Karnataka News Live Updates: ಮರುಘಾ ಮಠಕ್ಕೆ ಮರಳಿದ ಶ್ರೀಗಳು, ಭಯ ಬೇಡ ಧೈರ್ಯವಾಗಿರಿ ಎಂದು ಭಕ್ತರಿಗೆ
Aug 29, 2022, 5:52 PM IST
ಲೈಂಗಿಂಕ ದೌರ್ಜನ್ಯ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಮುರುಘಾ ಮಠದ ಶ್ರೀಗಗಳು ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಇದಕ್ಕೆ ಸ್ಪಷ್ಟನೆ ನೀಡಿರುವ ಮಠದ ಸಿಬ್ಬಂದಿ, ಸ್ವಾಮೀಜಿ ಎಲ್ಲಿಗೂ ಹೋಗಿಲ್ಲ. ಧಾರವಾಡಕ್ಕೆ ಹೋಗಿದ್ದರೆಂದು ಮಠ ಸ್ಪಷ್ಟಪಡಿಸಿತ್ತು. ಇದೀಗ ಮಠಕ್ಕೆ ಮರಳಿದ್ದು, ಭಕ್ತರೊಂದಿಗೆ ಮಾತನಾಡಿದ್ದಾರೆ. ಆ ಮೂಲಕ ಬಂಧನ ಸುದ್ದಿಗೆ ತೆರೆ ಎಳೆದಿದ್ದಾರೆ.
ಬೆಂಗಳೂರು ಸೇರಿ ಕರ್ನಾಟಕದ ಮಲೆನಾಡು ಭಾಗ ಸೇರಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ವರುಣನ ಆರ್ಭಟ ಜೋರಾಗಿದ್ದು, ಗೌರಿ-ಗಣೇಶನ ಹಬ್ಬಕ್ಕೂ ಕುಂದು ತರುವ ಸಾಧ್ಯತೆ ಇದೆ. ಬೆಂಗಳೂರಲ್ಲಿ ಸೂರ್ಯನ ದರ್ಶನವೇ ಆಗದೇ, ಸೋಮವಾರ ಆಫೀಸಿಗೆ ಹೊರಟ ಜನರಿಗೆ ಸಂಕಷ್ಟ ಎದುರಾಗಿದೆ. ಮಲೆನಾಡು ಭಾಗದಲ್ಲಿ ಬಿಡದೇ ಸುರಿಯುತ್ತಿರುವ ಮಳೆಗೆ ಕೆರೆ ಕೋಡಿಗಳು ತುಂಬಿ ಹರಿಯುತ್ತಿವೆ. ಒಟ್ಟಿನಲ್ಲಿ ರಾಜ್ಯದಲ್ಲಿ ಇಂದು ವರುಣ ಆರ್ಭಟ ವಿಪರೀತ ಜೋರಾಗಿದ್ದು, ಹೇಗಿದೆ ಪರಿಸ್ಥಿತಿ ತಿಳಿಯಲು ಸುವರ್ಣನ್ಯೂಸ್.ಕಾಮ್ ಲೈವ್ ಬ್ಲಾಗಿಗೆ ಲಾಗಿನ್ ಆಗಿರಿ.
5:52 PM
ಈದ್ಗಾದಲ್ಲಿ ಗಣೇಶೋತ್ಸವ: ಸೆ.1ರೊಳಗೆ ತೀರ್ಮಾನಿಸುತ್ತೇವೆಂದ ಅಶೋಕ್
ಆರ್ ಆಶೋಕ್ ಹೇಳಿಕೆ. ಚಾಮರಾಜಪೇಟೆ ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದೆ. ಇದು ಕಂದಾಯ ಇಲಾಖೆ ಜಮೀನು ಆಗಿದೆ. ಮುಸ್ಲಿಂ ಬಾಂಧವರಿಗೆ ಎರಡು ಬಾರಿ ನಮಾಜ್ ಮಾಡಲು ಅವಕಾಶ ಕೊಟ್ಟಿದೆ. ಗಣೇಶ ಮೂರ್ತಿ ಇಡುವ ಬಗ್ಗೆ 1 ತಾರೀಖಿನ ಒಳಗೆ ಸರ್ಕಾರ ತಿರ್ಮಾನ ಮಾಡುತ್ತೆ, ಎಂದಿದ್ದಾರೆ ಕಂದಾಯ ಸಚಿವ ಆರ್.ಅಶೋಕ.
5:11 PM
ಕೇಂದ್ರ ಸಚಿವ ಜೋಶಿ ಮನೆಗೆ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಭೇಟಿ
ಹುಬ್ಬಳ್ಳಿ: ಕೇಂದ್ರ ಸಚಿವ ಜೋಶಿ ಮನೆಗೆ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಭೇಟಿ. ವಿಶೇಷ ರೈಲು ಸಂಚಾರಕ್ಕೆ ಮನವಿ ಮಾಡಿದ ತಿಮ್ಮಕ್ಕ. ಹುಬ್ಬಳ್ಳಿಯಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಮನೆಗೆ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಬೇಟಿ. ಸಾಲುಮರದ ತಿಮ್ಮಕ್ಕನನ್ನ ಸಚಿವರು ಅದ್ದೂರಿಯಾಗಿ ಸ್ವಾಗತಿಸಿದ್ದ ಜೋಶಿ. ಇದೇ ವೇಳೆ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯಿಂದ ಮನವಿ ನೀಡಿದ ಸಾಲುಮರದ ತಿಮ್ಮಕ್ಕ. ಪ್ರತಿನಿತ್ಯ ಅಯ್ಯಪ್ಪನ ದರ್ಶನಕ್ಕೆ ವಿಶೇಷ ರೈಲು ಸೇವೆ ಕಲ್ಪಿಸುವ ಕುರಿತು ಮನವಿ ಮಾಡಿದ ತಮ್ಮಕ್ಕ. ಮನವಿಯನ್ನ ಸ್ವಿಕರಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.
2:55 PM
Mysore: ಮೂರ್ನಾಲ್ಕು ದಿನಗಳಲ್ಲೇ 700 ಮನೆಗಳು ಕುಸಿತ.
ಮೈಸೂರಿನಲ್ಲಿ ಮಳೆ ಅವಾಂತರ. ಮೂರ್ನಾಲ್ಕು ದಿನಗಳಲ್ಲೇ 700 ಮನೆಗಳು ಕುಸಿತ. ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹೇಳಿಕೆ. ಜೂನ್ ತಿಂಗಳಿಂದ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 3200 ಮನೆಗಳಿಗೆ ಹಾನಿಯಾಗಿದೆ. ಮಾವನಹಳ್ಳಿಯಲ್ಲಿ ಒಬ್ಬ ಮೃತಪಟ್ಟಿದ್ದು ಪರಿಹಾರ ಕೊಟ್ಟಿದ್ದೇವೆ. ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ಜಿಲ್ಲಾದ್ಯಂತ ಹಾನಿ ಆಗಿದೆ. ಪಿರಿಯಪಟ್ಟಣ, ಎಚ್.ಡಿ.ಕೋಟೆ, ಹುಣಸೂರು, ಸರಗೂರು ತಾಲೂಕುಗಳಲ್ಲಿ ಹೆಚ್ಚಿನ ಹಾನಿ ಆಗಿದೆ.ಇದುವರೆಗೆ 21 ಕೋಟಿ ರೂ. ಪರಿಹಾರ ಕೊಟ್ಟಿದ್ದೇವೆ.ಕ್ಷೇತ್ರ ಮಟ್ಟದ ಅಧಿಕಾರಿಗಳು ಮಾನಿಟರ್ ಮಾಡುತ್ತಿದ್ದಾರೆ. ಲಿಂಗಾಂಬುದಿ ಕೆರೆ ಹಿನ್ನೀರು ನಿಂತು ದಟ್ಟಗಳ್ಳಿ, ಅರಸು ಬಡಾವಣೆ, ಸಿಎಫ್‌ಟಿಆರ್‌ಐ ಬಡಾವಣೆ, ಪ್ರೀತಿ ಬಡಾವಣೆಗಳಿಗೆ ನೀರು ನುಗ್ಗಿದೆ. ಕೆರೆಯ ನೀರನ್ನು ಹೊರಗೆ ಬಿಟ್ಟು ರಾಯಪ್ಪನಕೆರೆಗೆ ಬಿಡಲಾಗಿದೆ.
ಮೈಸೂರು ಡಿಸಿ ಡಾ.ಬಗಾದಿ ಗೌತಮ್ ಹೇಳಿಕೆ.
2:08 PM
ಮಲ್ಲಾಡಿಹಳ್ಳಿ ಅನಾಥಸೇವಾಶ್ರಮಕ್ಕೆ ನುಗ್ಗಿ ಭಕ್ತರ ದಾಂಧಲೆ
ಮಲ್ಲಾಡಿಹಳ್ಳಿ ಅನಾಥಸೇವಾಶ್ರಮಕ್ಕೆ ನುಗ್ಗಿ ಭಕ್ತರ ದಾಂಧಲೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನಲ್ಲಿ ಇರುವ ಅನಾಥ ಸೇವಾಶ್ರಮ. ಮುರುಘಾಮಠದ ಆಡಳಿತಕ್ಕೆ ಒಳಪಟ್ಡಿರುವ ಅನಾಥ ಸೇವಾಶ್ರಮ. ಆಶ್ರಮದ ಶಾಲಾ ಕೊಠಡಿಗಳಲ್ಲಿ ಇದ್ದ ಶಿವಮೂರ್ತಿ ಮುರುಘಾಶರಣರ ಪೋಟೋಗಳ ತೆರವು. ಇಪ್ಪತ್ತಕ್ಕೂ ಹೆಚ್ಚು ಪೋಟೋಗಳ ಒಯ್ದ ಭಕ್ತರು. ಆಶ್ರಮದ ಆಡಳಿತ ಮಂಡಳಿಯಿಂದ ಶಿವಮೂರ್ತಿ ಮುರುಘಾಶರಣರ ಉಚ್ಚಾಟನೆಗೆ ಆಗ್ರಹ. ನಂತರ ರಾಷ್ಟ್ರೀಯ ಹೆದ್ದಾರಿ ಶಿವಮೊಗ್ಗ ರಸ್ತೆಗೆ ತೆರಳಿ ಆಳೆತ್ತರದ ಮುರುಘಾಶರಣರ ಪ್ರತಿಮೆ ತೆರವುಗೊಳಿಸಿದ ಭಕ್ತರು.
12:15 PM
ಚಿತ್ರದುರ್ಗ: ಬಾಲಕಿಯರ ಬಾಲ ಮಂದಿರಕ್ಕೆ ಅಗಮಿಸಿದ ಅಧಿಕಾರಿಗಳು
ಚಿತ್ರದುರ್ಗ: ಬಾಲಕಿಯರ ಬಾಲ ಮಂದಿರಕ್ಕೆ ಅಗಮಿಸಿದ ಅಧಿಕಾರಿಗಳು. ಮಕ್ಕಳ ಆಯೋಗದ ಅಧ್ಯಕ್ಷರು, ಸಮಿತಿ ಸದಸ್ಯರು, ನ್ಯಾಯಾಧೀಶರು, ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾಧಿಕಾರಿ, ಎಸ್ಪಿ ಭೇಟಿ. ರಾಜ್ಯ ಮಕ್ಕಳ ಹಕ್ಕು ಆಯೋಗದ ಅದ್ಯಕ್ಷೆ ಜಯಶ್ರೀ ಭೇಟಿ. ಸಂತ್ರಸ್ಥ ಬಾಲಕಿಯರ ಹೇಳಿಕೆ ಪಡೆಯಲಿರುವ ಅಧ್ಯಕ್ಷೆ ಜಯಶ್ರೀ . ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ , ಸಿಇಓ ನಂದಿನಿ ದೇವಿ, ಎಸ್ ಪಿ ಪರುಶರಾಮ್ ನ್ಯಾಯಾಧೀಶರಾದ ಗಿರೀಶ್ ಭೇಟಿ. ಸಂತ್ರಸ್ಥ ಮಕ್ಕಳಿಂದ ಲೈಂಗಿಕ ದೌರ್ಜನ್ಯ ದ ಬಗ್ಗೆ ಮಾಹಿತಿ ಪಡೆಯಲಿರುವ ಆಯೋಗದ ಅಧ್ಯಕ್ಷರು . ಬಾಲಮಂದಿರದ ನಂತರ ಮುರುಘಾ ಮಠದ ಹಾಸ್ಟಲಿಗೂ ಭೇಟಿ ನೀಡಲಿರುವ ಮಕ್ಕಳ ಆಯೋಗದ ಅದ್ಯಕ್ಷರು. ಬಾಲ ಮಂದಿರ ಒಳಗೆ ತೆರಳಿದ ಅಧಿಕಾರಿಗಳು.
11:08 AM
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಈದ್ಗಾ ವಿವಾದ
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಈದ್ಗಾ ವಿವಾದ. ಚಾಮರಾಜಪೇಟೆಯ ಈದ್ಗಾ ಮೈದಾನ ಸುಪ್ರಿಂ ಅಂಗಳಕ್ಕೆ .ವಕ್ಫ್ ಬೋರ್ಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಮನವಿ. ಹೈಕೋರ್ಟ್ ಅದೇಶ ಪ್ರಶ್ನಿಸಿ ಸುಪ್ರೀಂಗೆ ಮೆಲ್ಮನವಿ. ಗಣೇಶೋತ್ಸವಕ್ಕೆ ಅವಕಾಶ ಸರ್ಕಾರದ ಹೊಣೆ ಎಂದಿದ್ದ ಹೈಕೋರ್ಟ್. ವಿಭಾಗೀಯ ಪೀಠದ ಆದೇಶ ರದ್ದು ಕೋರಿ ವಕ್ಫ್ ಸುಪ್ರೀಂ. ಇಂದೇ ವಿಚಾರಣೆ ಕೈಗೆತ್ತಿಕೊಳ್ಳುವಂತೆ ಮನವಿ ಸಾಧ್ಯತೆ.
10:30 AM
ಚಲಿಸುತ್ತಿದ್ದ ಗಾರ್ಮೆಂಟ್ಸ್ ಟೆಂಪೋದಲ್ಲಿ ಆಕಸ್ಮಿಕ ಬೆಂಕಿ
ನೆಲಮಂಗಲ: ಚಲಿಸುತ್ತಿದ್ದ ಗಾರ್ಮೆಂಟ್ಸ್ ಟೆಂಪೋದಲ್ಲಿ ಆಕಸ್ಮಿಕ ಬೆಂಕಿ. ಹಿಂಬದಿ ಟೈರ್ ಬಳಿ ಬೆಂಕಿ ಅವಘಡ. ರಾಷ್ಟ್ರೀಯ ಹೆದ್ದಾರಿ ಡಾಬಾಸ್ ಪೇಟೆ ಬಳಿ ಘಟನೆ. ನೆಲಮಂಗಲ ತಾಲ್ಲೂಕಿನ ಡಾಬಾಸ್ ಪೇಟೆ . ಸ್ಥಳೀಯರ ಸಮಯಪ್ರಜ್ಞೆ ಯಿಂದ ತಪ್ಪಿದ ಭಾರಿ ಅನಾಹುತ. 35 ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವಾಹನ. ಮಾದನಾಯಕನಹಳ್ಳಿ ಟೈಕ್ಸ್ ಪೋಟ್೯ ಕಂಪನಿಗೆ ಸೇರಿದ ವಾಹನ. ಡಾಬಸ್ ಪೇಟೆ ಬಳಿ ಮಿನಿಬಸ್ ಆಗಮಿಸುತ್ತಿದ್ದಂತೆ ಬೆಂಕಿ. ಮಧುಗಿರಿ ಯ ರಂಟವಾಳದಿಂದ ಕಾರ್ಮಿಕರನ್ನು ಕರೆದೊಯುತ್ತಿದ್ದ ವಾಹನ. ಸೂಕ್ತ ತಪಾಸಣೆಯಿಲ್ಲದ ಕಾರಣಕ್ಕೆ ಬೆಂಕಿ ಅವಘಡ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
9:40 AM
ಚನ್ನಪಟ್ಟಣ: ಮಳೆಹಾನಿ ಪ್ರದೇಶದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪರಿಶೀಲನೆ
ಚನ್ನಪಟ್ಟಣದಲ್ಲಿ ಮಳೆಹಾನಿ.ಮಳೆಹಾನಿ ಪ್ರದೇಶದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪರಿಶೀಲನೆ. ಮಳೆಯಿಂದಾಗಿ ಹೆದ್ದಾರಿ ಬ್ಲಾಕ್. ಚನ್ನಬಸನದೊಡ್ಡಿ ಬಳಿ ಸಾರ್ವಜನಿಕರ ಪರದಾಟ. ಸಾರ್ವಜನಿಕರ ಸಹಾಯಕ್ಕೆ ಧಾವಿಸಿದ ಎಚ್ಡಿಕೆ. ಮಳೆ ಕಾರಣದಿಂದ ಬಸ್ ಗಳು ಸಿಗದೇ ಪರದಾಡುತ್ತಿದ್ದ ಪ್ರಯಾಣಿಕರು. ಅಧಿಕಾರಿಗಳ ಜೊತೆ ಮಾತನಾಡಿ ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚಿಸಿದ ಕುಮಾರಸ್ವಾಮಿ.
9:33 AM
ಫೋಕ್ಸೋ ಕೇಸ್ ದಾಖಲೆ: ಅಜ್ಞಾತ ಸ್ಥಳಕ್ಕೆ ಮುರುಘಾಶ್ರೀಗಳು
ಚಿತ್ರದುರ್ಗ: ಚಿತ್ರದುರ್ಗ ಮುರುಘಾಶ್ರೀ ವಿರುದ್ಧ ಫೋಕ್ಸೋ ಕೇಸ್ ದಾಖಲಾಗಿದ್ದು, ಮುರುಘಾಶ್ರೀ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆಂದು ಹೇಳಲಾಗಿದೆ. ಮುರುಘಾಮಠಕ್ಕೆ ಗ್ರಾಮಾಂತರ ಠಾಣೆಯ ಸಿಪಿಐ ಭೇಟಿ. ಸಿಪಿಐ ಬಾಲಚಂದ್ರನಾಯ್ಕ್ ಭೇಟಿ, ಪರಿಶೀಲನೆ. ಮಠದಲ್ಲಿರುವ ಸಮಾಜದ ಮುಖಂಡರ ಬಳಿ ಮಾಹಿತಿ ಪಡೆಯುತ್ತಿರುವ ಪೊಲೀಸ್.
9:24 AM
ಗಣೇಶನ ಹಬ್ಬಕ್ಕೆ ಮಳೆರಾಯನ ಅವಕೃಪೆ
ಈ ಬಾರಿಯ ಗಣೇಶ ಹಬ್ಬಕ್ಕೆ ಅಡ್ಡಿಯಾಗಲಿರುವ ವರುಣರಾಯ. ಇನ್ನು 5 ದಿನ ರಾಜ್ಯದಲ್ಲಿ ಮಳೆ ಮುಂದುವರಿಯುವ ಬಗ್ಗೆ ಮಾಹಿತಿ ನೀಡಿರುವ ಹವಾಮಾನ ಇಲಾಖೆ. ಇಂದಿನಿಂದ 5 ದಿನಗಳ ಕಾಲ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ ಸಾಧ್ಯತೆ. ಈ ಹಿನ್ನೆಲೆ ಇಂದು, ನಾಳೆ ಬೆಂಗಳೂರು ಸೇರಿ 19 ಜಿಲ್ಲೆಗಳಿಗೆ ಎಲ್ಲೊ ಅಲರ್ಟ್. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ತುಮಕೂರು, ಬೆಳಗಾವಿ ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಿಗೆ ಎಲ್ಲೊ ಅಲರ್ಟ್ ಘೋಷಣೆ ಮಾಡಿರುವ ಇಲಾಖೆ. ಇದಾದ ಬಳಿಕವು ಮೂರು ದಿನ ಮಳೆ ಮುಂದುವರಿಕೆ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ.
9:23 AM
Mysore: ಸಾವಿನಲ್ಲಿ ಒಂದಾದ ತಾಯಿಮಗ
ಸಾವಿನಲ್ಲಿ ಒಂದಾದ ತಾಯಿಮಗ. ಸಣ್ಣಮಂಚಮ್ಮ (58) ಕೃಷ್ಣ (42) ಮೃತಪಟ್ಟ ತಾಯಿ ಮಗ. ಹೆಚ್.ಡಿ.ಕೋಟೆ ಪಟ್ಟಣದ ಶ್ರೀ ಸಿದ್ದಪ್ಪಾಜಿ ಬೀದಿಯಲ್ಲಿ ಘಟನೆ. ಮೆದುಳಿಗೆ ಪಾರ್ಶ್ವ ವಾಯುವಿನಿಂದ ತಾಯಿಗೆ ಚಿಕಿತ್ಸೆ. ಕೆಲವೇ ಕ್ಷಣದಲ್ಲಿ ಹೃದಾಯಾಘಾತದಿಂದ ಮಗ ಸಾವು. ಮಗನ ಸಾವಿನ ಸುದ್ದಿ ತಿಳಿದು ಮೃತಪಟ್ಟ ತಾಯಿ. ಇಬ್ಬರ ಮೃತದೇಹದ ಅಂತ್ಯ ಸಂಸ್ಕಾರಕ್ಕೆ ಸಿದ್ದತೆ.
ಮೃತರ ಕುಟುಂಬದಲ್ಲಿ ಸೂತಕದ ಛಾಯೆ.
5:52 PM IST:
ಆರ್ ಆಶೋಕ್ ಹೇಳಿಕೆ. ಚಾಮರಾಜಪೇಟೆ ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದೆ. ಇದು ಕಂದಾಯ ಇಲಾಖೆ ಜಮೀನು ಆಗಿದೆ. ಮುಸ್ಲಿಂ ಬಾಂಧವರಿಗೆ ಎರಡು ಬಾರಿ ನಮಾಜ್ ಮಾಡಲು ಅವಕಾಶ ಕೊಟ್ಟಿದೆ. ಗಣೇಶ ಮೂರ್ತಿ ಇಡುವ ಬಗ್ಗೆ 1 ತಾರೀಖಿನ ಒಳಗೆ ಸರ್ಕಾರ ತಿರ್ಮಾನ ಮಾಡುತ್ತೆ, ಎಂದಿದ್ದಾರೆ ಕಂದಾಯ ಸಚಿವ ಆರ್.ಅಶೋಕ.
5:11 PM IST:
ಹುಬ್ಬಳ್ಳಿ: ಕೇಂದ್ರ ಸಚಿವ ಜೋಶಿ ಮನೆಗೆ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಭೇಟಿ. ವಿಶೇಷ ರೈಲು ಸಂಚಾರಕ್ಕೆ ಮನವಿ ಮಾಡಿದ ತಿಮ್ಮಕ್ಕ. ಹುಬ್ಬಳ್ಳಿಯಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಮನೆಗೆ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಬೇಟಿ. ಸಾಲುಮರದ ತಿಮ್ಮಕ್ಕನನ್ನ ಸಚಿವರು ಅದ್ದೂರಿಯಾಗಿ ಸ್ವಾಗತಿಸಿದ್ದ ಜೋಶಿ. ಇದೇ ವೇಳೆ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯಿಂದ ಮನವಿ ನೀಡಿದ ಸಾಲುಮರದ ತಿಮ್ಮಕ್ಕ. ಪ್ರತಿನಿತ್ಯ ಅಯ್ಯಪ್ಪನ ದರ್ಶನಕ್ಕೆ ವಿಶೇಷ ರೈಲು ಸೇವೆ ಕಲ್ಪಿಸುವ ಕುರಿತು ಮನವಿ ಮಾಡಿದ ತಮ್ಮಕ್ಕ. ಮನವಿಯನ್ನ ಸ್ವಿಕರಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.
2:55 PM IST:
ಮೈಸೂರಿನಲ್ಲಿ ಮಳೆ ಅವಾಂತರ. ಮೂರ್ನಾಲ್ಕು ದಿನಗಳಲ್ಲೇ 700 ಮನೆಗಳು ಕುಸಿತ. ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹೇಳಿಕೆ. ಜೂನ್ ತಿಂಗಳಿಂದ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 3200 ಮನೆಗಳಿಗೆ ಹಾನಿಯಾಗಿದೆ. ಮಾವನಹಳ್ಳಿಯಲ್ಲಿ ಒಬ್ಬ ಮೃತಪಟ್ಟಿದ್ದು ಪರಿಹಾರ ಕೊಟ್ಟಿದ್ದೇವೆ. ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ಜಿಲ್ಲಾದ್ಯಂತ ಹಾನಿ ಆಗಿದೆ. ಪಿರಿಯಪಟ್ಟಣ, ಎಚ್.ಡಿ.ಕೋಟೆ, ಹುಣಸೂರು, ಸರಗೂರು ತಾಲೂಕುಗಳಲ್ಲಿ ಹೆಚ್ಚಿನ ಹಾನಿ ಆಗಿದೆ.ಇದುವರೆಗೆ 21 ಕೋಟಿ ರೂ. ಪರಿಹಾರ ಕೊಟ್ಟಿದ್ದೇವೆ.ಕ್ಷೇತ್ರ ಮಟ್ಟದ ಅಧಿಕಾರಿಗಳು ಮಾನಿಟರ್ ಮಾಡುತ್ತಿದ್ದಾರೆ. ಲಿಂಗಾಂಬುದಿ ಕೆರೆ ಹಿನ್ನೀರು ನಿಂತು ದಟ್ಟಗಳ್ಳಿ, ಅರಸು ಬಡಾವಣೆ, ಸಿಎಫ್‌ಟಿಆರ್‌ಐ ಬಡಾವಣೆ, ಪ್ರೀತಿ ಬಡಾವಣೆಗಳಿಗೆ ನೀರು ನುಗ್ಗಿದೆ. ಕೆರೆಯ ನೀರನ್ನು ಹೊರಗೆ ಬಿಟ್ಟು ರಾಯಪ್ಪನಕೆರೆಗೆ ಬಿಡಲಾಗಿದೆ.
ಮೈಸೂರು ಡಿಸಿ ಡಾ.ಬಗಾದಿ ಗೌತಮ್ ಹೇಳಿಕೆ.
2:08 PM IST:
ಮಲ್ಲಾಡಿಹಳ್ಳಿ ಅನಾಥಸೇವಾಶ್ರಮಕ್ಕೆ ನುಗ್ಗಿ ಭಕ್ತರ ದಾಂಧಲೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನಲ್ಲಿ ಇರುವ ಅನಾಥ ಸೇವಾಶ್ರಮ. ಮುರುಘಾಮಠದ ಆಡಳಿತಕ್ಕೆ ಒಳಪಟ್ಡಿರುವ ಅನಾಥ ಸೇವಾಶ್ರಮ. ಆಶ್ರಮದ ಶಾಲಾ ಕೊಠಡಿಗಳಲ್ಲಿ ಇದ್ದ ಶಿವಮೂರ್ತಿ ಮುರುಘಾಶರಣರ ಪೋಟೋಗಳ ತೆರವು. ಇಪ್ಪತ್ತಕ್ಕೂ ಹೆಚ್ಚು ಪೋಟೋಗಳ ಒಯ್ದ ಭಕ್ತರು. ಆಶ್ರಮದ ಆಡಳಿತ ಮಂಡಳಿಯಿಂದ ಶಿವಮೂರ್ತಿ ಮುರುಘಾಶರಣರ ಉಚ್ಚಾಟನೆಗೆ ಆಗ್ರಹ. ನಂತರ ರಾಷ್ಟ್ರೀಯ ಹೆದ್ದಾರಿ ಶಿವಮೊಗ್ಗ ರಸ್ತೆಗೆ ತೆರಳಿ ಆಳೆತ್ತರದ ಮುರುಘಾಶರಣರ ಪ್ರತಿಮೆ ತೆರವುಗೊಳಿಸಿದ ಭಕ್ತರು.
12:15 PM IST:
ಚಿತ್ರದುರ್ಗ: ಬಾಲಕಿಯರ ಬಾಲ ಮಂದಿರಕ್ಕೆ ಅಗಮಿಸಿದ ಅಧಿಕಾರಿಗಳು. ಮಕ್ಕಳ ಆಯೋಗದ ಅಧ್ಯಕ್ಷರು, ಸಮಿತಿ ಸದಸ್ಯರು, ನ್ಯಾಯಾಧೀಶರು, ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾಧಿಕಾರಿ, ಎಸ್ಪಿ ಭೇಟಿ. ರಾಜ್ಯ ಮಕ್ಕಳ ಹಕ್ಕು ಆಯೋಗದ ಅದ್ಯಕ್ಷೆ ಜಯಶ್ರೀ ಭೇಟಿ. ಸಂತ್ರಸ್ಥ ಬಾಲಕಿಯರ ಹೇಳಿಕೆ ಪಡೆಯಲಿರುವ ಅಧ್ಯಕ್ಷೆ ಜಯಶ್ರೀ . ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ , ಸಿಇಓ ನಂದಿನಿ ದೇವಿ, ಎಸ್ ಪಿ ಪರುಶರಾಮ್ ನ್ಯಾಯಾಧೀಶರಾದ ಗಿರೀಶ್ ಭೇಟಿ. ಸಂತ್ರಸ್ಥ ಮಕ್ಕಳಿಂದ ಲೈಂಗಿಕ ದೌರ್ಜನ್ಯ ದ ಬಗ್ಗೆ ಮಾಹಿತಿ ಪಡೆಯಲಿರುವ ಆಯೋಗದ ಅಧ್ಯಕ್ಷರು . ಬಾಲಮಂದಿರದ ನಂತರ ಮುರುಘಾ ಮಠದ ಹಾಸ್ಟಲಿಗೂ ಭೇಟಿ ನೀಡಲಿರುವ ಮಕ್ಕಳ ಆಯೋಗದ ಅದ್ಯಕ್ಷರು. ಬಾಲ ಮಂದಿರ ಒಳಗೆ ತೆರಳಿದ ಅಧಿಕಾರಿಗಳು.
11:08 AM IST:
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಈದ್ಗಾ ವಿವಾದ. ಚಾಮರಾಜಪೇಟೆಯ ಈದ್ಗಾ ಮೈದಾನ ಸುಪ್ರಿಂ ಅಂಗಳಕ್ಕೆ .ವಕ್ಫ್ ಬೋರ್ಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಮನವಿ. ಹೈಕೋರ್ಟ್ ಅದೇಶ ಪ್ರಶ್ನಿಸಿ ಸುಪ್ರೀಂಗೆ ಮೆಲ್ಮನವಿ. ಗಣೇಶೋತ್ಸವಕ್ಕೆ ಅವಕಾಶ ಸರ್ಕಾರದ ಹೊಣೆ ಎಂದಿದ್ದ ಹೈಕೋರ್ಟ್. ವಿಭಾಗೀಯ ಪೀಠದ ಆದೇಶ ರದ್ದು ಕೋರಿ ವಕ್ಫ್ ಸುಪ್ರೀಂ. ಇಂದೇ ವಿಚಾರಣೆ ಕೈಗೆತ್ತಿಕೊಳ್ಳುವಂತೆ ಮನವಿ ಸಾಧ್ಯತೆ.
10:30 AM IST:
ನೆಲಮಂಗಲ: ಚಲಿಸುತ್ತಿದ್ದ ಗಾರ್ಮೆಂಟ್ಸ್ ಟೆಂಪೋದಲ್ಲಿ ಆಕಸ್ಮಿಕ ಬೆಂಕಿ. ಹಿಂಬದಿ ಟೈರ್ ಬಳಿ ಬೆಂಕಿ ಅವಘಡ. ರಾಷ್ಟ್ರೀಯ ಹೆದ್ದಾರಿ ಡಾಬಾಸ್ ಪೇಟೆ ಬಳಿ ಘಟನೆ. ನೆಲಮಂಗಲ ತಾಲ್ಲೂಕಿನ ಡಾಬಾಸ್ ಪೇಟೆ . ಸ್ಥಳೀಯರ ಸಮಯಪ್ರಜ್ಞೆ ಯಿಂದ ತಪ್ಪಿದ ಭಾರಿ ಅನಾಹುತ. 35 ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವಾಹನ. ಮಾದನಾಯಕನಹಳ್ಳಿ ಟೈಕ್ಸ್ ಪೋಟ್೯ ಕಂಪನಿಗೆ ಸೇರಿದ ವಾಹನ. ಡಾಬಸ್ ಪೇಟೆ ಬಳಿ ಮಿನಿಬಸ್ ಆಗಮಿಸುತ್ತಿದ್ದಂತೆ ಬೆಂಕಿ. ಮಧುಗಿರಿ ಯ ರಂಟವಾಳದಿಂದ ಕಾರ್ಮಿಕರನ್ನು ಕರೆದೊಯುತ್ತಿದ್ದ ವಾಹನ. ಸೂಕ್ತ ತಪಾಸಣೆಯಿಲ್ಲದ ಕಾರಣಕ್ಕೆ ಬೆಂಕಿ ಅವಘಡ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
9:40 AM IST:
ಚನ್ನಪಟ್ಟಣದಲ್ಲಿ ಮಳೆಹಾನಿ.ಮಳೆಹಾನಿ ಪ್ರದೇಶದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪರಿಶೀಲನೆ. ಮಳೆಯಿಂದಾಗಿ ಹೆದ್ದಾರಿ ಬ್ಲಾಕ್. ಚನ್ನಬಸನದೊಡ್ಡಿ ಬಳಿ ಸಾರ್ವಜನಿಕರ ಪರದಾಟ. ಸಾರ್ವಜನಿಕರ ಸಹಾಯಕ್ಕೆ ಧಾವಿಸಿದ ಎಚ್ಡಿಕೆ. ಮಳೆ ಕಾರಣದಿಂದ ಬಸ್ ಗಳು ಸಿಗದೇ ಪರದಾಡುತ್ತಿದ್ದ ಪ್ರಯಾಣಿಕರು. ಅಧಿಕಾರಿಗಳ ಜೊತೆ ಮಾತನಾಡಿ ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚಿಸಿದ ಕುಮಾರಸ್ವಾಮಿ.
9:33 AM IST:
ಚಿತ್ರದುರ್ಗ: ಚಿತ್ರದುರ್ಗ ಮುರುಘಾಶ್ರೀ ವಿರುದ್ಧ ಫೋಕ್ಸೋ ಕೇಸ್ ದಾಖಲಾಗಿದ್ದು, ಮುರುಘಾಶ್ರೀ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆಂದು ಹೇಳಲಾಗಿದೆ. ಮುರುಘಾಮಠಕ್ಕೆ ಗ್ರಾಮಾಂತರ ಠಾಣೆಯ ಸಿಪಿಐ ಭೇಟಿ. ಸಿಪಿಐ ಬಾಲಚಂದ್ರನಾಯ್ಕ್ ಭೇಟಿ, ಪರಿಶೀಲನೆ. ಮಠದಲ್ಲಿರುವ ಸಮಾಜದ ಮುಖಂಡರ ಬಳಿ ಮಾಹಿತಿ ಪಡೆಯುತ್ತಿರುವ ಪೊಲೀಸ್.
9:24 AM IST:
ಈ ಬಾರಿಯ ಗಣೇಶ ಹಬ್ಬಕ್ಕೆ ಅಡ್ಡಿಯಾಗಲಿರುವ ವರುಣರಾಯ. ಇನ್ನು 5 ದಿನ ರಾಜ್ಯದಲ್ಲಿ ಮಳೆ ಮುಂದುವರಿಯುವ ಬಗ್ಗೆ ಮಾಹಿತಿ ನೀಡಿರುವ ಹವಾಮಾನ ಇಲಾಖೆ. ಇಂದಿನಿಂದ 5 ದಿನಗಳ ಕಾಲ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ ಸಾಧ್ಯತೆ. ಈ ಹಿನ್ನೆಲೆ ಇಂದು, ನಾಳೆ ಬೆಂಗಳೂರು ಸೇರಿ 19 ಜಿಲ್ಲೆಗಳಿಗೆ ಎಲ್ಲೊ ಅಲರ್ಟ್. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ತುಮಕೂರು, ಬೆಳಗಾವಿ ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಿಗೆ ಎಲ್ಲೊ ಅಲರ್ಟ್ ಘೋಷಣೆ ಮಾಡಿರುವ ಇಲಾಖೆ. ಇದಾದ ಬಳಿಕವು ಮೂರು ದಿನ ಮಳೆ ಮುಂದುವರಿಕೆ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ.
9:23 AM IST: