ಬೆಂಗಳೂರು ನಿಲ್ದಾಣಕ್ಕೆ ಬಂದ ಮುಂಬೈ ಉದ್ಯಾನ್ ಎಕ್ಸ್ ಪ್ರೆಸ್ ರೈಲಿಗೆ ಬೆಂಕಿ, ಹೊತ್ತಿ ಉರಿದ ಎಸಿ ಕೋಚ್

By Gowthami K  |  First Published Aug 19, 2023, 9:12 AM IST

ಮುಂಬೈನಿಂದ ಬೆಳಗ್ಗೆ ಬಂದು ನಿಂತಿದ್ದ ಉದ್ಯಾನ್ ಎಕ್ಸ್  ಪ್ರೆಸ್ ರೈಲಿಗೆ ಬೆಂಕಿ ತಗುಲಿದೆ. ಇಡೀ ನಿಲ್ದಾಣ ದಟ್ಟ ಹೊಗೆಯಿಂದ ಆವರಿಸಿದೆ.


ಬೆಂಗಳೂರು (ಆ.19): ಮುಂಬೈನಿಂದ ಬೆಳಗ್ಗೆ 6 ಗಂಟೆಗೆ ಬಂದು ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ನಿಂತಿದ್ದ ಉದ್ಯಾನ್ ಎಕ್ಸ್  ಪ್ರೆಸ್ ರೈಲಿಗೆ ಬೆಂಕಿ ತಗುಲಿದೆ. ಪ್ಲಾಟ್ ಫಾರಂ ನಂಬರ್ 3 ರಲ್ಲಿ ನಿಂತಿದ್ದ ಉದ್ಯಾನ್ ಎಕ್ಸ್ ಪ್ರೆಸ್ ರೈಲಿನಲ್ಲಿ ಈ ದುರಂತ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ರೈಲು ನಿಂತು ಪ್ರಯಾಣಿಕರೆಲ್ಲರು ಇಳಿದು ಹೋದ ಬಳಿಕ ಈ ಅವಘಡ ನಡೆದಿದೆ, ಸುಮಾರು 6.45 ರ ಸಮಯದಲ್ಲಿ ಟ್ರೈನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪ್ರಾಥಮಿಕ ತನಿಖೆಯ ಪ್ರಕಾರ ರೈಲಿನ ಇಂಜಿನ್‌ನಲ್ಲಿನ ತಾಂತ್ರಿಕ ದೋಷದಿಂದ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.  ರೈಲಿಗೆ ಬೆಂಕಿ ತಲುಗಲಿದ ಪರಿಣಾಮ ಎಸಿ‌3 ಟಯರ್ ಹಾಗೂ ಎಸಿ2 ಟಯರ್ ಭೋಗಿಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿವೆ.

ಘಟನಾ ಸ್ಥಳಕ್ಕೆ ರೈಲ್ವೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಅಗ್ನಿಶಾಮಕ ಸಿಬ್ಬಂದಿ ತಕ್ಷಣವೇ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಘಟನೆಯ ತೀವ್ರತೆಗೆ  ಮೆಜೆಸ್ಟಿಕ್ ಸುತ್ತಮುತ್ತ ದಟ್ಟ ಹೊಗೆ ಆವರಿಸಿದೆ.  ನಾಲ್ಕೈದು ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಘಟನೆ ಪರಿಣಾಮ ಇಡೀ ರೈಲ್ವೇ ನಿಲ್ದಾಣ ಸಂಪೂರ್ಣ ದಟ್ಟ ಹೊಗೆಯಿಂದ ಕಾಣದಂತಾಗಿದೆ.

Tap to resize

Latest Videos

undefined

ಕಾರ್ಗಿಲ್‌ನಲ್ಲಿ ಭೀಕರ ಸ್ಫೋಟ , 3 ಸಾವು 11 ಮಂದಿ ಗಂಭೀರ

ರೈಲು ನಿಲ್ದಾಣದಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಕೆಲವು ರೈಲುಗಳ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಉದ್ಯಾನ ಎಕ್ಸ್‌ಪ್ರೆಸ್‌ ನಿಂತಿದ್ದ ಪಕ್ಕದ ಟ್ರಾಕ್ ನಲ್ಲಿ ಯಾವುದೇ ರೈಲು ಇಲ್ಲದ ಕಾರಣ ಸಂಭವಿಸಬಹುದಾದ ದೊಡ್ಡ ದುರಂತ ತಪ್ಪಿದೆ. ಅವಘಡ ಸಂಭವಿಸಿದ ಸ್ಥಳಕ್ಕೆ ರೈಲ್ವೆ ಎಸ್ಪಿ ಸೌಮ್ಯಲತಾ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ನಿನ್ನೆ ರಾತ್ರಿ ಮುಂಬೈನಿಂದ ಉದ್ಯಾನ್ ಎಕ್ಸ್ ಪ್ರೆಸ್  ಹೊರಟಿತ್ತು. ಬೆಳಗ್ಗೆ 5.45 ಕ್ಕೆ  ಬೆಂಗಳೂರಿಗೆ ಬಂದು ತಲುಪಿತ್ತು. ರೈಲಿನಲ್ಲಿದ್ದ ಕಿಡಿಗೇಡಿಯೊಬ್ಬನಿಂದ ಕೃತ್ಯದಿಂದ ಈ ದುರಂತ ನಡೆದಿದೆ ಎಂದು ಕೂಡ ಹೇಳಲಾಗುತ್ತಿದೆ. ಕಿಡಿಗೇಡಿ ಬೆಂಕಿ ಕಡ್ಡಿ ಹಚ್ಚಿ  ಮೊದಲು ಬೆಡ್ ಶಿಟ್ ಗೆ ಬೆಂಕಿ ಹೊತ್ತಿಕೊಂಡಿತ್ತು. ಬಳಿಕ ಉದ್ಯಾನ್ ಎಕ್ಸ್ ಪ್ರೆಸ್ ನ ಎಸಿ ಕೋಚ್ ಗೆ ತಗುಲಿತ್ತು ಎಂದು ಕೂಡ ಹೇಳಲಾಗುತ್ತಿದೆ.

13 ದಿನ ಬಳಿಕ ಮತ್ತೆ ಮಣಿಪುರದಲ್ಲಿ ಹಿಂಸೆ: ಕೈ ಕಾಲು ಕತ್ತರಿಸಿ ಮೂವರು ಯುವಕರ ಭೀಕರ ಕೊಲೆ

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ರೈಲ್ವೆ ಎಸ್ ಪಿ ಸೌಮ್ಯ ಲತಾ, 6. 30 ಸುಮಾರಿಗೆ ಈ ಟ್ರೈನ್ ಇಲ್ಲಿ ಬಂದು ನಿಂತಿದೆ. 7.30 ರಿಂದ  7.45 ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಅಗ್ನಿ ಶಾಮಕ ಸಿಬ್ಬಂದಿಳು ಸ್ಥಳಕ್ಕೆ ಆಗಮಿಸಿ ಕಾರ್ಯಚಾರಣೆ ನಡೆಸಿದ್ದಾರೆ. ಎರಡು ಭೋಗಿಗೆ ಬೆಂಕಿ ಹತ್ತಿದೆ. ಮೂರನೇ ಭೋಗಿಗೆ ಬೆಂಕಿ ಹತ್ತಿದಿಯೋ ಇಲ್ವೋ ಎಂದು ನೋಡಲು ಗಾಜುಗಳನ್ನು ಡ್ಯಾಮೆಜ್ ಮಾಡಲಾಗಿದೆ. ಯಾಕೆ ಬೆಂಕಿ‌ ಕಾಣಿಸಿಕೊಳ್ತು ಎಂದು ಹೇಳಲು ಇನ್ನು ಸಮಯ ಬೇಕು. ಪ್ರಾರ್ಥಮಿಕ ವರದಿ ಪ್ರಕಾರ ಶಾರ್ಟ್ ಸೆರ್ಕ್ಯೂಟ್ ಎಂದು ಹೇಳಲಾಗುತ್ತಿದೆ. ಯಾವ ಪ್ರಯಾಣಿಕರಿಗೂ ಯಾವುದೆ ಅನಾಹುತ ಆಗಿಲ್ಲ ಎಂದಿದ್ದಾರೆ.

click me!