ಬೇಸಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಆಕಸ್ಮಿಕವಾಗಿ ಸಂಭವಿಸುವ ಕಾಡ್ಗಿಚ್ಚು ನಿಯಂತ್ರಿಸಲು ಅರಣ್ಯ ಇಲಾಖೆ 2000 ಕಿಲೋಮೀಟರ್‌ಗೂ ಹೆಚ್ಚು ಫೈರ್‌ಲೈನ್ ಎಳೆಯಲು ಮುಂದಾಗಿದೆ. ನಾಗರಹೊಳೆ ಅಭಯಾರಣ್ಯದ 840 ಚದರ ಕಿಲೋಮೀಟರ್ ಪ್ರದೇಶದಲ್ಲಿ ಅಗ್ನಿಶಾಮಕ ರೇಖೆಗಳನ್ನು ಎಳೆಯಲು ಹೆಚ್ಚುವರಿಯಾಗಿ 400 ಅರಣ್ಯ ವೀಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮಡಿಕೇರಿ (ಫೆ.16): ಬೇಸಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಆಕಸ್ಮಿಕವಾಗಿ ಸಂಭವಿಸುವ ಕಾಡ್ಗಿಚ್ಚು ನಿಯಂತ್ರಿಸಲು ಅರಣ್ಯ ಇಲಾಖೆ 2000 ಕಿಲೋಮೀಟರ್‌ಗೂ ಹೆಚ್ಚು ಫೈರ್‌ಲೈನ್ ಎಳೆಯಲು ಮುಂದಾಗಿದೆ.
ನಾಗರಹೊಳೆ ಅಭಯಾರಣ್ಯದ 840 ಚದರ ಕಿಲೋಮೀಟರ್ ಪ್ರದೇಶದಲ್ಲಿ ಅಗ್ನಿಶಾಮಕ ರೇಖೆಗಳನ್ನು ಎಳೆಯಲು ಹೆಚ್ಚುವರಿಯಾಗಿ 400 ಅರಣ್ಯ ವೀಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
undefined
ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಗುಡ್ಡದಲ್ಲಿ ಕಾಡ್ಗಿಚ್ಚು, ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶ
ಜೀಪ್‌ಗಳಲ್ಲಿ ಅಳವಡಿಸಲಾಗಿರುವ ಟ್ಯಾಂಕರ್‌ಗಳು, ಸ್ಪ್ರೇಯರ್‌ಗಳು ಮತ್ತು ಇತರ ಅಗತ್ಯ ಯಂತ್ರೋಪಕರಣಗಳನ್ನು ಒಳಗೊಂಡಂತೆ ಇಲಾಖೆಯು ಕಾಡ್ಗಿಚ್ಚನ್ನು ತಡೆಗಟ್ಟಲು ಸಕಲ ಸಿದ್ಧತೆ ಮಾಡಿಕೊಂಡಿದೆ.
ನಾಗರಹೊಳೆ ಬೆಲ್ಟ್‌ನ ಎಂಟು ಶ್ರೇಣಿಗಳಲ್ಲಿ, 2500 ಕಿ.ಮೀ ವರೆಗೆ ಫೈರ್ ಲೈನ್ ಗಳನ್ನು ಎಳೆಯಲಾಗಿದೆ. ಸೂಕ್ಷ್ಮ ವಲಯಗಳಲ್ಲಿ ವಾಚ್ ಟವರ್‌ಗಳನ್ನು ಹೆಚ್ಚಿಸಲಾಗಿದೆ. ಅಲ್ಲದೆ ಕಾಡ್ಗಿಚ್ಚು ತಡೆಯಲು ಆಗಾಗ್ಗೆ ಮೇಲ್ವಿಚಾರಣೆ ಮಾಡಲು ಡ್ರೋನ್‌ಗಳನ್ನು ಬಳಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಬಂಡೀಪುರ ಅರಣ್ಯದಲ್ಲಿ ಕಾಡ್ಗಿಚ್ಚು ತಪ್ಪಿಸಲು ಅರಣ್ಯ ಇಲಾಖೆಯಿಂದ ಬೆಂಕಿ ರೇಖೆ ನಿರ್ಮಾಣ!
ವನ್ಯಜೀವಿಗಳಿಗೆ ಆಸರೆಯಾಗಲು ಅರಣ್ಯ ಪ್ರದೇಶದೊಳಗಿನ ಕೆರೆಗಳಿಗೆ ಟ್ರ್ಯಾಕ್ಟರ್‌ಗಳ ಮೂಲಕ ನೀರು ತುಂಬಿಸಲಾಗುತ್ತಿದೆ ಎಂದು ಇಲಾಖೆ ಮೂಲಗಳು ಖಚಿತಪಡಿಸಿವೆ.
ವಿರಾಜಪೇಟೆ ವಿಭಾಗದಲ್ಲಿ ಮಾಕುಟ್ಟ ಅರಣ್ಯ ವ್ಯಾಪ್ತಿಯ ಪ್ರದೇಶಗಳು ಸೇರಿ ಒಟ್ಟು 1012 ಕಿ.ಮೀ ಉದ್ದದ ಫೈರ್‌ಲೈನ್ ಎಳೆಯಲಾಗಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ಇಡಲು ಐದು ತಂಡಗಳನ್ನು ನಿಯೋಜಿಸಲಾಗಿದೆ. ಫೈರ್‌ಲೈನ್‌ಗಳ ಕಾಮಗಾರಿ ಡಿಸೆಂಬರ್‌ನಲ್ಲಿ ಆರಂಭವಾಯಿತು ಎಂದು ವಿರಾಜಪೇಟೆ ಡಿಸಿಎಫ್ ಶರಣಬಸಪ್ಪ ಅವರು ತಿಳಿಸಿದ್ದಾರೆ.