ವಿಶ್ವ ಕುಸ್ತಿ ಚಾಂಪಿಯನ್’ಶಿಪ್: ಕಂಚಿಗೆ ಮುತ್ತಿಕ್ಕಿದ ಪೂಜಾ

By Web Desk  |  First Published Oct 26, 2018, 11:22 AM IST

ಒಟ್ಟಾರೆಯಾಗಿ ಕಂಚು ಗೆದ್ದ ಭಾರತದ 4ನೇ ಮಹಿಳಾ ಕುಸ್ತಿಪಟು ಎಂಬ ಗೌರವಕ್ಕೆ ಪಾತ್ರರಾರಾಗಿದ್ದಾರೆ. ಇದಕ್ಕೂ ಮೊದಲು ಅಲ್ಕಾ ತೋಮರ್ (2006), ಗೀತಾ ಮತ್ತು ಬಬಿತಾ ಪೋಗಟ್ (2012) ಕಂಚಿನ ಪದಕ ಗೆದ್ದಿದ್ದರು. 

ಬುಡಾಪೆಸ್ಟ್(ಅ.26): ಭಾರತದ ಕುಸ್ತಿಪಟು ಪೂಜಾ ದಂಡಾ, ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದಾರೆ. ಈ ಮೂಲಕ ವಿಶ್ವಕುಸ್ತಿಯಲ್ಲಿ 6 ವರ್ಷಗಳ ಬಳಿಕ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕುಸ್ತಿಪಟುವಾಗಿದ್ದಾರೆ. 

ಒಟ್ಟಾರೆಯಾಗಿ ಕಂಚು ಗೆದ್ದ ಭಾರತದ 4ನೇ ಮಹಿಳಾ ಕುಸ್ತಿಪಟು ಎಂಬ ಗೌರವಕ್ಕೆ ಪಾತ್ರರಾರಾಗಿದ್ದಾರೆ. ಇದಕ್ಕೂ ಮೊದಲು ಅಲ್ಕಾ ತೋಮರ್ (2006), ಗೀತಾ ಮತ್ತು ಬಬಿತಾ ಪೋಗಟ್ (2012) ಕಂಚಿನ ಪದಕ ಗೆದ್ದಿದ್ದರು. 

Tap to resize

Latest Videos

ಗುರುವಾರ ನಡೆದ 57 ಕೆ.ಜಿ. ಮಹಿಳಾ ವಿಭಾಗದ ಕಂಚಿನ ಪದಕದ ಪಂದ್ಯದಲ್ಲಿ ಪೂಜಾ, ಗ್ರೇಸ್ ಜಾಕೋಬ್ ಬುಲ್ಲೆನ್‌ರನ್ನು 10-07 ಬೌಟ್‌ಗಳಿಂದ ಮಣಿಸಿ, ಕಂಚಿಗೆ ಮುತ್ತಿಟ್ಟರು. 50 ಕೆ.ಜಿ. ವಿಭಾಗದಲ್ಲಿ ರಿತು ಪೋಗಟ್, ಉಕ್ರೇನ್‌ನ ಒಕ್ಸಾನ ಲಿವಾಚ್ ವಿರುದ್ಧ ನಿರಾಸೆ ಅನುಭವಿಸಿದರೆ, ರಿಯೊ ಒಲಿಂಪಿಕ್ಸ್ ಕಂಚು ವಿಜೇತೆ ಸಾಕ್ಷಿ ಮಲಿಕ್, ಹಂಗೇರಿಯ ಮರಿಯನ್ನಾ ಸಸ್ಟಿನ್ ಎದುರು ಸೋತರು.

click me!