲ್ಲಿ 566.79 ಕೋಟಿ ಪಾವತಿ!
2019-20ರಿಂದ 2022-23ರ ಅವಧಿಯಲ್ಲಿ ಬಳಕೆದಾರರ ಶುಲ್ಕದ ರೂಪದಲ್ಲಿ 566.79 ಕೋಟಿ ರು. ಸಂಗ್ರಹಿಸಲಾಗಿದೆ.  ಅದರಲ್ಲಿ ನಿಯಮದಂತೆ 56.68 ಕೋಟಿ ರು. (ಶೇ. 10ರಷ್ಟು)ಗಳನ್ನು ಹಣವನ್ನು ಮಾತ್ರ ಕೇಂದ್ರದ ನಿಧಿಗೆ ವರ್ಗಾಯಿಸಬೇಕಿತ್ತು. ಆದರೆ, ಅಷ್ಟೂ 566.79 ಕೋಟಿ ರು.ಗಳನ್ನು ಕೇಂದ್ರದ ನಿಧಿಗೆ ವರ್ಗಾವಣೆ ಮಾಡಲಾಗಿದೆ ಎಂದು ಸಿಎಜಿ ವರದಿಯಲ್ಲಿ ತಿಳಿಸಲಾಗಿದೆ.

ಹೊರರಾಜ್ಯಗಳಲ್ಲಿ ಶೇ. 10ರಷ್ಟು ಪಾವತಿ: ಸಿಎಜಿ ಕಚೇರಿ ಅಧಿಕಾರಿಗಳ ಪ್ರಕಾರ ಕರ್ನಾಟಕ ಹೊರತುಪಡಿಸಿ ಕೇರಳ, ತಮಿಳು ನಾಡು, ಗುಜ ರಾತ್ ಸೇರಿ ಬಹುತೇಕ ರಾಜ್ಯಗಳು ಕೇಂದ್ರ ಕ್ಯಾಂಪಾ ನಿಧಿಗೆ ಶೇ. 10ರಷ್ಟು ಮಾತ್ರ ಅನುದಾ ನವನ್ನು ಪಾವತಿಸುತ್ತಿವೆ. ಉಳಿದ ಶೇ. 90ರಷ್ಟು ಅನುದಾನವನ್ನು ತಮ್ಮಲ್ಲಿ ಪರಿಹಾರಾರ್ಥ ಅರಣ್ಯೀಕರಕ್ಕಾಗಿ ಬಳಸಿಕೊಳ್ಳುತ್ತಿವೆ. ಇದು ಪರಿಹಾರಾರ್ಥ ಅರಣ್ಯೀಕರಣ ಅಧಿನಿಯಮ 2016ರ ಅಡಿಯಲ್ಲಿ 2018ರಲ್ಲಿ ರೂಪಿಸಲಾದ ಪರಿವೇಶ್ 3 ಪೋರ್ಟಲ್ ಜಾರಿಯಾದಾಗಿನಿಂದಲೂ ನಡೆದುಕೊಂಡು ಬಂದಿದೆ. ಆದರೆ, ರಾಜ್ಯದಲ್ಲಿ ಅದನ್ನು ಅನುಸರಿಸದೇ ಪೂರ್ತಿ ಅನುದಾನವನ್ನು ಕೇಂದ್ರಕ್ಕೆ ಪಾವತಿಸಲಾಗುತ್ತಿದೆ.

click me!