ಹುಬ್ಬಳ್ಳಿ ಧಾರವಾಡ: ಕರ್ನಾಟಕ ವಿವಿ ಕ್ಯಾಂಪಸ್‌ನಲ್ಲಿ ಯುವತಿಯರಿಗೆ ಪ್ರಾಣ ಸಂಕಟ, ಪುಂಡರಿಗೆ ಚೆಲ್ಲಾಟ

By Suvarna News  |  First Published May 23, 2024, 4:24 PM IST

ನೇಹಾ, ಅಂಜಲಿ ಕೊಲೆಗಳಾದ್ರೂ ನಿಲ್ಲುತ್ತಿಲ್ಲ ಅವಳಿ ನಗರದಲ್ಲಿ ಹಲ್ಲೆ ಪ್ರಕರಣಗಳು. ಹುಬ್ಬಳ್ಳಿಯಲ್ಲಿ ಮೀತಿ ಮೀರಿದ ಪುಂಡರ ಹಾವಳಿ. ಪೊಲೀಸರಿಗೂ ಹೆದರುತ್ತಿಲ್ಲ, ಕಾನೂನಿಗೂ ಬಗ್ಗುತ್ತಿಲ್ಲ.  ದಿನನಿತ್ಯ  ಹಲ್ಲೆ ದರೋಡೆ ಕೊಲೆ ನಡೆಯುತ್ತಲೇ ಇವೆ. ಇದೆಲ್ಲ ನೋಡ್ತಾ ಇದ್ರೆ ಹುಬ್ಬಳ್ಳಿ-ಧಾರವಾಡ ಸಿಟಿ ರೌಡಿಗಳ ಸಿಟಿ ಆಗ್ತಾ ಇದೆಯಾ ಎಂಬ ಅನುಮಾನ ಬರುತ್ತಿದೆ.


ಧಾರವಾಡ (ಮೇ.23): ನೇಹಾ, ಅಂಜಲಿ ಕೊಲೆಗಳಾದ್ರೂ ನಿಲ್ಲುತ್ತಿಲ್ಲ ಅವಳಿನಗರದಲ್ಲಿ ಹಲ್ಲೆ ಪ್ರಕರಣಗಳು. ಹುಬ್ಬಳ್ಳಿಯಲ್ಲಿ ಮೀತಿ ಮೀರಿದ ಪುಂಡರ ಹಾವಳಿ. ಪೊಲೀಸರಿಗೂ ಹೆದರುತ್ತಿಲ್ಲ, ಕಾನೂನಿಗೂ ಬಗ್ಗುತ್ತಿಲ್ಲ.  ದಿನನಿತ್ಯ  ಹಲ್ಲೆ ದರೋಡೆ ಕೊಲೆ ನಡೆಯುತ್ತಲೇ ಇವೆ. ಇದೆಲ್ಲ ನೋಡ್ತಾ ಇದ್ರೆ ಹುಬ್ಬಳ್ಳಿ-ಧಾರವಾಡ ಸಿಟಿ ರೌಡಿಗಳ ಸಿಟಿ ಆಗ್ತಾ ಇದೆಯಾ ಎಂಬ ಅನುಮಾನ ಬರುತ್ತಿದೆ.

ಹಾಡಹಗಲೇ ಕ್ಯಾಂಪಸ್‌ ಗೆ ನುಗ್ಗಿ ವಿದ್ಯಾರ್ಥಿನಿಯನ್ನ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಅದಾಗಿ ತಿಂಗಳೊಪ್ಪೊತ್ತಿಗೆ ಅಂಜಲಿಯ ಕೊಲೆ ನಡೆದುಹೋಯ್ತು. ಅಷ್ಟಾದರೂ ಎಚ್ಚೆತ್ತುಕೊಳ್ಳದ ಪೊಲೀಸ್ ಇಲಾಖೆ. ಇದೀಗ ಧಾರವಾಡದ ಕವಿವಿಯ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಯ ಮೇಲೆ ಯುವಕನೋರ್ವ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Tap to resize

Latest Videos

Dharwad: 3 ಲಕ್ಷ ಬಡ್ಡಿ ಸಮೇತ ಪರಿಹಾರ ನೀಡುವಂತೆ ನ್ಯೂ ಇಂಡಿಯಾ ಅಶೂರೆನ್ಸ್ ಕಂಪನಿಗೆ ಆಯೋಗ ಆದೇಶ!

ಮೇ 14 ರಂದು ಕವಿವಿಯಲ್ಲಿ ರಾಣಿ ಚನ್ನಮ್ಮ‌ ವಸತಿ ನಿಲಯದಿಂದ ಗ್ರಂಥಾಲಯಕ್ಕೆ ಹೋಗುವಾಗ ಕಿಡಿಗೇಡಿಯೊಬ್ಬ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಕಾಲೇಜು ಕ್ಯಾಂಪಸ್‌ನಲ್ಲೇ ಯುವತಿಯನ್ನ ಅಡ್ಡಗಟ್ಟಿ ಹಲ್ಲೆ ನಡೆಸಿದ ಘಟನೆ ಬಳಿಕ ವಿದ್ಯಾರ್ಥಿನಿ ಜೀವಭಯದಿಂದ ಎಬಿವಿಪಿ ಸಂಘಟನೆಗೆ ಕರೆ ಮಾಡಿದ ತನಗಾದ ನೋವನ್ನು ತೋಡಿಕೊಂಡಿದ್ದಾಳೆ.

ನಂತರ ಎಬಿವಿಪಿ ಸಂಘಟನೆಯ ನೆರವಿನೊಂದಿಗೆ ಮೇ.21ರಂದು ಉಪನಗರ ಪೊಲೀಸ್  ಠಾಣೆಗೆ ತೆರಳಿ ವಿದ್ಯಾರ್ಥಿನಿ ದೂರು ನೀಡಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಕಿಡಿಗೇಡಿಯ ಪತ್ತೆಗೆ ಬಲೆ ಬೀಸಿದ್ದಾರೆ.

ಅಂಜಲಿ ಹತ್ಯೆ ಪ್ರಕರಣ: ನಮ್ಮ ಸರ್ಕಾರದಲ್ಲಿ ಎನ್‌ಕೌಂಟರ್ ಆಗಿದ್ದರೆ ಇಂದು ಇಂಥ ಪ್ರಕರಣ ನಡೆಯುತ್ತಿರಲಿಲ್ಲ: ಯತ್ನಾಳ್

ಕವಿವಿ ಕ್ಯಾಂಪಸ್‌ನಲ್ಲಿಲ್ಲ ಸಿಸಿಟಿವಿ!
ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಬಳಿಕವೂ ಎಚ್ಚೆತ್ತುಕೊಳ್ಳದ ಕವಿವಿ. ಕ್ಯಾಂಪಸ್‌ನೊಳಗೆ ಆಯಾಕಟ್ಟಿನ ಸ್ಥಳದಲ್ಲಿ ಸಿಸಿಟಿವಿ ಅಳವಡಿಸದೆ ನಿರ್ಲಕ್ಷ್ಯ. ಸಿಸಿಟಿವಿ ಇಲ್ಲದ್ದು ಗಮನಿಸಿಯೇ ಯುವತಿಯನ್ನ ಅಡ್ಡಗಟ್ಟಿ ಹಲ್ಲೆ ಮಾಡಿರುವ ಯುವಕ. ಇದೀಗ ಆರೋಪಿಯ ಪತ್ತೆಗೆ ಕ್ಯಾಂಪಸ್‌ನೊಳಗೆ ಸಿಸಿಟಿವಿ ಇಲ್ಲದಿರುವುದು ಅಡ್ಡಿಯಾಗಿದೆ. 

ಆಡಳಿತ ಮಂಡಳಿ ನಿರ್ಲಕ್ಷ್ಯ:
ಮೇ.14ರಂದು ಬೈಕ್‌ನಲ್ಲಿ ಕ್ಯಾಂಪಸ್‌ನೊಳಗೆ ಬಂದಿದ್ದ ಕಿಡಿಗೇಡಿ. ಕ್ಯಾಂಪಸ್‌ನಲ್ಲಿ ಸಿಸಿಟಿವಿ ಇಲ್ಲದಿರುವುದು ಗಮನಿಸಿ ಹಲವೆಡೆ ಕಳ್ಳತನವೂ ಮಾಡಿರುವ ಬಗ್ಗೆ ಅನುಮಾನ. ಹಾಡಹಗಲೇ ಕ್ಯಾಂಪಸ್‌ನಲ್ಲಿ ಓಡಾಡ್ತಿದ್ದ ವಿದ್ಯಾರ್ಥಿನಿಯರನ್ನ ಟಾರ್ಗೆಟ್ ಮಾಡಿ ಹಲ್ಲೆ ನಡೆಸುವುದು ಚುಡಾಯಿಸುವುದು ಮಾಡುತ್ತಿದ್ದ ದುರುಳ. ಇದೀಗ ವಿದ್ಯಾರ್ಥಿ ಭುಜಕ್ಕೆ ಹೊಡೆದು ಹೋಗಿರುವ ಕಿರಾತಕ. ಇಷ್ಟಾದರೂ ಕವಿವಿ ಆಡಳಿತ ಮಂಡಳಿ ಯಾವುದೇ ದೂರು ದಾಖಲಿಸಿಲ್ಲ, ಕ್ರಮ ಕೈಗೊಂಡಿಲ್ಲ. ಹೀಗಾಗಿ ವಿದ್ಯಾರ್ಥಿನಿಯರೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

click me!