ಜೈನಮುನಿ ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬಾರದು. ನಾವು ಅಹಿಂಸಾವಾದಿಗಳು, ಕೊಲೆ ಮಾಡಿದವರಿಗೆ ನಾನು ಕ್ಷಮಾದಾನ ಕೊಡುತ್ತೇನೆ. ಅವರ ಮನಃ ಪರಿವರ್ತನೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ವರೂರಿನ ನವಗ್ರಹ ಜೈನ ಮಂದಿರದ ಗುಣಧರನಂದಿ ಮಹಾರಾಜರು ಹೇಳಿದರು.
ಹುಬ್ಬಳ್ಳಿ (ಜು.11) : ಜೈನಮುನಿ ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬಾರದು. ನಾವು ಅಹಿಂಸಾವಾದಿಗಳು, ಕೊಲೆ ಮಾಡಿದವರಿಗೆ ನಾನು ಕ್ಷಮಾದಾನ ಕೊಡುತ್ತೇನೆ. ಅವರ ಮನಃ ಪರಿವರ್ತನೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ವರೂರಿನ ನವಗ್ರಹ ಜೈನ ಮಂದಿರದ ಗುಣಧರನಂದಿ ಮಹಾರಾಜರು ಹೇಳಿದರು.
ಅವರು ಸೋಮವಾರ ಮಂದಿರಕ್ಕೆ ಭೇಟಿ ನೀಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ ಜತೆ ಮಾತನಾಡಿ, ನಂತರ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಇಂತಹ ಘೋರ ಕೃತ್ಯ ಮಾಡಿರುವ ಕುರಿತು ಅವರಿಗೆ ಅರಿವಾಗುವಂತಾಗಲಿ. ಹತ್ಯೆ ಮಾಡಿದ ಆರೋಪಿಗಳ ಕುಟುಂಬಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಲಿ. ಹತ್ಯೆ ಮಾಡಿದವನಿಂದಾಗಿ ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಬಾರದು ಎಂಬುದು ನನ್ನ ಮನವಿ ಎಂದರು.
ಜೈನ ಮುನಿಗಳ ಹತ್ಯೆ ಹಿಂದೆ ಉಗ್ರರ ಕೈವಾಡ ಎಂದ ಶಾಸಕ ಸವದಿ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ
ಉಪವಾಸ ಹಿಂಪಡೆಯುವೆ:
ಜೈನಮುನಿ ಹತ್ಯೆಯ ಕೃತ್ಯ ಆಗಿರುವುದನ್ನು ಎಲ್ಲ ಪಕ್ಷದ ಮುಖಂಡರು, ಸಮಾಜ ಬಾಂಧವರು, ಸಾರ್ವಜನಿಕರು ಖಂಡಿಸಿದ್ದಾರೆ. ಇಂತಹ ಕೃತ್ಯ ಆಗಬಾರದು ಎಂಬುದು ನನ್ನ ಮನವಿ. ಒಂದು ಜೀವಿಯನ್ನು ಕೊಲ್ಲದ ನಮ್ಮಂತಹ ಜೈನಮುನಿಯನ್ನು ಘೋರವಾಗಿ ಹತ್ಯೆ ಮಾಡಿರುವುದನ್ನು ವಿರೋಧಿಸಿ ನಾನು ಆಮರಣಾಂತ ಉಪವಾಸ ಹಮ್ಮಿಕೊಳ್ಳಲು ನಿರ್ಧರಿಸಿದ್ದೆ. ಆದರೆ, ಗೃಹ ಸಚಿವ ಜಿ. ಪರಮೇಶ್ವರ ಭೇಟಿ ನೀಡಿ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿರುವುದರಿಂದ ಉಪವಾಸ ಸತ್ಯಾಗ್ರಹ ಕೈಬಿಡುವುದಾಗಿ ಹೇಳಿದರು.
ಈ ಹೋರಾಟ ರಾಜಕೀಯ ಹೋರಾಟ ಆಗಬಾರದು. ಮಠಕ್ಕೆ ಎಲ್ಲ ಪಕ್ಷದವರ ಸಹಕಾರ ಇದೆ. ಈಗಾಗಲೇ ಗೃಹ ಸಚಿವರ ಮುಂದೆ ನಮ್ಮ ಬೇಡಿಕೆ ಈಡೇರಿಕೆಗೆ ಪತ್ರ ನೀಡಲಾಗಿದ್ದು, ಈಡೇರಿಸುವ ಭರವಸೆ ನೀಡಿದ್ದಾರೆ ಎಂದರು.
ಜೈನಮುನಿ ಹತ್ಯೆ ಕೇಸ್‌ನಲ್ಲಿ ರಾಜಕಾರಣ ಬೆರೆಸುವ ಪ್ರಯತ್ನ ಬೇಡ: ಶಾಸಕ ಲಕ್ಷ್ಮಣ ಸವದಿ