Karnataka Teachers Recruitment; ಜೂ.24ರಂದು ಶಿಕ್ಷಕರ ನೇಮಕಕ್ಕೆ ಕೌನ್ಸೆಲಿಂಗ್‌

By Suvarna News  |  First Published Jun 18, 2022, 2:31 PM IST

2021-22 ನೇ ಸಾಲಿಗೆ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರ ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳ ಆಯ್ಕೆಗೆ ಮೆರಿಟ್‌ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಜೂ.24 ರಂದು ಕೌನ್ಸೆಲಿಂಗ್‌ ನಡೆಯಲಿದೆ.


ಬೆಂಗಳೂರು (ಜೂ.18): 2021-22 ನೇ ಸಾಲಿಗೆ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರ ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳ ಆಯ್ಕೆಗೆ ಮೆರಿಟ್‌ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಕೌನ್ಸೆಲಿಂಗ್‌ ವೇಳಾಪಟ್ಟಿ ಪ್ರಕಟಿಸಲಾಗಿದೆ.

ಈಗಾಗಲೇ ಲಿಖಿತ ಪರೀಕ್ಷೆ ನಡೆಸಿ ಮೊದಲ ಹಂತದ ಕೌನ್ಸೆಲಿಂಗ್‌ ಮುಗಿಸಲಾಗಿದೆ. ಆದರೆ ಬಹುತೇಕ ಜಿಲ್ಲೆಗಳಲ್ಲಿ ಹುದ್ದೆ ಖಾಲಿ ಉಳಿದಿದ್ದು ಶೈಕ್ಷಣಿಕ ವರ್ಷವು ಆರಂಭವಾಗಿರುವ ಹಿನ್ನೆಲೆಯಲ್ಲಿ ಉಳಿದ ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದೆ. ಆದ್ದರಿಂದ ಜೂ.24 ರಂದು ಕೌನ್ಸೆಲಿಂಗ್‌ ನಡೆಯಲಿದೆ. ಹೆಚ್ಚಿನ ವಿವರಕ್ಕೆ https://www.schooleducation.kar.nic.in/ಗೆ ಭೇಟಿ ನೀಡಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.

Tap to resize

Latest Videos

undefined

2ND PUC RESULT TOPPERS LIST; ದ‌ಕ‌ ಜಿಲ್ಲೆಯ ಐವರು ವಿದ್ಯಾರ್ಥಿಗಳು ಟಾಪರ್ಸ್, ಕಲಾ ವಿಭಾಗದಲ್ಲಿ ಶೂನ್ಯ!

ಗೂಗಲ್ ಡ್ರೈವ್ ಅಥವಾ ಡ್ರಾಪ್‌ಬಾಕ್ಸ್‌ನಂತಹ ಯಾವುದೇ ಸರ್ಕಾರೇತರ ಕ್ಲೌಡ್ ಸೇವೆಯಲ್ಲಿ ಯಾವುದೇ ಆಂತರಿಕ, ನಿರ್ಬಂಧಿತ ಅಥವಾ ಗೌಪ್ಯ ಸರ್ಕಾರಿ ಡೇಟಾ ಫೈಲ್‌ಗಳನ್ನು ಉಳಿಸದಂತೆ ಕೇಂದ್ರ ಸರಕಾರ ತನ್ನ ಉದ್ಯೋಗಿಗಳಿಗೆ ಸುತ್ತೋಲೆ ಹೊರಡಿಸಿದೆ ಎಂದು ವರದಿಯಾಗಿದೆ. 

ದಿನದಿಂದ ದಿನಕ್ಕೆ ಸೈಬರ್‌ ಕ್ರೈಂ ಪ್ರಕರಣಗಳು ಹೆಚ್ಚುತ್ತಲೇ ಇವೆ. ಎಷ್ಟೋ ಬಾರಿ ದೇಶದ ಭದ್ರತೆ ಮತ್ತು ಗೌಪ್ಯತೆಗೆ ಸಂಬಂಧಿಸಿದ ಮಾಹಿತಿಗಳು ಸೋರಿಕೆಯಾಗಿದೆ. ಮತ್ತು ಆಗುತ್ತಲೇ ಇದೆ. ಈ ಅಪಾಯವನ್ನು ತಡೆಯುವ ನಿಟ್ಟಿನಲ್ಲಿ  ಮೂರನೇ ವ್ಯಕ್ತಿಯ ವರ್ಚುವಲ್ ಖಾಸಗಿ ನೆಟ್‌ವರ್ಕ್‌ಗಳನ್ನು (VPN) ಬಳಸುವುದನ್ನು ನಿಷೇಧಿಸುವಂತೆ ಹೇಳಿದೆ. Nord VPN, ExpressVPN ಮತ್ತು Tor ನಂತಹ ಕಂಪನಿಗಳು ನೀಡುವ ಯಾವುದೇ ಅನಾಮಧೇಯ ಸೇವೆಗಳನ್ನು ಬಳಸದಂತೆ  ಕೇಂದ್ರ ಸರಕಾರಿ ನೌಕರರಿಗೆ ನಿರ್ಬಂಧ ಹೇರಲಾಗಿದೆ.

ಜೊತೆಗೆ  ಉದ್ಯೋಗಿಗಳು ಇನ್ನು ಮುಂದೆ ಗೂಗಲ್ ಡ್ರೈವ್ ಮತ್ತು ಡ್ರಾಪ್‌ಬಾಕ್ಸ್‌ನಂತಹ ಕ್ಲೌಡ್ ಸೇವೆಗಳಲ್ಲಿ ಯಾವುದೇ ಗೌಪ್ಯ ಸರ್ಕಾರಿ ಫೈಲ್‌ಗಳನ್ನು ಉಳಿಸದಂತೆ ಸೂಚನೆ ಹೊರಡಿಸಿದೆ. 

2nd PUC Result 2022 ; 32 ಜಿಲ್ಲೆಗಳ ಶೇಕಡಾವಾರು ಫಲಿತಾಂಶ ಮಾಹಿತಿ 

ವರದಿಯ ಪ್ರಕಾರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ  ( Ministry of Electronics and Information Technology) ಅಡಿಯಲ್ಲಿ  ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ನಿಗದಿಪಡಿಸಿರುವ ಈ ನಿಯಮಗಳು ಸರ್ಕಾರದ ಭದ್ರತೆಯನ್ನು ಸುಧಾರಿಸುವ ಗುರಿ ಹೊಂದಿವೆ. ವಿಪಿಎನ್ ಸೇವೆಗಳನ್ನು ಭಯೋತ್ಪಾದಕ ಸಂಘಟನೆಗಳು ಬಳಸಿಕೊಳ್ಳಬಹುದು ಮತ್ತು ಅವುಗಳನ್ನು ಪತ್ತೆಹಚ್ಚಲು ಅಸಾಧ್ಯವಾಗುವುದರಿಂದ ದೇಶದ ಭದ್ರತೆಗೆ ಅಪಾಯವಿದೆ ಎಂದು ಭಾರತ ಸರ್ಕಾರವು ಅಭಿಪ್ರಾಯಪಟ್ಟಿದೆ.

ಭಾರತದಲ್ಲಿ ವಿಪಿಎನ್ ಕಂಪನಿಗಳು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಕುರಿತು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸರ್ಟ್-ಇನ್) ನಿರ್ದೇಶನ ನೀಡಿತ್ತು. ಅದರ ಬೆನ್ನಲ್ಲೇ ದೇಶದಲ್ಲಿ ತಮ್ಮ ಸೇವೆಗಳನ್ನು ಸ್ಥಗಿತ ಮಾಡುವುದಾಗಿ ಎಕ್ಸ್‌ಪ್ರೆಸ್‌ ವಿಪಿಎನ್, ಸರ್ಫ್‌ಶಾರ್ಕ್ ಮತ್ತು ನಾರ್ಡ್‌ ವಿಪಿಎನ್ ಹೇಳಿದ್ದವು. ಇದಾದ ಕೆಲವೇ ದಿನಗಳಲ್ಲಿ ಸರ್ಕಾರದಿಂದ ಈ ಆದೇಶ ಹೊರಬಿದ್ದಿದೆ. 

ಹೆಚ್ಚುವರಿಯಾಗಿ, ಇಲಾಖೆಯು ಸರ್ಕಾರಿ ಉದ್ಯೋಗಿಗಳಿಗೆ ತಮ್ಮ ಮೊಬೈಲ್ ಫೋನ್‌ಗಳನ್ನು 'ಜೈಲ್ ಬ್ರೇಕ್' ಅಥವಾ 'ರೂಟ್' ಮಾಡದಂತೆ ಅಥವಾ "ಆಂತರಿಕ ದಾಖಲೆಗಳನ್ನು" ಸ್ಕ್ಯಾನ್ ಮಾಡಲು CamScanner ನಂತಹ ಯಾವುದೇ ಬಾಹ್ಯ ಮೊಬೈಲ್ ಅಪ್ಲಿಕೇಶನ್ ಆಧಾರಿತ ಸ್ಕ್ಯಾನರ್ ಸೇವೆಗಳನ್ನು ಬಳಸದಂತೆ ಸೂಚಿಸಿದೆ.

ಜುಲೈ 2020ರಲ್ಲಿ ಸರ್ಕಾರ ನಿಷೇಧಿಸಿದ ಹಲವಾರು ಚೀನೀ ಅಪ್ಲಿಕೇಶನ್‌ಗಳಲ್ಲಿ CamScanner ಕೂಡ ಒಂದು. ನಿಷೇಧದ ಬಳಿಕವೂ ಇದು ಕೆಲವು ಆವೃತ್ತಿಗಳ ಮೂಲಕ ಕಾರ್ಯನಿರ್ವಹಿಸುತ್ತಿದೆ.

ಗಡಿ ಹಗೆತನ ಸೇರಿದಂತೆ ಅನೇಕ ರೀತಿಯ ಭದ್ರತಾ ಕಾಳಜಿಯ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ದೇಶಾದ್ಯಂತ ಸರ್ಕಾರಿ ಕಚೇರಿಗಳಲ್ಲಿ ಏಕರೂಪದ ಸೈಬರ್ ಭದ್ರತಾ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಸರ್ಕಾರದ ಭದ್ರತೆಗೆ ಸಂಬಂಧಪಟ್ಟ ಗೌಪ್ಯತೆಯನ್ನ ಕಾಯ್ದುಕೊಳ್ಳಬೇಕೆಂದು ಎಂದು ನೌಕರರಿಗೆ ಸೂಚಿಸಿದೆ.

click me!