World U-20 Athletics Championships: ಏಷ್ಯನ್ ದಾಖಲೆಯೊಂದಿಗೆ ಬೆಳ್ಳಿ ಗೆದ್ದ ಭಾರತ ಮಿಶ್ರ ರಿಲೇ ತಂಡ

By Naveen Kodase  |  First Published Aug 3, 2022, 1:46 PM IST

* ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತ ರಿಲೇ ತಂಡ
* ಭರತ್ ಶ್ರೀಧರ್, ಪ್ರಿಯಾ ಮೋಹನ್, ಕಪಿಲ್ ಮತ್ತು ರೂಪಾಲ್ ಚೌಧರಿ ಅವರನ್ನೊಳಗೊಂಡ ಭಾರತ ಮಿಶ್ರ ರಿಲೇ ತಂಡ
* ಏಷ್ಯಾ ದಾಖಲೆಯೊಂದಿಗೆ ರಜತ ಪದಕ ಗೆದ್ದ ಭಾರತ ಮಿಶ್ರ ರಿಲೇ ತಂಡ


ಕೊಲಂಬಿಯಾ(ಆ.03): ಇಲ್ಲಿ ನಡೆದ ವಿಶ್ವ ಅಂಡರ್ 20 ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಮಿಶ್ರ 4*400 ರಿಲೇ ತಂಡವು ಏಷ್ಯನ್ ರೆಕಾರ್ಡ್‌ ನಿರ್ಮಿಸುವುದರ ಮೂಲಕ ಬೆಳ್ಳಿ ಪದಕ ಜಯಿಸಿದೆ. ಬುಧವಾರ ಮುಂಜಾನೆ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಯುಎಇಗೆ ಸಾಕಷ್ಟು ಪೈಪೋಟಿ ನೀಡಿದ ಭಾರತ ತಂಡವು ಬೆಳ್ಳಿ ಪದಕ ಜಯಿಸುವಲ್ಲಿ ಯಶಸ್ವಿಯಾದರು. ಭರತ್ ಶ್ರೀಧರ್, ಪ್ರಿಯಾ ಮೋಹನ್, ಕಪಿಲ್ ಮತ್ತು ರೂಪಾಲ್ ಚೌಧರಿ ಅವರನ್ನೊಳಗೊಂಡ ಭಾರತ ಮಿಶ್ರ ರಿಲೇ ತಂಡವು 3 ನಿಮಿಷ 19.62 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ ಎರಡನೇ ಸ್ಥಾನ ಪಡೆಯಿತು. ಇನ್ನು ಯುಎಸ್‌ಎ ತಂಡವು 3:18.65 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಯಿತು. ವಿಶ್ವ ಅಥ್ಲೆಟಿಕ್ಸ್ ಮಿಶ್ರ ರಿಲೇ ಫೈನಲ್ ಪಂದ್ಯವು ಇಂದು ಮುಂಜಾನೆ 3.20ಕ್ಕೆ ನಡೆಯಿತು.

ಈ ಮೊದಲು ಕಳೆದ ಆವೃತ್ತಿಯಲ್ಲಿ ನೈರೋಬಿಯಲ್ಲಿ ನಡೆದ ಅಂಡರ್ 20 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಮಿಶ್ರ ರಿಲೇ ತಂಡವು ಕಂಚಿನ ಪದಕ ಜಯಿಸಿತ್ತು. ಆ ಆವೃತ್ತಿಯಿಂದಲೇ ಮಿಶ್ರ 4*400 ರಿಲೇ ಸ್ಪರ್ಧೆಯನ್ನು ಕೂಟದಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿತ್ತು. 

Tap to resize

Latest Videos

ಹೇಗಿತ್ತು ಈ ಸ್ಪರ್ಧೆ:

ಅಮೆರಿಕಾ ಎರಡನೇ ಹೀಟ್‌ನಲ್ಲಿದ್ದರೇ, ಭಾರತ ಮೂರನೇ ಹೀಟ್‌ನಲ್ಲಿತ್ತು. ಯುಎಸ್‌ಎ ತಂಡವು 3:18.65 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಯಿತು. ಇನ್ನು 2021ರಲ್ಲಿ ಕೀನ್ಯಾದ ನೈರೋಬಿಯಲ್ಲಿ ನಡೆದ 4*400 ಮಿಶ್ರ ರಿಲೇ ಸ್ಪರ್ಧೆಯಲ್ಲಿ ಭಾರತ ಕಂಚಿನ ಪದಕ ಜಯಿಸಿತ್ತು. ಈ ಬಾರಿ ಭಾರತ ತಂಡವು ಬೆಳ್ಳಿ ಪದಕ ಗೆಲ್ಲುವ ಮೂಲಕ ತಮ್ಮ ಪ್ರದರ್ಶನವನ್ನು ಮತ್ತಷ್ಟು ಉತ್ತಮ ಪಡಿಸಿಕೊಂಡಿತು. ಕಳೆದ ಬಾರಿ ಕಂಚು ಗೆದ್ದ ತಂಡದಲ್ಲಿ ರೂಪಾಲ್ ಚೌಧರಿ ಇರಲಿಲ್ಲ. ಇನ್ನುಳಿದಂತೆ ಭರತ್ ಶ್ರೀಧರ್, ಪ್ರಿಯಾ ಮೋಹನ್, ಕಪಿಲ್ ಕಳೆದ ಬಾರಿಯೂ ಕಂಚು ಗೆದ್ದ ತಂಡದ ಸದಸ್ಯರಾಗಿದ್ದರು.

Commonwealth Games 2022: 5ನೇ ದಿನದಾಟ ಮುಕ್ತಾಯದ ಬಳಿಕ ಪದಕ ಪಟ್ಟಿಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?

ಮಂಗಳವಾರ ನಡೆದ 400 ಮೀಟರ್ ಓಟದ ಸ್ಪರ್ಧೆಯಲ್ಲಿ ರೂಪಾಲ್ ಚೌಧರಿ ಹಾಗೂ ಪ್ರಿಯಾ ಮೋಹನ್ ಅಮೋಘ ಓಟದ ಮೂಲಕ ಸೆಮಿಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದರು. 400 ಮೀಟರ್ ಓಟದ ಸ್ಪರ್ಧೆಯನ್ನು ರೂಪಾಲ್ ಚೌಧರಿ 52.50 ಸೆಕೆಂಡ್‌ಗಳಲ್ಲಿ ತಲುಪಿದರೆ, ಪ್ರಿಯಾ ಮೋಹನ್ 52.56 ಮೀಟರ್‌ಗಳಲ್ಲಿ ಗುರಿ ತಲುಪಿದರು. ಪ್ರಿಯಾ ಮೋಹನ್ 2021ರಲ್ಲಿ ನೈರೋಬಿಯಲ್ಲಿ ನಡೆದ ಮಹಿಳಾ 400 ಮೀಟರ್ ಓಟದ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಕೂದಲೆಳೆ ಅಂತರದಲ್ಲಿ ಪದಕ ಗೆಲ್ಲುವ ಅವಕಾಶವನ್ನು ಕೈಚೆಲ್ಲಿದರು.

click me!