ಕರ್ನಾಟಕದಲ್ಲಿ 6 ಕೋಟಿಗೂ ಹೆಚ್ಚು ಜನಸಂಖ್ಯೆಯಿದ್ದರೂ, ಕೇವಲ ಶೇ.66ರಷ್ಟು ಜನರು ಮಾತ್ರ ಕನ್ನಡ ಮಾತನಾಡುತ್ತಾರೆ. ಕರ್ನಾಟಕದ ಹೊರಗೆ ಯಾವ ಯಾವ ರಾಜ್ಯಗಳಲ್ಲಿ ಎಷ್ಟು ಕನ್ನಡ ಭಾಷಿಕರು ನೆಲೆಸಿದ್ದಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ..
ಬೆಂಗಳೂರು (ಜ.08): ಭಾರತದಲ್ಲಿ 2000 ವರ್ಷಗಳ ಇತಿಹಾಸ ಹೊಂದಿರುವ ಹಾಗೂ ಶಾಸ್ತ್ರೀಯ ಸ್ಥಾನಮಾನ ಪಡೆದ ಕನ್ನಡ ಭಾಷಿಕರು ಕರ್ನಾಟಕ ಮಾತ್ರವಲ್ಲದೇ ಗುಜರಾತ್, ಮಹಾರಾಷ್ಟ್ರ, ಗೋವಾ, ದೆಹಲಿ ಸೇರಿದಂತೆ ಎಲ್ಲೆಡೆ ಕನ್ನಡಿಗರು ನೆಲೆಸಿದ್ದಾರೆ ಎಂಬ ಸಂತಸದ ವಿಚಾರ ಹೊರಬಿದ್ದಿದೆ. ಕರ್ನಾಟಕ ಹೊರತಾಗಿ ಬೇತೆ ಯಾವ ರಾಜ್ಯಗಳಲ್ಲಿ ಎಷ್ಟು ಜನ ಕನ್ನಡ ಭಾಷಿಕರಿದ್ದಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ..
ಕರ್ನಾಕದಲ್ಲಿ ಕನ್ನಡಿಗನೇ ಸಾರ್ವಭೌಮ, ಸುಮಾರು 2000 ವರ್ಷಗಳ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಯನ್ನು ಭಾರತದ ಲಿಪಿಗಳ ರಾಣಿ ಎಂದೂ ಹೇಳಲಾಗುತ್ತದೆ. ಹೀಗಾಗಿ, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನವೂ ಸಿಕ್ಕಿದೆ. ಆದರೆ, ಕನ್ನಡ ಮಾತನಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂಬ ಆತಂಕದಲ್ಲಿರುವ ನಮಗೆ ಸಂತಸದ ಸುದ್ದಿಯೊಂದು ತಿಳಿದುಬಂದಿದೆ. ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಾದ ಗುಜರಾತ್, ಮಹಾರಾಷ್ಟ್ರ, ಗೋವಾ, ದೆಹಲಿ ಸೇರಿದಂತೆ ಎಲ್ಲೆಡೆ ಕನ್ನಡಿಗರು ನೆಲೆಸಿದ್ದು, ಕನ್ನಡ ಭಾಷಿಕರಾಗಿಯೇ ನೆಲೆಗೊಂಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಮನಿಷಾ ರಾಥೋರ್ ಎಂಬ ಯುವತಿ ಇನ್‌ಸ್ಟಾಗ್ರಾಮ್ ತಮ್ಮ @ManishaRathore ಖಾತೆಯಲ್ಲಿ ಈ ಬಗ್ಗೆ ಮಾತನಾಡಿ ಮಾಹಿತಿ ನೀಡಿದ್ದಾರೆ. ಭಾರತದಲ್ಲಿ 11 ಶಾಸ್ತ್ರೀಯ ಸ್ಥಾನಮಾನ ಹೊಂದಿದ ಭಾಷೆಗಳಲ್ಲಿ ಕನ್ನಡವೂ ಒಂದಾಗಿದೆ. ಕನ್ನಡ ಭಾಷೆಯನ್ನು ಕರ್ನಾಟಕ ರಾಜ್ಯವನ್ನು ಬಿಟ್ಟು ಉಳಿದ ಯಾವ ರಾಜ್ಯಗಳಲ್ಲಿ ಎಷ್ಟು ಜನರಿದ್ದಾರೆ ನೋಡಿ ಎಂದು ಪಟ್ಟಿಯನ್ನು ಓದುತ್ತಾ ಹೋಗಿದ್ದಾರೆ. ಇನ್ನು ಈ ಕನ್ನಡ ಭಾಷಿಕರು ಮಾತೃಭಾಷೆಯಾಗಿ ಮನೆಯಲ್ಲಿ ಕನ್ನಡವನ್ನೇ ಮಾತನಾಡುವವರಾಗಿದ್ದಾರೆ.
ಇದನ್ನೂ ಓದಿ: Supreme court ಜಡ್ಜ್ ದಿಲ್ಲಿ ಮನೆ ಮುಂದೆ ಕನ್ನಡ ಬೋರ್ಡ್, ಕನ್ನಡಿಗರು ಫುಲ್ ಖುಷ್
ರಾಜ್ಯವಾರು ಕನ್ನಡ ಭಾಷಿಕರು
1. ಕರ್ನಾಟಕ - 4,06,51,090
2. ತಮಿಳುನಾಡು - 12,86,175
3. ಮಹಾರಾಷ್ಟ್ರ - 10,00,463
4. ಆಂಧ್ರಪ್ರದೇಶ - 5,44,
5. ಕೇರಳ - 86,995
6. ಗೋವಾ - 67,923
7. ಗುಜರಾತ್ - 18,033
ಉಳಿದಂತೆ ದೆಹಲಿ, ತೆಲಂಗಾಣ, ಪಶ್ಚಿಮ ಬಂಗಾಳ ಸೇರಿದಂತೆ ವಿವಿಧಡೆ 10 ಸಾವಿರಕ್ಕಿಂತ ಕಡಿಮೆ ಕನ್ನಡಿಗರು ನೆಲೆಸಿದ್ದಾರೆ. ಆದರೆ, ಕರ್ನಾಟಕದಲ್ಲಿ 6 ಕೋಟಿಗೂ ಹೆಚ್ಚು ಜನರು ನೆಲೆಸಿದ್ದರೂ ಅವರ ಪೈಕಿ ಶೇ.66 ಪರ್ಸೆಂಟ್ ಜನರು ಮಾತ್ರ ಕನ್ನಡ ಮಾತನಾಡುವವರಿದ್ದಾರೆ. ಉಳಿದಂತೆ ತಮಿಳು, ಮರಾಠಿ, ತೆಲುಗು, ಹಿಂದಿ ಹಾಗೂ ಮಲೆಯಾಳಂ ಭಾಷೆ ಮಾತನಾಡುವವರಿದ್ದಾರೆ.
ಇದನ್ನೂ ಓದಿ: ಎಂಎಸ್ಐಎಲ್ ಟೂರ್ ಪ್ಯಾಕೇಜ್; ಕೇವಲ ₹20,000ಕ್ಕೆ 18 ದಿನಗಳ ಉತ್ತರ ಭಾರತ ಪ್ರವಾಸ
ನಮ್ಮ ಕರ್ನಾಟಕದ ರಾಜಧಾನಿ ಭಾರತದ ಸಿಲಿಕಾನ್ ವ್ಯಾಲಿ ಎನಿಸಿಕೊಂಡಿದ್ದು, ಸ್ಟಾರ್ಟ್‌ಅಪ್ ಹಬ್ ಎಂದು ಖ್ಯಾತಿ ಪಡೆದಿದೆ. ಹೀಗಾಗಿ, ದೇಶದ ವಿವಿಧೆಡೆಯಿಂದ ಬೆಂಗಳೂರಿಗೆ ಉದ್ಯೋಗಕ್ಕಾಗಿ ಬಂದು ನೆಲೆಸಿದವರ ಸಂಖ್ಯೆಯೇ ಹೆಚ್ಚಾಗುತ್ತಿದೆ. ಆದ್ದರಿಂದ ಶೇ.50ಕ್ಕಿಂತ ಕಡಿಮೆ ಜನರು ಮಾತ್ರ ಕನ್ನಡ ಮಾತನಾಡುತ್ತಾರೆ. ಉಳಿದಂತೆ ತಮಿಳು ಭಾಷಿಕರು ಹೆಚ್ಚಾಗಿದ್ದಾರೆ. ಅವರನ್ನು ಬಿಟ್ಟರೆ ತೆಲುಗು, ಹಿಂದಿ, ಮಲೆಯಾಳಂ ಭಾಷಿಕರು ಹೆಚ್ಚಾಗಿ ನೆಲೆಸಿದ್ದಾರೆ.