ಬಿಜೆಪಿ ಅವಧಿಯಲ್ಲಿನ ಅಕ್ರಮ: 340 ಕೋಟಿ ಕೋವಿಡ್‌ ವೆಚ್ಚಕ್ಕೆ ದಾಖಲೆಗಳೇ ಇಲ್ಲ!

Published : Nov 13, 2024, 07:10 AM IST
ಬಿಜೆಪಿ ಅವಧಿಯಲ್ಲಿನ ಅಕ್ರಮ: 340 ಕೋಟಿ ಕೋವಿಡ್‌ ವೆಚ್ಚಕ್ಕೆ ದಾಖಲೆಗಳೇ ಇಲ್ಲ!

ಸಾರಾಂಶ

ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ 1,747.42 ಕೋಟಿ ರು. ಅನುದಾನ ನೀಡಿತ್ತು. ಕೋವಿಡ್ ಪರೀಕ್ಷೆ, ಸಹಾಯವಾಣಿ, ಪಿಪಿಇ ಕಿಟ್ ಖರೀದಿ ಸೇರಿದಂತೆ ಮತ್ತಿತರ ಕಾರ್ಯಕ್ಕಾಗಿ ಆ ಮೊತ್ತವನ್ನು ವೆಚ್ಚ ಮಾಡಿರುವುದಾಗಿ ತನಿಖಾ ಆಯೋಗಕ್ಕೆ ಮಾಹಿತಿ ನೀಡಿದ ರಾಷ್ಟ್ರೀಯ ಆರೋಗ್ಯ ಮಿಷನ್‌ ಯೋಜನಾ ನಿರ್ದೇಶಕ ನ್ಯಾ. ಮೈಕಲ್ ಡಿ.ಕುನ್ಹಾ

ಬೆಂಗಳೂರು(ನ.13): ಬಿಜೆಪಿ ಅವಧಿಯಲ್ಲಿನ ಕೋವಿಡ್ ಅಕ್ರಮದ ಕುರಿತಂತೆ ನ್ಯಾ. ಮೈಕಲ್ ಡಿ.ಕುನ್ಹಾ ತನಿಖಾ ಆಯೋಗ ನೀಡಿರುವ ವರದಿಯ ಮತ್ತಷ್ಟು ಅಂಶಗಳು ಬಹಿರಂಗಗೊಂಡಿದ್ದು, ಕೋವಿಡ್ ನಿಯಂತ್ರಣಕ್ಕೆ ರಾಷ್ಟ್ರೀಯ ಆರೋಗ್ಯ ಯೋಜನೆಗೆ ಸರ್ಕಾರ ನೀಡಿದ್ದ ಅನುದಾನದಲ್ಲಿ 340 ಕೋಟಿ ರು. ವೆಚ್ಚದ ದಾಖಲೆಗಳನ್ನೇ ಮಂಗಮಾಯ ಮಾಡಲಾಗಿದೆ ಎಂಬ ಸಂಗತಿ ಬಯಲಾಗಿದೆ. 

ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ 1,747.42 ಕೋಟಿ ರು. ಅನುದಾನ ನೀಡಿತ್ತು. ಕೋವಿಡ್ ಪರೀಕ್ಷೆ, ಸಹಾಯವಾಣಿ, ಪಿಪಿಇ ಕಿಟ್ ಖರೀದಿ ಸೇರಿದಂತೆ ಮತ್ತಿತರ ಕಾರ್ಯಕ್ಕಾಗಿ ಆ ಮೊತ್ತವನ್ನು ವೆಚ್ಚ ಮಾಡಿರುವುದಾಗಿ ರಾಷ್ಟ್ರೀಯ ಆರೋಗ್ಯ ಮಿಷನ್‌ ಯೋಜನಾ ನಿರ್ದೇಶಕರು ನ್ಯಾ. ಮೈಕಲ್ ಡಿ.ಕುನ್ಹಾತನಿಖಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ.

ಕೋವಿಡ್‌ನಲ್ಲಿ ಹಗರಣ ಆಗಿದ್ದರೆ ತನಿಖೆ ಮಾಡಲಿ: ಪ್ರಹ್ಲಾದ್ ಜೋಶಿ

ಆದರೆ, 1,747.42 ಕೋಟಿ ರು. ಮೊತ್ತದಲ್ಲಿ 1,406.56 ಕೋಟಿ ರು. ವೆಚ್ಚದ ದಾಖಲೆಗಳು ಮಾತ್ರ ಲಭ್ಯವಾಗಿದ್ದು, ಉಳಿದಂತೆ 340.85 ಕೋಟಿ ರು. ವೆಚ್ಚದ ದಾಖಲೆಗಳೇ ದೊರೆತಿಲ್ಲ ಎಂಬುದನ್ನು ತನಿಖಾ ಆಯೋಗದ ವರದಿ ತಿಳಿಸಿದೆ. ಕೇಂದ್ರ ಸರ್ಕಾರ ಮೀಸಲಿಟ್ಟಿದ್ದ ಅನು ದಾನದ ವೆಚ್ಚದ ಲೆಕ್ಕಪತ್ರದಲ್ಲಿ ಭಾರೀ ವ್ಯತ್ಯಾ ಸವಾಗಿರುವುದನ್ನೂ ವರದಿ ಉಲ್ಲೇಖಿಸಿದೆ. 

ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು: 

ದಾಖಲೆಗಳನ್ನು ಪರಿಶೀಲಿಸಿದಾಗ ಕೊರೋನಾ ಸೋಂಕಿತರ ಪರೀಕ್ಷೆ ಹೊಣೆಯನ್ನು ಐಸಿಎಂಆರ್ ಮಾನ್ಯತೆ ಹೊಂದಿಲ್ಲದ 14 ಖಾಸಗಿ ಲ್ಯಾಬ್‌ಗಳಿಗೆ ನೀಡಲಾಗಿತ್ತು. ಈ 14 ಲ್ಯಾಬ್‌ಗಳಿಗೆ ನಿಯಮ ಬಾಹಿರವಾಗಿ 6.93 ಕೋಟಿ ರು. ಹಣ ನೀಡಲಾಗಿದೆ. ಅದರಲ್ಲೂ8 ಲ್ಯಾಬ್‌ಗಳೊಂದಿಗೆ ಯಾವುದೇ ಒಪ್ಪಂದ ಮಾಡಿಕೊಳ್ಳದೇ ಹಾಗೂ ಆಡಳಿತಾತ್ಮಕ ಅನುಮೋದನೆ ಪಡೆಯದೇ 4.28 ಕೋಟಿ ರು. ಪಾವತಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಜತೆಗೆ ಕೆಲ ಲ್ಯಾಬ್ ಗಳಿಗೆ ಕಾರ್ಯಾದೇಶವನ್ನು ನೀಡಿಲ್ಲ ಮತ್ತು ಕರಾರು ಮಾಡಿಕೊಂಡಿಲ್ಲ. ಹೀಗೆ ನಿಯಮ ಉಲ್ಲಂಘಿಸಿ ಹಣ ಪಾವತಿಸಿದ ಅಧಿಕಾರಿಗಳ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಆಯೋಗ ಶಿಫಾರಸು ಮಾಡಿದೆ. 

ಬಿಎಸ್‌ವೈ, ಶ್ರೀರಾಮುಲು ವಿರುದ್ಧ ಕೊರೋನಾ ಕೇಸ್‌ಗೆ ಸಿದ್ಧತೆ: ಶಿಫಾರಸಲ್ಲೇನಿದೆ?

ಜಾಗೃತಿ ಮೂಡಿಸುವಲ್ಲಿ ನಿಯಮ ಉಲ್ಲಂಘನೆ: 

ಕೊರೋನಾ ತಡೆಗೆ ಜಾಗೃತಿ ಮೂಡಿಸಲು ಪ್ರಚಾರಕ್ಕೆ 7.03 ಕೋಟಿ ರು. ವ್ಯಯಿಸಲಾಗಿದೆ. ಅದರಲ್ಲಿ ಚುಕ್ಕಿ ಟಾಕೀಸ್ ಸಂಸ್ಥೆಗೆ ನಿಯಮ ಬಾಹಿರವಾಗಿ 8.85 ಲಕ್ಷ ರು. ಪಾವತಿಸಲಾಗಿದೆ. ಅಲ್ಲದೆ, ಕೆಲ ಜಾಹೀರಾತು ಏಜೆನ್ಸಿಗಳಿಗೆ ಹಣ ಪಾವತಿಸಿದ್ದಕ್ಕೆ ಸೂಕ್ತ ದಾಖಲೆಗಳನ್ನೇ ಆರೋಗ್ಯ ಇಲಾಖೆ ನೀಡಿಲ್ಲ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಚುಕ್ಕಿ ಟಾಕೀಸ್ ಸಂಸ್ಥೆಯಿಂದ 8.85 ಲಕ್ಷ ರು. ವಸೂಲಿ ಮಾಡುವಂತೆ ತಿಳಿಸಲಾಗಿದೆ. ಅದರ ಜತೆಗೆ ಕೊರೋನಾಗೆ ಸಂಬಂಧಿಸಿದಂತೆ ನೆರವು ನೀಡಲು ಸ್ಥಾಪಿಸಲಾಗಿದ್ದ ಆಪ್ತಮಿತ್ರ ಸಹಾಯವಾಣಿಗೆ ಹಣ ಖರ್ಚು ಮಾಡಿರು ವುದಕ್ಕೂ ದಾಖಲೆಗಳಿಲ್ಲ ಎಂಬುದನ್ನು ತನಿಖಾ ಆಯೋಗ ತಿಳಿಸಿದೆ. 

ಆಪ್ತಮಿತ್ರ ಹೆಸರಿನಲ್ಲಿ ಜಾರಿಗೊಳಿಸಲಾಗಿದ್ದ ಸಹಾಯವಾಣಿಯನ್ನು 2 ಬಿಪಿಒ ಸಂಸ್ಥೆಗಳಿಗೆ ನೀಡಲಾಗಿತ್ತು. ಅದಕ್ಕಾಗಿ ಆ ಸಂಸ್ಥೆಗಳಿಗೆ 4.19 ಲಕ್ಷ ರು. ಹಣ ನೀಡಲಾಗಿದೆ ಎಂದು ತಿಳಿಸಲಾಗಿದೆ. ಆದರೆ, ಆ ಸಂಸ್ಥೆಗಳಿಗೇ ಹಣ ಪಾವತಿಸಲಾಗಿದೆಯೇ ಎಂಬ ಬಗ್ಗೆ ಸ್ಪಷ್ಟ ದಾಖಲೆಗಳಿಲ್ಲದಂತಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜ್ಯದಲ್ಲಿ ಅಂತರ್ಜಾತಿ ವಿವಾಹ ಹೆಚ್ಚಾಗಬೇಕು, ಆದ್ರೆ ಒಂದರಿಂದ 2 ಮಕ್ಕಳನ್ನ ಮಾಡಿಕೊಳ್ಳಿ; ಸಿಎಂ ಸಿದ್ದರಾಮಯ್ಯ
1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ