ಹುಬ್ಬಳ್ಳಿಯಲ್ಲಿ ಹಿಂದೂ ಯುವತಿ ಹತ್ಯೆ ಪ್ರಕರಣ; ಕಿಮ್ಸ್ ಶವಾಗಾರಕ್ಕೆ  ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭೇಟಿ

By Ravi Janekal  |  First Published Apr 18, 2024, 11:39 PM IST

ಯುವತಿ ನೇಹಾ ಹಿರೇಮಠ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹಾಡಹಗಲೇ ಹತ್ಯೆ ಆಗಿರೋದು ನೋಡಿದ್ರೆ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಇಂತಹ ಘಟನೆಗಳು ನಡೆಯುತ್ತವೆ. ಸರ್ಕಾರದ ತುಷ್ಟೀಕರಣದಿಂದಾಗಿ ಸಮಾಜಘಾತಕರಿಗೆ ಯಾರ ಭಯ ಇಲ್ಲದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.


ಹುಬ್ಬಳ್ಳಿ (ಏ.18): ಪ್ರೀತಿ ನಿರಾಕರಿಸಿದ್ದಕ್ಕೆ ಬಿವಿಬಿ ಕಾಲೇಜು ಕ್ಯಾಂಪಸ್‌ನಲ್ಲಿ ಯುವತಿಯನ್ನ ಹತ್ಯೆ ಮಾಡಿದ ಪ್ರಕರಣ ಹುಬ್ಬಳ್ಳಿಯ ಕಿಮ್ಸ್ ಶವಾಗಾರಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಶಾಸಕರಾದ ಮಹೇಶ್ ಟೆಂಗಿನಕಾಯಿ ಹಾಗೂ ಅರವಿಂದ್ ಬೆಲ್ಲದ್ ಭೇಟಿ ನೀಡಿದರು.

ಮೃತ ಯುವತಿ ನೇಹಾ ಹಿರೇಮಠ ಹತ್ಯೆ ಕುರಿತು ವೈದ್ಯರು, ಕುಟುಂಬಸ್ಥರಿಂದ ಮಾಹಿತಿ ಪಡೆದರು ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಯುವತಿ ನೇಹಾ ಹಿರೇಮಠ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹಾಡಹಗಲೇ ಹತ್ಯೆ ಆಗಿರೋದು ನೋಡಿದ್ರೆ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಇಂತಹ ಘಟನೆಗಳು ನಡೆಯುತ್ತವೆ. ಮೊನ್ನೆ ತಾನೇ ಐದು ಜನ ಯುವಕರು ಬೈಕ್ ಮೇಲೆ ಹೊಗೋವಾಗ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡೋ‌ ಹೇಯ ಕೃತ್ಯ ನಡೆದಿತ್ತು. ಇಂಥ ಘಟನೆಗಳಿಗೆ ಸರ್ಕಾರದ ತುಷ್ಟೀಕರಣ ನೀತಿಯೇ ಕಾರಣ. ಸಮಾಜಘಾತಕರಿಗೆ ಭಯ ಇಲ್ಲದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

Tap to resize

Latest Videos

ಪ್ರೀತ್ಸೆ ಅಂತಾ ನೇಹಾ ಹಿಂದೆ ಬಿದ್ದಿದ್ದ ಫಯಾಜ್, ಪ್ರೀತಿ ನಿರಾಕರಿಸಿದ ಕಾರಣ ಚಾಕು ಇರಿದು ಹತ್ಯೆ!

ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸರ್ಕಾರ ಈಗಲಾದರೂ ಗಂಭೀರವಾಗಿ ಪರಿಗಣಿಸಲಿ. ನಾನು ಮೃತ ಯುವತಿಯ ತಂದೆ ಜೊತೆಗೆ ಮಾತನಾಡಿದ್ದೇನೆ. ಯುವತಿ ಯಾವುದೇ ರೀತಿ ಲವ್ ಮಾಡಿಲ್ಲಾ ಅಂತ ಹೇಳಿದ್ರು. ಲವ್ ಮಾಡದಿದ್ರೆ ಕೊಲೆ ಮಾಡಬೇಕು ಅಂತಾ ಏನಾದ್ರೂ ಇದೆಯಾ? ಮಗಳ ಹತ್ಯೆ ಹಿಂದೆ ಲವ್ ಜಿಹಾದ್ ಬಗ್ಗೆ ತಂದೆಯೇ ಹೇಳಿದ್ದಾರೆ. ಈ ಬಗ್ಗೆ ಸರಿಯಾಗಿ ತನಿಖೆಯಾಗಬೇಕು ಎಂದು ಆಗ್ರಹಿಸಿದರಲ್ಲದೇ, ಅಮಾಯಕ ಹೆಣ್ಣು ಮಗಳ ಕೊಲೆಯಾಗಿದೆ. ಈ ಬಗ್ಗೆ ಗೃಹ ಸಚಿವ ಪರಮೇಶ್ವರ ಅವರು ಏನು ಉತ್ತರ ಕೊಡ್ತಾರೆ? ಎಂದು ಪ್ರಶ್ನಿಸಿದರು.

ಹುಬ್ಬಳ್ಳಿಯಲ್ಲಿ ಕಾರ್ಪೋರೇಟರ್ ಮಗಳು ಲವ್ ಜಿಹಾದ್‌ಗೆ ಬಲಿ? 9 ಬಾರಿ ಚಾಕು ಇರಿದ ಆರೋಪಿ ಫಯಾಜ್!

ಈ ಹಿಂದೆ ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣ, ಹುಬ್ಬಳ್ಳಿ ಗಲಭೆ ಪ್ರಕರಣ, ರಾಮೇಶ್ವರ ಸ್ಫೋಟ, ದೇಶ ವಿರೋಧಿ ಘೋಷಣೆ, ಮುಸ್ಲಿಂ ಲೀಗ್ ಧ್ವಜ ಹೀಗೆ ಸಾಲು ಸಾಲು ಸಮಾಜಘಾತಕ, ದೇಶದ್ರೋಹಿ ಘಟನೆ ನಡೆದಿವೆ. ಆದರೆ ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬದಲು ಸರ್ಕಾರ ಮತಕ್ಕಾಗಿ ತುಷ್ಟೀಕರಣ ಮಾಡುತ್ತಿದೆ. ಈಗ ನಡೆದಿರುವ ಹತ್ಯೆ ಪ್ರಕರಣದ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು, ಆರೋಪಿ ಪರ ಯಾರೂ ವಕಾಲತ್ತು ವಹಿಸಿಕೊಳ್ಳಬಾರದು ಎಂದು ಮನವಿ ಮಾಡಿದರು. 

click me!