ಎರಡೂವರೆ ದಶಕಗಳ ಟೆನಿಸ್ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ ರೋಜರ್ ಫೆಡರರ್
1996ರಲ್ಲೇ ಟೆನಿಸ್ ಆಡಲು ಆರಂಭಿಸಿದ ಫೆಡರರ್
20 ಗ್ರ್ಯಾನ್‌ಸ್ಲಾಂಗಳೊಂದಿಗೆ ಟೆನಿಸ್‌ಗೆ ಗುಡ್‌ಬೈ ಹೇಳಿದ ಸ್ವಿಸ್ 'ಟೆನಿಸ್ ಮಾಂತ್ರಿಕ'
ನವದೆಹಲಿ(ಸೆ.16): 90ರ ದಶಕದ ಅಂತ್ಯದಲ್ಲಿ ಪೀಟ್ ಸ್ಯಾಂಪ್ರಸ್, ಆ್ಯಂಡ್ರೆ ಅಗಾಸ್ಸಿಯಂತಹ ದಿಗ್ಗಜರು ತೆರೆ ಮರೆಗೆ ಸರಿಯುತ್ತಿದ್ದಾಗ ಟೆನಿಸ್‌ನಲ್ಲಿ ಹೊಸ ತಾರೆಯ ಉದಯವಾಯಿತು. 1998ರಲ್ಲಿ ವೃತ್ತಿಬದುಕಿನ ಕಾಲಿಟ್ಟಆ ಆಟಗಾರ ಮುಂದಿನ ಎರಡೂವರೆ ದಶಕ ಟೆನಿಸ್ ಲೋಕವನ್ನು ಆಳಿದರು. ದಾಖಲೆಗಳ ಮೇಲೆ ದಾಖಲೆ ಬರೆದರು. ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದರು.
‘ಟೆನಿಸ್ ಮಾಂತ್ರಿಕ’ ಎಂದೇ ಕರೆಸಿಕೊಳ್ಳುವ ಸ್ವಿಜರ್‌ಲೆಂಡ್‌ನ ರೋಜರ್ ಫೆಡರರ್ ವೃತ್ತಿಪರ ಟೆನಿಸ್‌ಗೆ ಗುರುವಾರ ನಿವೃತ್ತಿ ಘೋಷಿಸಿದ್ದಾರೆ. 41 ವರ್ಷದ ಫೆಡರರ್ 20 ಗ್ರ್ಯಾನ್‌ಸ್ಲಾಂಗಳೊಂದಿಗೆ ಟೆನಿಸ್‌ಗೆ ಗುಡ್‌ಬೈ ಹೇಳಿದ್ದಾರೆ.
1996ರಲ್ಲಿ ಸ್ವಿಜರ್‌ಲೆಂಡ್‌ನ ದ್ವಿತೀಯ ದರ್ಜೆ ಟೂರ್ನಿಯಲ್ಲಿ ರೋಜರ್ ಫೆಡರರ್ ಮೊದಲ ಬಾರಿಗೆ ಕಿರಿಯರ ವಿಭಾಗದಲ್ಲಿ ಸ್ಪರ್ಧಿಸಿದರು. 1998ರ ವಿಂಬಲ್ಡನ್ ಕಿರಿಯರ ಚಾಂಪಿಯನ್‌ಶಿಪ್‌ನ ಸಿಂಗಲ್ಸ್ ಹಾಗೂ ಡಬಲ್ಸ್‌ನಲ್ಲಿ ಚಾಂಪಿಯನ್ ಆದ ಫೆಡರರ್, ಅದೇ ವರ್ಷ ಯುಎಸ್ ಓಪನ್ ಕಿರಿಯರ ಟೂರ್ನಿಯ ಫೈನಲ್‌ಗೇರಿದರು. ಕಿರಿಯರ ವಿಭಾಗದಲ್ಲಿ 4 ಐಟಿಎಫ್ ಟೂರ್ನಿಗಳನ್ನು ಜಯಿಸಿದರು.
🕰 24 years.
🎾 1526 singles matches.
🎉 1,251 wins.
🥇 310 weeks as No. 1.
🏆 103 titles.
2️⃣0️⃣ Grand Slams.
💪 0 match retirements.
Roger. Federer. | pic.twitter.com/fJsAafHVCi
1998ರಲ್ಲಿ ಕಿರಿಯರ ವಿಶ್ವ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದ ರೋಜರ್, ಅದೇ ವರ್ಷ ಹಿರಿಯರ ವಿಭಾಗಕ್ಕೆ ಕಾಲಿಟ್ಟರು. ಸ್ವಿಜ್ ಓಪನ್‌ನಲ್ಲಿ ಸ್ಪರ್ಧಿಸಿ ಮೊದಲ ಸುತ್ತಿನಲ್ಲೇ ಸೋಲುಂಡರು. 1999ರಲ್ಲಿ ಮೊದಲ ಬಾರಿಗೆ ವಿಶ್ವ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ 100ರೊಳಗೆ ಪ್ರವೇಶಿಸಿದ ಫೆಡರರ್, 2001ರಲ್ಲಿ ಮೊದಲ ಬಾರಿಗೆ ಗ್ರ್ಯಾನ್ ಸ್ಲಾಂ ಕ್ವಾರ್ಟರ್ ಫೈನಲ್‌ಗೇರಿದರು. ಇದರೊಂದಿಗೆ ವಿಶ್ವ ರಾರಯಂಕಿಂಗ್‌ನಲ್ಲಿ ಅಗ್ರ 15ರಲ್ಲಿ ಸ್ಥಾನ ಪಡೆದರು.
Roger Federer Retires ನಿವೃತ್ತಿ ಘೋಷಿಸಿ ಭಾವುಕರಾದ ಟೆನಿಸ್ ದಿಗ್ಗಜ, ಅಭಿಮಾನಿಗಳು ಶಾಕ್!
2001ರ ವಿಂಬಲ್ಡನ್‌ನಲ್ಲಿ ದಿಗ್ಗಜ ಪೀಟ್ ಸ್ಯಾಂಪ್ರಸ್‌ರನ್ನು ಸೋಲಿಸಿ ಗಮನ ಸೆಳೆದ ಫೆಡರರ್, 2003ರಲ್ಲಿ ವಿಂಬಲ್ಡನ್ ಚಾಂಪಿಯನ್ ಆಗಿ ಮೊದಲ ಬಾರಿಗೆ ಗ್ರ್ಯಾನ್ ಸ್ಲಾಂ ಟ್ರೋಫಿಗೆ ಮುತ್ತಿಟ್ಟರು. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ.
ಫೆಡರರ್ ದಿಢೀರ್ ನಿವೃತ್ತಿಗೆ ಕಾರಣವೇನು?
2016ರಿಂದಲೇ ಫೆಡರರ್‌ಗೆ ಮಂಡಿ ನೋವಿನ ಸಮಸ್ಯೆ ಕಾಡುತ್ತಿತ್ತು. 2021ರ ವಿಂಬಲ್ಡನ್ ಬಳಿಕ ಅದು ಹೆಚ್ಚಾಯಿತು. ಆ ನಂತರ 2 ವರ್ಷಗಳಲ್ಲಿ 3 ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾದರೂ ವೃತ್ತಿಪರ ಟೆನಿಸ್‌ಗೆ ಮರಳಲು ಸಾಧ್ಯವಾಗಲಿಲ್ಲ. ಎಷ್ಟೇ ಪ್ರಯತ್ನ ನಡೆಸಿದರೂ ಫೆಡರರ್‌ಗೆ ಕಮ್‌ಬ್ಯಾಕ್ ಮಾಡಲು ಆಗಲಿಲ್ಲ. ಹೀಗಾಗಿ ಅವರು ನಿವೃತ್ತಿ ಘೋಷಿಸಲಿದ್ದಾರೆ ಎನ್ನುವ ನಿರೀಕ್ಷೆ ಅಭಿಮಾನಿಗಳಲ್ಲಿತ್ತು.
3500 ಕೋಟಿ ರು. ಒಡೆಯ!
ಫೆಡರರ್ ವಿಶ್ವದ ಶ್ರೀಮಂತ ಕ್ರೀಡಾಪಟುಗಳ ಪೈಕಿ ಒಬ್ಬರು. ಬಹುಮಾನ ಮೊತ್ತಗಳಿಂದಲೇ 1000 ಕೋಟಿ ರು.ಗೆ ಹೆಚ್ಚು ಗಳಿಸಿರುವ ಫೆಡರರ್, ಜಾಹೀರಾತು ಒಪ್ಪಂದ, ಪ್ರಾಯೋಜಕತ್ವ, ವ್ಯವಹಾರದ ಮೂಲಕ ಅಂದಾಜು 3500 ಕೋಟಿ ರು. ಸಂಪಾದಿಸಿದ್ದಾರೆ.