ಡಿಕೆಶಿಗೆ ಇಂದು ಹೈಕೋರ್ಟ್ ಕಂಟಕ?: ಇಡಿ ನೊಟೀಸ್ ಹಣೆಬರಹ ನಿರ್ಧಾರ!

Feb 22, 2019, 12:14 PM IST

ಬೆಂಗಳೂರು(ಫೆ.22): ಡಿಕೆಶಿಗೆ ಇಂದು ಹೈಕೋರ್ಟ್ ನಲ್ಲಿ ಕಂಟಕ ಎದುರಾಗಲಿದೆ. ಇಡಿ ಕೇಸ್ ಎದುರಿಸುತ್ತಿರುವ ಡಿಕೆಶಿಗೆ ಇಂದು ಮಹತ್ವದ ದಿನ. ಇಡಿ ನೀಡಿದ್ದ ನೊಟೀಸ್ ನ್ನು ಡಿಕೆಶಿ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಐಟಿ ನೀಡಿದ್ದ ವರದಿ ಆಧರಿಸಿ ಡಿಕೆಶಿ ಮತ್ತು ಇತರ ನಾಲ್ವರ ಮೇಲೆ ಇಡಿ ನೊಟೀಸ್ ಜಾರಿ ಮಾಡಿತ್ತು. ಆದರೆ ಬಜೆಟ್ ನೆಪವೊಡ್ಡಿ ಡಿಕೆಶಿ ವಿಚಾರಣೆಯಿಂದ ವಿನಾಯ್ತಿ ಪಡೆದಿದ್ದರು. ಫೆ.08ರಂದು ವಿಚಾರಣೆಗೆ ಹಾಜರಾಗುವಂತೆ ಈ ಹಿಂದೆ ಇಡಿ ನೊಟೀಸ್ ಜಾರಿ ಮಾಡಿತ್ತು. ಇದೀಗ ಮತ್ತೆ ದಿನಾಂಕವನ್ನು ವಿಸ್ತರಿಸಲು ಡಿಕೆಶಿ ಮನವಿ ಮಾಡುವ ಸಾಧ್ಯತೆ ಇದೆ. 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...