ಕುಸ್ತಿಪಟು ಭಜರಂಗ್‌ಗೆ ಖೇಲ್‌ ರತ್ನದ ಭರವಸೆ

By Web DeskFirst Published Sep 22, 2018, 11:54 AM IST
Highlights

24 ವರ್ಷದ ಭಜರಂಗ್‌, ಕ್ರೀಡಾ ಸಚಿವ ರಾಥೋಡ್‌ರನ್ನು ಭೇಟಿಯಾಗಿ ತಮ್ಮನ್ನು ಕೈಬಿಟ್ಟಿದ್ದಕ್ಕೆ ಕಾರಣ ಕೇಳಿದರು. ‘ಪ್ರಶಸ್ತಿ ಪಟ್ಟಿಯಿಂದ ನನ್ನ ಹೆಸರನ್ನು ಕೈಬಿಟ್ಟಿದ್ದಕ್ಕೆ ಸಚಿವರು ಕಾರಣ ನೀಡಿದ್ದಾರೆ. ಈ ಸಂಬಂಧ ಮರು ಪರಿಶೀಲನೆ ಮಾಡುವ ಭರವಸೆ ನೀಡಿದ್ದಾರೆ’ ಎಂದು ಭಜರಂಗ್‌ ಹೇಳಿದ್ದಾರೆ.

ನವದೆಹಲಿ[ಸೆ.22]: ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿಯಿಂದ ವಂಚಿತಗೊಂಡಿರುವ ಕುಸ್ತಿಪಟು ಭಜರಂಗ್‌ ಪೂನಿಯಾ, ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ರನ್ನು ಭೇಟಿ ಮಾಡಿದ್ದಾರೆ. ಈ ಸಂಬಂಧ ರಾಥೋಡ್‌, ಭಜರಂಗ್‌ಗೆ ಪ್ರಶಸ್ತಿಗೆ ಪರಿಗಣಿಸುವ ಭರವಸೆ ನೀಡಿದ್ದಾರೆ. 

ಇದನ್ನು ಓದಿ: ಏಷ್ಯನ್ ಗೇಮ್ಸ್ 2018: ಭಾರತಕ್ಕೆ ಮೊದಲ ಚಿನ್ನ ತಂದ ರೆಸ್ಲರ್ ಬಜರಂಗ್

24 ವರ್ಷದ ಭಜರಂಗ್‌, ಕ್ರೀಡಾ ಸಚಿವ ರಾಥೋಡ್‌ರನ್ನು ಭೇಟಿಯಾಗಿ ತಮ್ಮನ್ನು ಕೈಬಿಟ್ಟಿದ್ದಕ್ಕೆ ಕಾರಣ ಕೇಳಿದರು. ‘ಪ್ರಶಸ್ತಿ ಪಟ್ಟಿಯಿಂದ ನನ್ನ ಹೆಸರನ್ನು ಕೈಬಿಟ್ಟಿದ್ದಕ್ಕೆ ಸಚಿವರು ಕಾರಣ ನೀಡಿದ್ದಾರೆ. ಈ ಸಂಬಂಧ ಮರು ಪರಿಶೀಲನೆ ಮಾಡುವ ಭರವಸೆ ನೀಡಿದ್ದಾರೆ’ ಎಂದು ಭಜರಂಗ್‌ ಹೇಳಿದ್ದಾರೆ. ಆದರೆ ಕೊನೆ ಕ್ಷಣದಲ್ಲಿ ಅವರ ಹೆಸರನ್ನು ಪ್ರಶಸ್ತಿ ಪಟ್ಟಿಗೆ ಸೇರಿಸುವ ಸಾಧ್ಯತೆ ತೀರಾ ಕಡಿಮೆ ಎಂದು ಕ್ರೀಡಾ ಸಚಿವಾಲಯದ ಮೂಲಗಳು ತಿಳಿಸಿವೆ.

ಇದನ್ನು ಓದಿ: ’ಖೇಲ್ ರತ್ನ ಕೊಡಿ, ಇಲ್ಲಾ ಕೋರ್ಟ್’ಗೆ ಹೋಗುವೆ’

ಕೇಂದ್ರ ಸರ್ಕಾರ ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ವೇಟ್’ಲಿಫ್ಟರ್ ಮೀರಾಬಾಯಿ ಚಾನು ಅವರಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಘೋಷಿಸಿತ್ತು, ಇದರ ಬೆನ್ನಲ್ಲೇ ಭಜರಂಗ್ ಒಂದೊಮ್ಮೆ ತಮಗೆ ಸರ್ಕಾರ ಖೇಲ್ ರತ್ನ ಸಿಗದಿದ್ದರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಎಚ್ಚರಿಕೆ ನೀಡಿದ್ದರು.

click me!