ಇಂದಿನಿಂದ ಬೆಂಗಳೂರಿನಲ್ಲಿ ಮೆಗಾ ಇವಿ ಎಕ್ಸ್‌ಪೋ; ಎಲೆಕ್ಟ್ರಿಕ್ ವಾಹನ ಖರೀದಿಗೆ ಪ್ಲಾನ್ ಮಾಡಿದ್ದೀರಾ? ಇಲ್ಲಿ ನೋಂದಾಯಿಸಿ!

By Ravi Janekal  |  First Published Aug 25, 2023, 5:57 PM IST

ಬೆಂಗಳೂರಿನ ಅರಮನೆ‌‌ ಮೈದಾನದ ಗಾಯತ್ರಿ ವಿಹಾರ್ ನಲ್ಲಿ  ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಇವಿ ಹಾಗೂ ಆರ್‌ಇ ಎಕ್ಸ್ ಪೋಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಶಾಂತ ಎ ತಿಮ್ಮಯ್ಯ ಚಾಲನೆ ನೀಡಿದರು.


ಬೆಂಗಳೂರು (ಆ.25): ಬೆಂಗಳೂರಿನ ಅರಮನೆ‌‌ ಮೈದಾನದ ಗಾಯತ್ರಿ ವಿಹಾರ್ ನಲ್ಲಿ  ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಇವಿ ಹಾಗೂ ಆರ್‌ಇ ಎಕ್ಸ್ ಪೋಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಶಾಂತ ಎ ತಿಮ್ಮಯ್ಯ ಚಾಲನೆ ನೀಡಿದರು.

ಕನ್ನಡ ಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಸಹಭಾಗಿತ್ವದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ  60ಕ್ಕೂ ಹೆಚ್ಚಿನ ಕಂಪನಿಗಳು ಭಾಗಿಯಾಗಲಿದ್ದು, ಪರಿಸರ ಸ್ನೇಹಿ, ಇಂಧನ ಮಿತವ್ಯಯಕಾರಿ ವಾಹನಗಳ ಲೋಕ ಅನಾವರಣಗೊಳ್ಳಲಿದೆ. ಎಲೆಕ್ಟ್ರಿಕ್ ವಾಹನ(electric vehicle market), ಮೋಟರ್ ಸೈಕಲ್, ಎಲೆಕ್ಟ್ರಿಕ್ ಬೈಸಿಕಲ್, ಹೈಯರ್ ಎಂಡ್ ಕಾರ್, ಲಗೇಜ್ ಆಟೋ ಗಳ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದ್ದು, ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಬಯಸಿದವವರಿಗೆ ಹತ್ತು ಹಲವು ಆಯ್ಕೆಗಳು ಒಂದೇ ಸೂರಿನಡಿಯಲ್ಲಿ ಲಭ್ಯವಾಗಲಿವೆ.

Latest Videos

undefined

ಇವಿ ಎಕ್ಸ್‌ಪೋಗೆ ನೋಂದಾಯಿಸಲು ಇಲ್ಲಿ ಕ್ಲಿಕ್ ಮಾಡಿ

ಹೊಗೆ ಸೂಸುವ ವಾಹನಗಳಿಂದ ಪರಿಸರ ನಾಶ, ಇಂಧನ ಬೆಲೆ ಏರಿಕೆ ಹಿನ್ನೆಲೆ ಗ್ರಾಹಕರು ಎಲೆಕ್ಟ್ರಿಕ್ ವಾಹನಗಳತ್ತ ಹೆಚ್ಚು ಒಲವು ತೋರಿದ್ದಾರೆ. ಹೀಗಾಗಿ ಕಂಪನಿಗಳು ಸಹ ಇಂಧನ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳನ್ನು ಸಂಶೋಧಿಸಿ ಹೊಸ ರೀತಿಯ ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಈ ಎಲ್ಲ ಕಂಪನಿಯ ಎಲೆಕ್ಟ್ರಿಕ್ ವಾಹನಗಳು ಗ್ರಾಹಕರಿಗೆ ಲಭ್ಯವಾಗುವ ನಿಟ್ಟಿನಲ್ಲಿ ಇವಿ ಹಾಗೂ ಆರ್‌ಇ
ಎಕ್ಸ್‌ಪೋಗೆ ಚಾಲನೆ ನೀಡಲಾಗಿದೆ. ಇಂದು ನಡೆದ ಕಾರ್ಯಕ್ರಮದಲ್ಲಿ ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕರಾದ ರವಿ ಹೆಗ್ಡೆ ಹಾಗೂ ಏಷ್ಯಾ ನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕರಾದ ಅಜಿತ್ ಹನುಮಕನವರ್ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಶಾಂತ ಎ ತಿಮ್ಮಯ್ಯ ಚಾಲನೆ ನೀಡಿದರು.

click me!