ಹೊಸ ಫಲ ಅಥವಾ ಫಸಲನ್ನು ಮನೆಗೆ ತರುವ ಪ್ರಕ್ರಿಯೆಯನ್ನು ಕರಾವಳಿ ಭಾಗದಲ್ಲಿ ವಿಶೇಷ ಹೊಸ್ತು ಹಬ್ಬವಾಗಿ ಆಚರಿಸಲಾಗುತ್ತದೆ. ಐತಿಹಾಸಿಕ ಗ್ರಾಮೀಣ ಸೊಗಡನ್ನು ಹೊಂದಿರುವ ಈ ವಿಶೇಷ ಹೊಸ್ತು ಹಬ್ಬವನ್ನು ಆಚರಿಸದಿದ್ದರೆ ಮುಂಬರುವ ಯಾವ ಹಬ್ಬವನ್ನೂ ಆಚರಿಸಲಾಗಲ್ಲ ಅನ್ನೋ ಪ್ರತೀತಿಯೂ ಇದೆ.
ವರದಿ: ಭರತರಾಜ್ ಕಲ್ಲಡ್ಕ
ಉತ್ತರ ಕನ್ನಡ (ನ.6): ಹೊಸ ಫಲ ಅಥವಾ ಫಸಲನ್ನು ಮನೆಗೆ ತರುವ ಪ್ರಕ್ರಿಯೆಯನ್ನು ಕರಾವಳಿ ಭಾಗದಲ್ಲಿ ವಿಶೇಷ ಹೊಸ್ತು ಹಬ್ಬವಾಗಿ ಆಚರಿಸಲಾಗುತ್ತದೆ. ಐತಿಹಾಸಿಕ ಗ್ರಾಮೀಣ ಸೊಗಡನ್ನು ಹೊಂದಿರುವ ಈ ವಿಶೇಷ ಹೊಸ್ತು ಹಬ್ಬವನ್ನು ಆಚರಿಸದಿದ್ದರೆ ಮುಂಬರುವ ಯಾವ ಹಬ್ಬವನ್ನೂ ಆಚರಿಸಲಾಗಲ್ಲ ಅನ್ನೋ ಪ್ರತೀತಿಯೂ ಇದೆ.
undefined
ಈ ಹಬ್ಬದ ಹಿನ್ನೆಲೆ ಇಡೀ ಊರಿಗೆ ಊರೇ ಗ್ರಾಮಗಳ ಗದ್ದೆಗೆ ತೆರಳಿ, ಅಲ್ಲಿ ಪೂಜೆ ಮಾಡಿದ ಬಳಿಕ ಕದರು ತರುವ ಸಂಪ್ರದಾಯವಿದೆ. ಇದರಂತೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿ ಗ್ರಾಮದಲ್ಲಿ ಇಡೀ ಊರಿಗೆ ಊರೇ ಜನರು ಒಟ್ಟು ಸೇರಿ ವಿಶೇಷ ಹೊಸ್ತಿನ ಹಬ್ಬವನ್ನು ಆಚರಿಸಿದ್ದಾರೆ. ನೂರಾರು ವರ್ಷಗಳಿಂದ ಈ ಭಾಗದ ರೈತರು ಈ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದು, ಇದನ್ನು ಹರಣ ಮೂರ್ತ, ಹೊಸ ಧಾನ್ಯ ಮುಂತಾದ ಹೆಸರುಗಳಿಂದ ಕರೆಯಲಾಗತ್ತದೆ.
ಹಬ್ಬದ ದಿನದಂದು ವಾದ್ಯ ಮೇಳದೊಂದಿಗೆ ಭಕ್ತರು ಹಾಗೂ ಅರ್ಚಕರು ಈ ಹಬ್ಬಕ್ಕಾಗಿಯೇ ಮೀಸಲಾಗಿಡುವ ಗದ್ದೆಗೆ ಹೋಗಿ ವಿಶೇಷ ಪೂಜೆ ಸಲ್ಲಿಸಿ ಭತ್ತದ ತೆನೆ ಹೊತ್ತು ತರುತ್ತಾರೆ. ಈ ಹಬ್ಬದಲ್ಲಿ ಕುಮಟಾದ ಬರ್ಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಎಲ್ಲಾ ಸಮುದಾಯದವರು ಸಂಭ್ರಮದಿಂದ ಪಾಲ್ಗೊಂಡಿದ್ದಾರೆ. ಈ ಹಬ್ಬವನ್ನು ಪ್ರತಿವರ್ಷ ವಿಜಯದಶಮಿಯಂದು ಆಚರಿಸಲಾಗುತ್ತದೆ. ಅಂದು ಆಚರಿಸಲು ಸಾಧ್ಯವಾಗದೆ ಇದ್ದರೆ ಈ ಹಬ್ಬವನ್ನು ಗಂಗಾಷ್ಠಮಿಯಂದು ಆಚರಿಸಲಾಗುತ್ತದೆ.
Fascinating Indian Wedding: ಪುರಾತನ ರೀತಿ, ಗ್ರಾಮೀಣ ಸೊಗಡು, ಮಾದರಿಯಾಯ್ತು ವಿಶೇಷ ವಿವಾಹ
ಈ ಬಾರಿ ವಿಜಯ ದಶಮಿಯಂದು ಆಚರಿಸಲು ಆಗದೇ ಇರುವ ಹಿನ್ನೆಲೆಯಲ್ಲಿ ಇಂದು ಗಂಗಾಷ್ಠಮಿಯಂದು ಈ ಹಬ್ಬವನ್ನ ಆಚರಿಸಲಾಗಿದೆ. ಇನ್ನು ಈ ಹಬ್ಬದಂದು ಗ್ರಾಮ ದೇವತೆಗಳಾದ ಯಜಮಾನ, ಘಟಭೀರ ದೇವರ ಕಳಸ ಹೊತ್ತು ನೂರಾರು ಭಕ್ತರು ಮೆರವಣಿಗೆಯಲ್ಲಿ ಸಾಗಿ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬಂದಿದ್ದಾರೆ. ಬಳಿಕ ಹೊಸ್ತಿನ ಹಬ್ಬಕ್ಕೆ ಮೀಸಲಾಗಿಡುವ ಗದ್ದೆಗೆ ಆರ್ಚಕರು ಹಾಗೂ ಗ್ರಾಮದ ಜನರು ತೆರಳಿ ಕದಿರು ಕೊಯ್ಯಲಾಗಿದೆ.
ನಂತರ ಪ್ರತಿಯೊಬ್ಬರು ತಲೆಯ ಮೇಲೆ ಕದಿರು ಹೊತ್ತು ಅವರವರ ಮನೆಗೆ ತೆರಳಿದ್ದು, ಮನೆಯಲ್ಲಿ ಸದಾ ಧಾನ್ಯ ಲಕ್ಷ್ಮಿ ನೆಲೆಸಬೇಕು ಅನ್ನೋ ಪ್ರಾರ್ಥನೆಯೊಂದಿಗೆ ದೇವಸ್ಥಾನದಿಂದ ಮನೆಗೆ ತರಲಾದ ಕದಿರನ್ನು ತಮ್ಮ ತಮ್ಮ ಮನೆಯ ಬಾಗಿಲು, ಕೃಷಿ ಉಪಕರಣಗಳಿಗೆ ಕದರನ್ನ ಕಟ್ಟಿ ಹಬ್ಬವನ್ನು ಆಚರಿಸಿದ್ದಾರೆ.