ಬೆಳಗಾವಿಯ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಲಾಗುವುದು ಎಂದು ಸಿಎಂ ಸಿದ್ಧರಾಮಯ್ಯ ಸದನಕ್ಕೆ ಮಾಹಿತಿ ನೀಡಿದ್ದಾರೆ.
ಬೆಂಗಳೂರು (ಜು.19): ಅತ್ಯಂತ ದಾರುಣವಾಗಿ ಬೆಳಗಾವಿಯ ಜಿಲ್ಲೆಯ ನಂದಿಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜ ಹತ್ಯೆ ಪ್ರಕರಣವನ್ನು ಸಿಐಡಿಗೆ ವಹಿಸುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸದನಕ್ಕೆ ತಿಳಿಸಿದ್ದಾರೆ. ಈ ಬಗ್ಗೆ ಬುಧವಾರ ಅವರು ಮಾಹಿತಿ ನೀಡಿದರು. ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿಯಲ್ಲಿ ಜೈನಮುನಿ ಹತ್ಯೆ ಪ್ರಕರಣ ಅತೀ ಸೂಕ್ಷ್ಮವಾಗಿರುವುದರಿಂದ ಸಿಐಡಿಗೆ ಹಸ್ತಾಂತರ ಮಾಡಲಾಗುವುದು ಎಂದು ತಿಳಿಸಿದರು. ಬಿಜೆಪಿ ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಬಿಜೆಪಿ ಹೋರಾಟ ಮಾಡಿತ್ತು. ಆದರೆ, ರಾಜ್ಯ ಪೊಲೀಸರು ತನಿಖೆಗೆ ಸರ್ಮಥರಿದ್ದಾರೆ. ಅವರಿಂದಗೇಲ ತನಿಖೆ ಮಾಡಿಸುವುದಾಗಿ ಸರ್ಕಾರ ತಿಳಿಸಿತ್ತು. ಈ ಕುರಿತಂತೆ ಸಿಎಂ ಆಫ್ ಕರ್ನಾಟಕ ಟ್ವಿಟರ್‌ನಲ್ಲೂ ಮಾಹಿತಿ ನೀಡಲಾಗಿದೆ. 'ಜೈನಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣ ಸೂಕ್ಷ್ಮವಾಗಿರುವುದರಿಂದ, ಸಾರ್ವಜನಿಕರ ಕೋರಿಕೆಯ ಮೇರೆಗೆ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಲಾಗುವುದು' ಎಂದು ಪೋಸ್ಟ್ ಮಾಡಲಾಗಿದೆ.
ಜುಲೈ 6ರ ಬೆಳಗ್ಗೆ ಕಾಮಕುಮಾರ ನಂದಿ ಮಹಾರಾಜರು ತಮ್ಮ ಜೈನಮಠದಿಂದ ನಾಪತ್ತೆಯಾಗಿದ್ದರು. ಇದರಿಂದ ಆತಂಕ ವ್ಯಕ್ತಪಡಿಸಿದ್ದ ಭಕ್ತರು ದೂರು ನೀಡಿದ್ದರು. ಮಠದ ಎಲ್ಲಾ ಕಡೆ ಹುಡಿಕಿದರೂ ಸ್ವಾಮೀಜಿ ಸಿಕ್ಕಿರಲಿಲ್ಲ ಎಂದು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಆ ಬೆನ್ನಲ್ಲಿಯೇ ಪೊಲೀಸರು ತನಿಖೆ ಆರಂಭ ಮಾಡಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದ ಪೊಲೀಸರು ಶಂಕಿತ ಆರೋಪಿಗಳನ್ನು ಬಂಧಿಸಿ ವಿಚಾರಣೆ ಒಳಪಡಿಸಿದ್ದಾಗ ಆಘಾತಕಾರಿ ಮಾಹಿತಿ ಗೊತ್ತಾಗಿತ್ತು. ಆರೋಪಿಗಳ ರಾಯಬಾಗ ತಾಲೂಕಿನ ಕಟಕಬಾವಿ ಗ್ರಾಮದ ಹೊರವಲಯದ ಬೋರ್‌ವೆಲ್‌ನಲ್ಲಿ ಜೈನ ಮುನಿಗಳ ಶವ ಎಸೆದಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ಕುರಿತಾಗಿ ಚಿಕ್ಕೋಡಿ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಹಲವು ಪ್ರಮುಖವಾದ ವಿಚಾರ ಬಯಲಾಗಿತ್ತು. ಸ್ವಾಮೀಜಿಯ ಕೊಲೆಯಲ್ಲಿ ಹಲವರು ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು. ನಾರಾಯಣ ಮಾಳಿಯೊಂದಿಗೆ ಇನ್ನೊಬ್ಬ ಆರೋಪಿ ಸೇರಿ ಜೈನ ಮುನಿಗಳನ್ನು ತುಂಡು ತುಂಡಾಗಿ ಕತ್ತರಿಸಲಾಗಿತ್ತು. ಸ್ವಾಮೀಜಿಗೆ ಆಪ್ತನಾಗಿದ್ದ ನಾರಾಯಣ ಮಾಳಿ, ಹಸನ್ ಅಲಿಯಾಸ್ ಹುಸೇನ್ ದಲಾಯತ್ ಸೇರಿ ಜೈನಮುನಿಗಳ ಹತ್ಯೆ ಮಾಡಿದ್ದು ಬಯಲಾಗಿತ್ತು.
ವಿಧಾನಸೌಧದಲ್ಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಆರ್.ಅಶೋಕ್ ಅಸ್ವಸ್ಥ: ಆಸ್ಪತ್ರೆ ರವಾನೆ
ಜೈನಮುನಿಗಳ ಡೈರಿ ಪತ್ತೆ ಹಚ್ಚಿದ ಪೊಲೀಸರು: ಈ ಕೇಸ್‌ನಲ್ಲಿ ಪ್ರಮುಖವಾಗಿದ್ದ ಮುನಿಗಳ ಡೈರಿ ಕೊನೆಗೂ ಪೊಲೀಸರು ಪತ್ತೆ ಹಚ್ಚಿದ್ದಾರೆ. ಹಣಕಾಸಿನ ವ್ಯವಹಾರ ಸೇರಿದಂತೆ ಡೈರಿಯಲ್ಲಿ ಹಲವು ಮಾಹಿತಿಗಳಿದೆ. ಕಷ್ಟ ಕೇಳಿ ಆಶ್ರಮಕ್ಕೆ ಹೋಗಿದ್ದ 15 ಕ್ಕೂ ಅಧಿಕ ಭಕ್ತರಿಗೆ ಟ್ರಸ್ಟ್‌ನಿಂದ ಮುನಿಗಳು ನೆರವು ನೀಡಿದ್ದರು. ಯಾರಿಗೆಲ್ಲಾ ಹಣ ನೀಡಲಾಗಿದೆ ಎಂಬ ಸಂಗತಿಯನ್ನು ಡೈರಿಯಲ್ಲಿ ಮುನಿಗಳು ಬರೆದಿದ್ದರು. ಮುನಿಗಳಿಂದ ಹಣ ಪಡೆದಿದ್ದ 15 ಜನರ ವಿಚಾರಣೆಯನ್ನು ಪೊಲೀಸರು ನಡೆಸಿದ್ದಾರೆ. ಹಣ ಪಡೆದು ಮರಳಿಸದ ಇನ್ನೂ ಹಲವರಿಗೆ ಪೊಲೀಸರ ಶೋಧ ಕಾರ್ಯ ನಡೆಸಿದ್ದಾರೆ. ಮುನಿಗಳಿಂದ ಹಣ ಪಡೆದ ಜನರಿಗೆ ಈಗ ಭಯ ಶುರುವಾಗಿದೆ. ಈ ಎಲ್ಲರ ವಿಚಾರಣೆಯಿಂದ ಬಯಲಾಗುತ್ತಾ ಮುನಿಗಳ ಹತ್ಯೆಯ ಸೀಕ್ರೆಟ್ ಬಯಲಾಗುತ್ತಾ ಎನ್ನುವುದನ್ನು ನೋಡಬೇಕಿದೆ. ಆರೋಪಿಗಳಿಂದ ಡೈರಿ ಜಪ್ತಿ ಮಾಡಿಕೊಂಡ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಉನ್ನತ ಪೊಲೀಸ್ ಮೂಲಗಳ ಮಾಹಿತಿ ನೀಡಿದೆ.
Breaking: ಕರ್ನಾಟಕ ವಿಧಾನಸಭೆಯಿಂದ ಬಿಜೆಪಿಯ 10 ಶಾಸಕರು ಅಮಾನತು