'ಜೈನಮುನಿಗಳನ್ನು ಹತ್ಯೆ ಮಾಡಬೇಕು'! ಬಿಜೆಪಿ ಮಾಜಿ ಸಂಸದನೊಬ್ಬನ ಬಾಯಲ್ಲಿ ಬರುವ ಮಾತಾ ಇದು? ಜೈನ ಮುನಿ ಖಂಡನೆ

By Ravi Janekal  |  First Published Nov 7, 2023, 7:22 PM IST

ಜೈನ ಮುನಿಗಳನ್ನು ಹತ್ಯೆ ಮಾಡಬೇಕೆಂಬ ಬಿಜೆಪಿ ಮುಖಂಡನ ವಿವಾದಾತ್ಮಕ ಹೇಳಿಕೆ ವಿರುದ್ಧ ಜೈನ ಮುನಿ ಸಿದ್ದಸೇನ ಮುನಿ ತೀವ್ರವಾಗಿ ಖಂಡಿಸಿದರು. ಜೈನ ಮುನಿಗಳ ಹತ್ಯೆ ಮಾಡುವಂತೆ ಮಾಜಿ ಸಂಸದರೊಬ್ಬರು ಹೀಗೆ ಹೇಳುತ್ತಾರೆಂದರೆ ಏನು ಹೇಳುಬೇಕು?  ಮಹೇಶ ಗಿರಿ ಹೇಳಿಕೆಯನ್ನು ನೀವು ಸಮರ್ಥಿಸಿಕೊಳ್ತಿರಾ ಪ್ರಧಾನಿ ಮೋದಿಯವರೇ? ಎಂದು ಸಿದ್ಧಸೇನ ಮುನಿಗಳ ಪ್ರಶ್ನಿಸಿದರು. 


ಬೆಳಗಾವಿ (ನ.7): ಜೈನ ಮುನಿಗಳನ್ನು ಹತ್ಯೆ ಮಾಡಬೇಕೆಂಬ ಬಿಜೆಪಿ ಮುಖಂಡನ ವಿವಾದಾತ್ಮಕ ಹೇಳಿಕೆ ವಿರುದ್ಧ ಜೈನ ಮುನಿ ಸಿದ್ದಸೇನ ಮುನಿ ತೀವ್ರವಾಗಿ ಖಂಡಿಸಿದರು.

ಇಂದು ಬೆಳಗಾವಿಯ ಹಲಗಾದಲ್ಲಿ ಸುದ್ದಿಗೋಷ್ಠಿ ನಡೆಸಿದ ಮುನಿಗಳು, ಗುಜರಾತ್‌ನ ಜುನಾಡ ಕ್ಷೇತ್ರದ ಮಾಜಿ ಸಂಸದ ಮಹೇಶ ಗಿರಿ ಎಂಬುವವರು ಜೈನ ಸಾಧುಗಳು ಗಿರಿನಾರಕ್ಕೆ ಬಂದರೆ ತುಂಡು ತುಂಡಾಗಿ ಕತ್ತರಿಸಿ ಎಂದು ಹೇಳಿಕೆ ನೀಡಿದ್ದಾರೆ. ಒಬ್ಬ ಮಾಜಿ ಸಂಸದನಾಗಿ ಇಂತಹ ಮಾತನಾಡೋದು ಎಷ್ಟು ಸರಿ? ಒಂದು ಇರುವೆ ಕೂಡ ಕೊಲ್ಲದ ನಮ್ಮ ಸಮಾಜಕ್ಕೆ ಇಂತಹ ಪರಿಸ್ಥಿತಿ ಬಂದಿದೆ ಎಂದು ಮುನಿಗಳು ಬೇಸರ ವ್ಯಕ್ತಪಡಿಸಿದರು.

Tap to resize

Latest Videos

ವೀರೇಂದ್ರ ಹೆಗ್ಗಡೆ ಬಗ್ಗೆ ಅಪಪ್ರಚಾರ ಬೇಡ: ಗುಣಧರನಂದಿ ಶ್ರೀಗಳು

ಜೈನ ಮುನಿಗಳ ಹತ್ಯೆ ಮಾಡುವಂತೆ ಮಾಜಿ ಸಂಸದರೊಬ್ಬರು ಹೀಗೆ ಹೇಳುತ್ತಾರೆಂದರೆ ಏನು ಹೇಳುಬೇಕು?  ಮಹೇಶ ಗಿರಿ ಹೇಳಿಕೆಯನ್ನು ನೀವು ಸಮರ್ಥಿಸಿಕೊಳ್ತಿರಾ ಪ್ರಧಾನಿ ಮೋದಿಯವರೇ? ಎಂದು ಸಿದ್ಧಸೇನ ಮುನಿಗಳ ಪ್ರಶ್ನಿಸಿದರು. ಮುಂದುವರಿದು ಈ ಹೇಳಿಕೆಗೆ ನೀವು ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.

 ಅಹಿಂಸಾ ಧರ್ಮದ ಮೇಲೆ ನಡೆಯುವ ನಮ್ಮ ಸಮಾಜಕ್ಕೆ ಇಂತಹ ಸಮಸ್ಯೆ ಯಾಕೆ? ನಾವು ಯಾವುದೇ ಸರ್ಕಾರದ, ಪಾರ್ಟಿ ಪರ ಇಲ್ಲ. ದೇಶದ ಪ್ರಧಾನಿಗಳ ಮೇಲೆ ಗೌರವ ಇದೆ. ದೇಶಕ್ಕೆ ನಿಮ್ಮಂಥ ಪ್ರಧಾನಿಗಳು ಇರಬೇಕು. ಆದರೆ ನಿಮ್ಮ ಪಕ್ಷ ಮಾಜಿ ಎಂಪಿ ಹೇಳಿಕೆಯನ್ನು  ನಾವು ಖಂಡನೆ ಮಾಡ್ತಿವಿ. ನಾವು ಈ ಕುರಿತು ಮೋದಿ, ಅಮಿತ್ ಶಾ ಹಾಗೂ ನಡ್ಡಾ ಅವರಿಗೆ ಪತ್ರ ಬರೆಯುತ್ತೆವೆ. ಮಹೇಶ ಗಿರಿ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಗುಜರಾತ್‌ನ ಜುನಾಡ ಕ್ಷೇತ್ರದಲ್ಲಿ ಬರುವ ಜೈನರ ಪವಿತ್ರ ಕ್ಷೇತ್ರ ಗಿರಿನಾರ. ಇಲ್ಲಿಗೆ ಬರುವ ಜೈನರ ಹತ್ಯೆಗೈಯಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಬಿಜೆಪಿ ಮಾಜಿ ಸಂಸದ ಹೇಳಿಕೆ ಬೆನ್ನಲ್ಲೇ ಜೈನ ಸಮುದಾಯ ತೀವ್ರವಾಗಿ ಖಂಡಿಸಿದೆ. 

'ಗಣಪತಿ ನಮ್ಮ ಸಂಸ್ಕೃತಿ ಅಲ್ಲ' ಮತ್ತೆ ಪುನರುಚ್ಚರಿಸಿದ ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳು!

ಬಿಜೆಪಿಯ ಮಾಜಿ ಸಂಸದರಾಗಿರುವ ಮಹೇಶ್ ಗಿರಿ ಅವರು 2023 ರ ಅಕ್ಟೋಬರ್ 28 ರಂದು ಸನಾತನ ಧರ್ಮದ ಹೆಸರಿನಲ್ಲಿ ಮಹೇಶ್ ಗಿರಿ ಸಾಧುಗಳ ಸಮಾವೇಶವನ್ನು ಆಯೋಜಿಸಿದ್ದರು ಈ ವೇಳೆ ಜೈನ ಸಮುದಾಯದ ವಿರುದ್ಧ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದರು. ಜೈನ ಸನ್ಯಾಸಿಗಳನ್ನು ಹತ್ಯೆ ಮಾಡಲು ಕರೆ ನೀಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ವರದಿಗಳ ಪ್ರಕಾರ, ಜೈನ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕೆ ಮತ್ತು ಹಿಂಸಾತ್ಮಕ ಭಾಷೆಯ ಮೂಲಕ ಬೆದರಿಕೆ ಹಾಕಿದ್ದಕ್ಕೆ ನ್ಯಾಯ ಶಾಸನಂ ಕಾನೂನು ಸಂಘಟನೆಯು ಈಗಾಗಲೇ ದೂರು ದಾಖಲಿಸಿ ಆರೋಪಿಯನ್ನು ಬಂಧಿಸಲು ಜೈನ ಸಮುದಾಯ ಒತ್ತಾಯಿಸಿದೆ. 

click me!