ಪರಿಹಾರ ಹೆಚ್ಚಿಸಿದ ಬಳಿಕ ರೈತರ ಆತ್ಮಹತ್ಯೆ ಏರಿಕೆ: ಸಚಿವ ಶಿವಾ​ನಂದ ಪಾಟೀ​ಲ್‌ ವಿವಾದ

By Kannadaprabha News  |  First Published Sep 6, 2023, 4:30 AM IST

ತಮ್ಮ ಹೇಳಿ​ಕೆ​ಯನ್ನು ತಪ್ಪಾಗಿ ಅರ್ಥೈಸಿಕೊಳ್ಳ​ಲಾ​ಗಿ​ದೆ. ಹೆಚ್ಚಿನ ಪರಿಹಾರ ಸಿಗುತ್ತದೆ ಎಂಬ ಕಾರ​ಣಕ್ಕೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ನಾನು ಹೇಳಿಯೇ ಇಲ್ಲ: ಸಚಿವ ಶಿವಾನಂದ ಪಾಟೀಲ್‌ 


ಹಾವೇರಿ(ಸೆ.06): ಪರಿ​ಹಾ​ರದ ಆಸೆ​ಯಿಂದಾಗಿ ಈಗ ರೈತರ ಆತ್ಮ​ಹತ್ಯೆ ಪ್ರಕರಣ​ಗಳು ಹೆಚ್ಚಾ​ಗಿ ವರ​ದಿ​ಯಾ​ಗು​ತ್ತಿವೆ ಎಂದು ಸಕ್ಕರೆ ಸಚಿವ ಶಿವಾ​ನಂದ ಪಾಟೀಲ ಅವರು ನೀಡಿದ ಹೇಳಿಕೆ ಇದೀಗ ವಿವಾ​ದಕ್ಕೆ ಕಾರ​ಣ​ವಾ​ಗಿ​ದೆ. ಈ ಹೇಳಿ​ಕೆ​ಗಾಗಿ ಕ್ಷಮೆ ಕೋರ​ಬೇ​ಕೆಂದು ಕೋರಿ ರೈತ ಮುಖಂಡರು ಸಚಿ​ವ​ರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತ​ಪ​ಡಿ​ಸಿದ್ದು, ಇದರ ಬೆನ್ನಲ್ಲೇ ಶಿವಾ​ನಂದ ಪಾಟೀ​ಲ್‌ ಸ್ಪಷ್ಟನೆಯನ್ನೂ ನೀಡಿ​ದ್ದಾ​ರೆ.

ತಮ್ಮ ಹೇಳಿ​ಕೆ​ಯನ್ನು ತಪ್ಪಾಗಿ ಅರ್ಥೈಸಿಕೊಳ್ಳ​ಲಾ​ಗಿ​ದೆ. ಹೆಚ್ಚಿನ ಪರಿಹಾರ ಸಿಗುತ್ತದೆ ಎಂಬ ಕಾರ​ಣಕ್ಕೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ನಾನು ಹೇಳಿಯೇ ಇಲ್ಲ ಎಂದು ಸಚಿವ ಶಿವಾನಂದ ಪಾಟೀಲ್‌ ತಿಳಿ​ಸಿ​ದ್ದಾ​ರೆ.

Tap to resize

Latest Videos

ಕಾಂಗ್ರೆಸ್‌ ಸರ್ಕಾರ ಸ್ಥಿರ, ಸುಭದ್ರ: ಸಚಿವ ಶಿವಾನಂದ ಪಾಟೀಲ

ಸಚಿ​ವರು ಹೇಳಿ​ದ್ದೇ​ನು?:

ರೈತರ ಆತ್ಮಹತ್ಯೆ ಪ್ರಕರಣಗಳು 2015ಕ್ಕೂ ಮೊದಲು ಕಡಿಮೆಯಿದ್ದವು. ಆದರೆ ಸರ್ಕಾರ .5 ಲಕ್ಷ ಪರಿಹಾರ ಕೊಡಲು ಆರಂಭಿಸಿದ ನಂತರ ಪ್ರಕರಣಗಳು ವರದಿಯಾಗುವುದು ಹೆಚ್ಚಾಗುತ್ತಿದೆ. ವೀರೇಶ್‌ ಸಮಿತಿ ಬರುವ ಮುನ್ನ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆ ಇದ್ದವು. ಮೊದಲು .2 ಲಕ್ಷ ಪರಿಹಾರ ಕೊಡಲಾಗುತ್ತಿತ್ತು. ಪರಿಹಾರ ಹೆಚ್ಚಳವಾದ ನಂತರ ಹೃದಯಾಘಾತ, ಪ್ರೇಮ ವೈಫಲ್ಯ, ಕುಡಿದು ಆತ್ಮಹತ್ಯೆ ಸೇರಿ ಎಲ್ಲವನ್ನೂ ರೈತ ಆತ್ಮಹತ್ಯೆ ಪ್ರಕರಣ ಎಂದು ದಾಖಲಿಸಲಾಗುತ್ತಿದೆ. ಆತ್ಮಹತ್ಯೆ ಎಂದು ಎಫ್‌ಐಆರ್‌ ದಾಖಲಾದ ಎಲ್ಲ ಪ್ರಕರಣಗಳು ರೈತ ಆತ್ಮಹತ್ಯೆಗಳಲ್ಲ.

ರಾಜ್ಯದಲ್ಲಿ 2020ರಲ್ಲಿ 500, 2021ರಲ್ಲಿ 595, 2022ರಲ್ಲಿ 651 ಹಾಗೂ 2023ರಲ್ಲಿ 412 ರೈತ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ನಿಜವಾದ ರೈತ ಆತ್ಮಹತ್ಯೆ ಪ್ರಕರಣಗಳಿಗೆ ಪರಿಹಾರ ಕೊಡಲು ಸರ್ಕಾರ ಸಿದ್ಧವಿದೆ. ರೈತ ಆತ್ಮಹತ್ಯೆ ಎಂದು ಎ.ಸಿ. ಸಮಿ​ತಿ​ಯಲ್ಲಿ ತೀರ್ಮಾನ ಮಾಡಬೇಕಾಗುತ್ತದೆ. ಎಫ್‌ಎಸ್‌ಎಲ್‌ ವರದಿ ಬಂದ ಮೇಲೆಯೇ ಅದು ದೃಢಪಡುತ್ತದೆ ಎಂದು ಸಚಿವರು ಮಂಗ​ಳ​ವಾರ ಪತ್ರಿ​ಕಾ​ಗೋ​ಷ್ಠಿ​ಯಲ್ಲಿ ಹೇಳಿದ್ದರು.

ರೈತರಿಂದ ಮುತ್ತಿಗೆ:

ಸಚಿ​ವರ ಈ ಹೇಳಿ​ಕೆ​ಗೆ ತೀವ್ರ ಆಕ್ರೋಶ ವ್ಯಕ್ತ​ಪ​ಡಿ​ಸಿದ ರೈತ ಮುಖಂಡರು, ಹಾವೇರಿಯ ಗುರುಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭ ಮುಗಿಸಿ ಹೊರಬರುವಾಗ ಶಿವಾನಂದ ಪಾಟೀಲ ಅವರಿಗೆ ಮುತ್ತಿಗೆ ಹಾಕಿದರು. ನಿಮ್ಮ ಹೇಳಿಕೆಯನ್ನು ತಕ್ಷಣ ವಾಪಸ್‌ ಪಡೆದು ರೈತರಲ್ಲಿ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದರು.

ನಾನು ಆ ರೀತಿ ಹೇಳಿಲ್ಲ:

ತಮ್ಮ ಹೇಳಿಕೆ ವಿವಾ​ದಕ್ಕೆ ಕಾರ​ಣ​ವಾ​ಗು​ತ್ತಿ​ದ್ದಂತೆ ಎಚ್ಚೆ​ತ್ತ ಸಚಿವ ಶಿವಾ​ನಂದ ಪಾಟೀ​ಲ್‌, ತುರ್ತು ಪತ್ರಿಕಾಗೋಷ್ಠಿ ಕರೆದು ಸ್ಪಷ್ಟೀಕರಣ ನೀಡಿದರು. ಹೆಚ್ಚಿನ ಪರಿಹಾರ ಸಿಗುತ್ತೆ ಎಂಬ ಕಾರಣಕ್ಕೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಂದು ನಾನು ಹೇಳಿಯೇ ಇಲ್ಲ. ಈ ಬಗ್ಗೆ ಯಾರೂ ತಪ್ಪು ಗ್ರಹಿಕೆ ಮಾಡಿಕೊಳ್ಳುವುದು ಬೇಡ. ರೈತರ ಆತ್ಮ​ಹತ್ಯೆ ಪ್ರಕ​ರ​ಣ​ಗ​ಳಿಗೆ ಸಂಬಂಧಿ​ಸಿ​ದ ತಪ್ಪು ಮಾಹಿತಿಯಿಂದ ರೈತರು ಆತಂಕಕ್ಕೆ ಒಳಗಾಗುತ್ತಾರೆ. ಇದರ ಪರಿಣಾಮ ವ್ಯತಿರಿಕ್ತವಾಗುತ್ತದೆ ಎಂದ​ರು.

ಭರವಸೆಗಳ ಈಡೇರಿಕೆಗೆ ಕಾಂಗ್ರೆಸ್‌ ಆದ್ಯತೆ: ಸಚಿವ ಶಿವಾನಂದ ಪಾಟೀಲ

ಯಾವುದೇ ರೈತರು ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ. ಸಚಿವ ಶಿವಾನಂದ ಪಾಟೀಲ್‌ ಆತ್ಮಹತ್ಯೆ ಮಾಡಿಕೊಳ್ಳಲಿ. ರೈತ ಸಂಘದಿಂದ .50 ಲಕ್ಷ ಪರಿಹಾರ ಕೊಡುತ್ತೇವೆ. ಸಚಿ​ವರು ಈ ರೀತಿ ಲಘುವಾಗಿ ಹೇಳಿಕೆ ನೀಡಿದ್ದು ಖಂಡನೀಯ ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದ್ದಾರೆ.  

ಸಚಿವರು ಹೇಳಿದ್ದೇನು?

ರೈತರ ಆತ್ಮಹತ್ಯೆ ಪ್ರಕರಣಗಳು 2015ಕ್ಕೂ ಮೊದಲು ಕಡಿಮೆಯಿದ್ದವು. ಆದರೆ ಸರ್ಕಾರ .5 ಲಕ್ಷ ಪರಿಹಾರ ಕೊಡಲು ಆರಂಭಿಸಿದ ನಂತರ ಪ್ರಕರಣಗಳು ವರದಿಯಾಗುವುದು ಹೆಚ್ಚಾಗುತ್ತಿದೆ. ಹೃದಯಾಘಾತ, ಪ್ರೇಮ ವೈಫಲ್ಯ, ಕುಡಿದು ಆತ್ಮಹತ್ಯೆ ಸೇರಿ ಎಲ್ಲವನ್ನೂ ರೈತ ಆತ್ಮಹತ್ಯೆ ಪ್ರಕರಣ ಎಂದು ದಾಖಲಿಸಲಾಗುತ್ತಿದೆ. ಹೀಗೆ ಎಫ್‌ಐಆರ್‌ ಆದ ಎಲ್ಲ ಪ್ರಕರಣಗಳು ರೈತ ಆತ್ಮಹತ್ಯೆಗಳಲ್ಲ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್‌ ಹೇಳಿದ್ದಾರೆ. 

click me!