ಬೆಕ್ಕಿನ ಮೇಲೆ ಫೈರಿಂಗ್| ಬೆಂಗಳೂರು ಹೊರವಲಯದ ಸರ್ಜಾಪುರದಲ್ಲಿ ವಿಚಿತ್ರ ಘಟನೆ| ಡಬ್ಬಲ್ ಬ್ಯಾರಲ್ ಗನ್ ನಿಂದ ಶೂಟ್ ಮಾಡಿ ಹತ್ಯೆ ಮಾಡಿರುವ ಅಪರಿಚಿತ
ಬೆಂಗಳೂರು(ಆ.23): ಮನುಷ್ಯರ ಮೇಲೆ ಫೈರಿಂಗ್ ನಡೆಯುವುದು ಕೆಳಿರುತ್ತೇವೆ. ಆದರೀಗ ಬೆಕ್ಕಿನ ಮೇಲೆ ಫೈರಿಂಗ್ ನಡೆಸಿ ಹತ್ಯೆಗೈದಿರುವ ವಿಚಿತ್ರ ಘಟನೆ ಬೆಂಗಳೂರು ಹೊರವಲಯದ ಸರ್ಜಾಪುರದಲ್ಲಿ ನಡೆದಿದೆ.
ಹೌದು ಭಾನುವಾರ ಮುಂಜಾನೆ ಅಪರಿಚಿತ ವ್ಯಕ್ತಿಯೊಬ್ಬ ಸರ್ಜಾಪುರ ಮತ್ತು ಬಾಗಲೂರು ರಸ್ತೆಯಲ್ಲಿರುವ ಸ್ಕೈ ಲೈಟ್ ಲೇ ಔಟ್ ನಲ್ಲಿದ್ದ ಬೆಕ್ಕನ್ನು ಫೈರಿಂಗ್ ನಡೆಸಿ ಕೊಂದಿದ್ದಾನೆ. ಇದು ಸರ್ಜಾಪುರದ ವಿಲ್ಲಾವೊಂದರ ನಿವಾಸಿ ಶೀಲ ಅನ್ನೋರಿಗೆ ಸೇರಿದ್ದ ಬೆಕ್ಕು ಎಂದು ತಿಳಿದು ಬಂದಿದೆ.
ಬೆಳಗಿನ ಜಾವ ಡಬ್ಬಲ್ ಬ್ಯಾರಲ್ ಗನ್ ನಿಂದ ಶೂಟ್ ಮಾಡಿ ಬೆಕ್ಕನ್ನು ಹತ್ಯೆಗೈದಿದ್ದು, ಘಟನೆಯಿಂದ ವಿಲ್ಲಾ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ. ಈ ಬೆಕ್ಕನ್ನು ಸಾಕಿದ್ದ ಮಹಿಳೆಯ ಆಕ್ರೋಶ ವ್ಯಕ್ತಪಡಿಸಿದ್ದು, ಈ ಸಂಬಂಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದಾರೆ.