ಮೂಲನಿವಾಸಿ ಜೈನರಿಗೆ ಭಾರತದಲ್ಲೇ ಅಭದ್ರತೆ ವಾತಾವರಣ ವಿಷಾದನೀಯ: ಶಾಸಕ ಹರೀಶ್ ಪೂಂಜಾ

By Kannadaprabha News  |  First Published Jul 11, 2023, 9:22 PM IST

ಬೆಳಗಾವಿಯ ಚಿಕ್ಕೋಡಿಯಲ್ಲಿ ಜೈನ ಮುನಿಯೊಬ್ಬರ ಬರ್ಬರ ಹತ್ಯೆ ಮಾಡಲಾಗಿದೆ. ಇದರಿಂದ ಜೈನ ಸಮಾಜ ಆಘಾತಕ್ಕೆ ಒಳಗಾಗಿದೆ. ಮೈಕ್ರೋ ಸಂಖ್ಯೆಯಲ್ಲಿರುವ ಜೈನರಿಗೆ ಭಾರತದಲ್ಲಿಯೇ ಅದೂ ಮೂಲನಿವಾಸಿಗಳಾದ ಜೈನರಿಗೆ ಭಾರತದಲ್ಲಿಯೇ ಅಭದ್ರತೆಯ ವಾತಾವರಣ ಉಂಟಾಗಿರುವುದು ವಿಷಾದನೀಯ ಎಂದು ಶಾಸಕ ಹರೀಶ ಪೂಂಜ ತಿಳಿಸಿದ್ದಾರೆ.


ಬೆಳ್ತಂಗಡಿ (ಜು.11): ಬೆಳಗಾವಿಯ ಚಿಕ್ಕೋಡಿಯಲ್ಲಿ ಜೈನ ಮುನಿಯೊಬ್ಬರ ಬರ್ಬರ ಹತ್ಯೆ ಮಾಡಲಾಗಿದೆ. ಇದರಿಂದ ಜೈನ ಸಮಾಜ ಆಘಾತಕ್ಕೆ ಒಳಗಾಗಿದೆ. ಮೈಕ್ರೋ ಸಂಖ್ಯೆಯಲ್ಲಿರುವ ಜೈನರಿಗೆ ಭಾರತದಲ್ಲಿಯೇ ಅದೂ ಮೂಲನಿವಾಸಿಗಳಾದ ಜೈನರಿಗೆ ಭಾರತದಲ್ಲಿಯೇ ಅಭದ್ರತೆಯ ವಾತಾವರಣ ಉಂಟಾಗಿರುವುದು ವಿಷಾದನೀಯ ಎಂದು ಶಾಸಕ ಹರೀಶ ಪೂಂಜ ತಿಳಿಸಿದ್ದಾರೆ.

ಜೈನ ಮುನಿಯೊಬ್ಬರ ಕ್ಷುಲ್ಲಕ ಕಾರಣಕ್ಕಾಗಿ ಹತ್ಯೆ ಮಾಡಲಾಗಿದೆ. ಸಹಾಯ ಪಡೆದುಕೊಂಡವರೇ ಕೃತಘ್ನರಾಗಿ ಹತ್ಯೆಗೈದಿದ್ದಾರೆ ಎಂದು ಮೇಲ್ನೋಟಕ್ಕೆ ಕಾಣಬರುತ್ತದೆ. ಜೈನರು ಅಹಿಂಸಾವಾದಿಗಳು, ವಿಶ್ವಕ್ಕೆ ಶಾಂತಿಯನ್ನು ಬಯಸುವವರು ಹಾಗೂ ಬೇರೆಯವರ ಸುಖವನ್ನು ಬಯಸುವವರು. ಈಗ ಜೈನರಿಗೆ ಭದ್ರತೆಯ ಜೊತೆಗೆ ರಕ್ಷಣೆ ಒದಗಿಸಬೇಕಾದದ್ದು ಸರ್ಕಾರದ ಮೂಲ ಕರ್ತವ್ಯ.

Tap to resize

Latest Videos

ರಾಜ್ಯ ಸರ್ಕಾರ ಜೈನರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಬೇಕಾದದ್ದು ಕರ್ತವ್ಯ. ಕೊಲೆಪಾತಕರಲ್ಲೂ ಜಾತಿಯನ್ನು ನೋಡದೇ ಕಾನೂನು ಪ್ರಕಾರ ಶಿಕ್ಷೆಯನ್ನು ಕೊಡಿ. ಜೈನರಿಗೆ ರಕ್ಷಣೆಯನ್ನು ನೀಡಿ. ನಿಷ್ಪಕ್ಷಪಾತವಾಗಿ ಜೈನರಿಗೆ ನ್ಯಾಯವನ್ನು ದೊರಕಿಸಿಕೊಡಬೇಕು ಎಂದರು.

 

ಜೈನಮುನಿ ಹತ್ಯೆ ಆರೋಪಿಗೆ ಶಿಕ್ಷೆ ಬೇಡ, ಮನಃ ಪರಿವರ್ತನೆಯಾಗಲಿ - ಗುಣಧರನಂದಿ ಮಹಾರಾಜ್‌

click me!