ಸೂರತ್ ನಿಲ್ದಾಣ ಅಭಿವೃದ್ಧಿ ಕಾರ್ಯ-ಹಂತ 2 (ಪ್ಲಾಟ್ ಫಾರ್ಮ್ 02 ಮತ್ತು 03ರ ಬ್ಲಾಕ್) ಗೆ ಸಂಬಂಧಿಸಿದಂತೆ ಏರ್ ಕಾನ್ಕೋರ್ಸ್ ಕಾಮಗಾರಿದಿಂದಾಗಿ ಉದ್ನಾ ಜಂಕ್ಷನ್ ನಲ್ಲಿ ರೈಲು ಸಂಖ್ಯೆ 19668 ಮೈಸೂರು-ಉದಯಪುರ ಸಿಟಿ ಸಾಪ್ತಾಹಿಕ ಹಮ್ಸಫರ್ ಎಕ್ಸ್ ಪ್ರೆಸ್ ರೈಲಿನ ಆಗಮನ, ನಿರ್ಗಮನ ಸಮಯವನ್ನು ಪಶ್ಚಿಮ ರೈಲ್ವೆಯು ಪರಿಷ್ಕರಿಸಿದೆ.
ಹುಬ್ಬಳ್ಳಿ (ಜ.16): ಸೂರತ್ ನಿಲ್ದಾಣ ಅಭಿವೃದ್ಧಿ ಕಾರ್ಯ-ಹಂತ 2 (ಪ್ಲಾಟ್ ಫಾರ್ಮ್ 02 ಮತ್ತು 03ರ ಬ್ಲಾಕ್) ಗೆ ಸಂಬಂಧಿಸಿದಂತೆ ಏರ್ ಕಾನ್ಕೋರ್ಸ್ ಕಾಮಗಾರಿದಿಂದಾಗಿ ಉದ್ನಾ ಜಂಕ್ಷನ್ ನಲ್ಲಿ ರೈಲು ಸಂಖ್ಯೆ 19668 ಮೈಸೂರು-ಉದಯಪುರ ಸಿಟಿ ಸಾಪ್ತಾಹಿಕ ಹಮ್ಸಫರ್ ಎಕ್ಸ್ ಪ್ರೆಸ್ ರೈಲಿನ ಆಗಮನ, ನಿರ್ಗಮನ ಸಮಯವನ್ನು ಪಶ್ಚಿಮ ರೈಲ್ವೆಯು ಪರಿಷ್ಕರಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ, ಈ ರೈಲು ಉಧ್ನಾ ಜಂಕ್ಷನ್ಗೆ 15:23 ಗಂಟೆಯ ಬದಲು 15:13 ಗಂಟೆಗೆ ಆಗಮಿಸಿ, 15:28 ಗಂಟೆಯ ಬದಲಾಗಿ 15:18 ಗಂಟೆಗೆ ಹೊರಡಲಿದೆ.
ರೈಲುಗಳ ಸಂಚಾರ ಭಾಗಶಃ ರದ್ದು / ನಿಯಂತ್ರಣ: ಕೃಷ್ಣರಾಜನಗರ ನಿಲ್ದಾಣದ ರಸ್ತೆ ಸಂಖ್ಯೆ 2ರ ಎರಡೂ ಬದಿಗಳಲ್ಲಿ ಟ್ರ್ಯಾಕ್ ಮೆಷಿನ್ ಸೈಡಿಂಗ್ ಅನ್ನು ನಿಯೋಜಿಸಲು ಎಂಜಿನಿಯರಿಂಗ್ ಕಾಮಗಾರಿ ಕೈಗೊಳ್ಳುವ ಸಲುವಾಗಿ, ಈ ಕೆಳಗಿನ ರೈಲುಗಳ ಸಂಚಾರದಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಕುಂಭಮೇಳ ಯಾತ್ರಾರ್ಥಿಗಳ ಅನುಕೂಲಕರ ಪ್ರಯಾಣಕ್ಕೆ ವಿಶೇಷ ರೈಲು ಸಂಚಾರ: ಸಂಪೂರ್ಣ ವಿವರ ಹೀಗಿದೆ
ರೈಲುಗಳ ಸಂಚಾರ ಭಾಗಶಃ ರದ್ದು
1.ಜನವರಿ 28 ರಂದು ರೈಲು ಸಂಖ್ಯೆ 56267 ಅರಸೀಕೆರೆ-ಮೈಸೂರು ಡೈಲಿ ಪ್ಯಾಸೆಂಜರ್ ರೈಲು ಹಾಸನ ಮತ್ತು ಮೈಸೂರು ನಿಲ್ದಾಣಗಳ ಮಧ್ಯ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಹಾಸನದಲ್ಲಿ ಕೊನೆಗೊಳ್ಳುತ್ತದೆ.
2.ಜನವರಿ 29 ರಂದು ರೈಲು ಸಂಖ್ಯೆ 56268 ಮೈಸೂರು-ಅರಸೀಕೆರೆ ಡೈಲಿ ಪ್ಯಾಸೆಂಜರ್ ರೈಲು ಮೈಸೂರಿನ ಬದಲು ಹಾಸನದಿಂದ ನಿಗದಿತ ಸಮಯಕ್ಕೆ ಹೊರಡಲಿದೆ. ಈ ರೈಲು ಮೈಸೂರು ಮತ್ತು ಹಾಸನ ನಡುವೆ ಭಾಗಶಃ ರದ್ದಾಗಿದೆ.
3.ಜನವರಿ 28 ರೈಲು ಸಂಖ್ಯೆ 16225 ಮೈಸೂರು-ಶಿವಮೊಗ್ಗ ಟೌನ್ ಡೈಲಿ ಎಕ್ಸ್ ಪ್ರೆಸ್ ರೈಲು ಮೈಸೂರಿನ ಬದಲು ಹಾಸನದಿಂದ ನಿಗದಿತ ಸಮಯಕ್ಕೆ ಹೊರಡಲಿದೆ. ಈ ರೈಲು ಮೈಸೂರು ಮತ್ತು ಹಾಸನ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ.
4.ಜನವರಿ 29 ರಂದು ರೈಲು ಸಂಖ್ಯೆ 16226 ಶಿವಮೊಗ್ಗ ಟೌನ್-ಮೈಸೂರು ಡೈಲಿ ಎಕ್ಸ್ ಪ್ರೆಸ್ ರೈಲು ಹಾಸನ ಮತ್ತು ಮೈಸೂರು ನಡುವೆ ಭಾಗಶಃ ರದ್ದುಗೊಂಡಿದೆ. ಈ ರೈಲು ಹಾಸನದಲ್ಲಿ ಕೊನೆಗೊಳ್ಳುತ್ತದೆ.
ರೈಲುಗಳ ನಿಯಂತ್ರಣ
1.ಜನವರಿ 26 ರಂದು ತಮ್ಮ ಮೂಲ ನಿಲ್ದಾಣಗಳಿಂದ ಹೊರಡುವ ರೈಲು ಸಂಖ್ಯೆ 16221 ತಾಳಗುಪ್ಪ-ಮೈಸೂರು ಕುವೆಂಪು ಡೈಲಿ ಎಕ್ಸ್ ಪ್ರೆಸ್ ಮತ್ತು ರೈಲು ಸಂಖ್ಯೆ 16222 ಮೈಸೂರು-ತಾಳಗುಪ್ಪ ಕುವೆಂಪು ಡೈಲಿ ಎಕ್ಸ್ ಪ್ರೆಸ್ ರೈಲುಗಳನ್ನು ಮಾರ್ಗ ಮಧ್ಯದಲ್ಲಿ 45 ನಿಮಿಷಗಳ ಕಾಲ ಸಂಚಾರವನ್ನು ನಿಯಂತ್ರಿಸಲಾಗುವುದು.
ರೈಲಿನಲ್ಲಿ ಸಹಜ ಸಾವು ಸಂಭವಿಸಿದ್ರೆ ಪರಿಹಾರ ಸಿಗುತ್ತಾ? ಭಾರತೀಯ ರೈಲ್ವೆಯ ನಿಯಮಗಳೇನು?
2.ಜನವರಿ 29 ರಂದು ಯಶವಂತಪುರ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16207 ಯಶವಂತಪುರ-ಮೈಸೂರು ಡೈಲಿ ಎಕ್ಸ್ ಪ್ರೆಸ್ ರೈಲು ಮಾರ್ಗ ಮಧ್ಯದಲ್ಲಿ 30 ನಿಮಿಷಗಳ ಕಾಲ ನಿಯಂತ್ರಿತವಾಗಿರುತ್ತದೆ.