ಅಮಾನತಿಗೆ ಹೆದರಲ್ಲ, ಕುಸ್ತಿಗೆ ನಮ್ಮದೇ ಆಡಳಿತ: ಸಂಜಯ್‌ ಸಿಂಗ್‌

By Kannadaprabha NewsFirst Published Jan 2, 2024, 9:42 AM IST
Highlights

ನಿಯಮ ಪಾಲಿಸಿಲ್ಲ ಎಂದು ಕ್ರೀಡಾ ಸಚಿವಾಲಯಕ್ಕೆ ಈಗಾಗಲೇ ವಿವರಣೆ ನೀಡಿದ್ದೇವೆ. ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ಒಂದೆರಡು ದಿನ ಕಾಯುತ್ತೇವೆ. ಅವರು ನಮ್ಮನ್ನು ಸಂಪರ್ಕಿಸದಿದ್ದರೆ ನಾವೂ ಅವರನ್ನು ಕಡೆಗಣಿಸುತ್ತೇವೆ. ಅಮಾನತನ್ನು ಕೂಡಾ ನಾವು ಪರಿಗಣಿಸಲ್ಲ ಎಂದು ಸಂಜಯ್‌ ತಿಳಿಸಿದ್ದಾರೆ.

ನವದೆಹಲಿ: ಚುನಾವಣೆಯಲ್ಲಿ ಆಯ್ಕೆಯಾಗಿ ಅಧಿಕಾರಕ್ಕೇರಿದ ಕೆಲ ದಿನಗಳಲ್ಲೇ ಕೇಂದ್ರ ಕ್ರೀಡಾ ಸಚಿವಾಲಯದಿಂದ ಅಮಾನತುಗೊಂಡಿದ್ದ ಭಾರತೀಯ ಕುಸ್ತಿ ಫೆಡರೇಷನ್‌(ಡಬ್ಲ್ಯುಎಫ್‌ಐ) ಈಗ ಸಚಿವಾಲಯದ ಸಸ್ಪೆಂಡ್‌ ಆದೇಶಕ್ಕೇ ಸಡ್ಡು ಹೊಡೆದಿದೆ. ಅಮಾನತನ್ನು ನಾವು ಪರಿಗಣಿಸಿಲ್ಲ, ಕುಸ್ತಿ ಸಂಸ್ಥೆಯನ್ನು ನಾವೇ ಮುನ್ನಡೆಸುತ್ತೇವೆ ಎಂದು ಡಬ್ಲ್ಯುಎಫ್‌ಐ ಅಧ್ಯಕ್ಷ ಸಂಜಯ್‌ ಸಿಂಗ್‌ ತಿಳಿಸಿದ್ದಾರೆ.

ಈ ಬಗ್ಗೆ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ನಾವು ಸಂವಿಧಾನ ಬದ್ಧವಾಗಿ ಚುನಾವಣೆ ನಡೆದು ಆಯ್ಕೆಯಾಗಿದ್ದೇವೆ. ಅದನ್ನು ಕ್ರೀಡಾ ಸಚಿವಾಲಯ ಕಡೆಗಣಿಸಲು ಹೇಗೆ ಸಾಧ್ಯ? ಅಮಾನತು ಮತ್ತು ಸ್ವತಂತ್ರ ಸಮಿತಿಯನ್ನು ನಾವು ಪರಿಗಣಿಸಲ್ಲ. ನಮ್ಮ ಸಮಿತಿಯೇ ಈಗಲೂ ಕಾರ್ಯನಿರ್ವಹಿಸುತ್ತಿದೆ. ಶೀಘ್ರದಲ್ಲಿ ಸಮಿತಿಯ ಸಭೆ ಕರೆದು, ರಾಷ್ಟ್ರೀಯ ಚಾಂಪಿಯನ್‌ಶಿಪ್‌ ಆಯೋಜಿಸುತ್ತೇವೆ. ನಮ್ಮ ರಾಜ್ಯ ಸಮಿತಿಗಳು ಆಟಗಾರರನ್ನು ಕಳುಹಿಸದಿದ್ದರೆ ಸ್ವತಂತ್ರ ಸಮಿತಿ ಹೇಗೆ ರಾಷ್ಟ್ರೀಯ ಚಾಂಪಿಯನ್‌ಶಿಪ್‌ ಆಯೋಜಿಸುತ್ತದೆ’ ಎಂದು ಸಂಜಯ್‌ ಸವಾಲು ಹಾಕಿದ್ದಾರೆ.

ಕಿಂಗ್‌ ಕೊಹ್ಲಿ ಕಿರೀಟಕ್ಕೆ ಇನ್ನೊಂದು ಗರಿ: ಫುಟ್ಬಾಲ್‌ ಲೆಜೆಂಡ್‌ ಸೋಲಿಸಿ 2023ರ ಪ್ಯೂಬಿಟಿ ಅಥ್ಲೀಟ್ ಪ್ರಶಸ್ತಿ!

ನಿಯಮ ಪಾಲಿಸಿಲ್ಲ ಎಂದು ಕ್ರೀಡಾ ಸಚಿವಾಲಯಕ್ಕೆ ಈಗಾಗಲೇ ವಿವರಣೆ ನೀಡಿದ್ದೇವೆ. ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ಒಂದೆರಡು ದಿನ ಕಾಯುತ್ತೇವೆ. ಅವರು ನಮ್ಮನ್ನು ಸಂಪರ್ಕಿಸದಿದ್ದರೆ ನಾವೂ ಅವರನ್ನು ಕಡೆಗಣಿಸುತ್ತೇವೆ. ಅಮಾನತನ್ನು ಕೂಡಾ ನಾವು ಪರಿಗಣಿಸಲ್ಲ ಎಂದು ಸಂಜಯ್‌ ತಿಳಿಸಿದ್ದಾರೆ.

ಡಿ.21ಕ್ಕೆ ನಡೆದಿದ್ದ ಚುನಾವಣೆಯಲ್ಲಿ ಸಂಜಯ್‌ ನೇತೃತ್ವದ ಸಮಿತಿ ಅಧಿಕಾರಕ್ಕೇರಿತ್ತು. ಆದರೆ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಸಮಿತಿಯನ್ನು ಕ್ರೀಡಾ ಸಚಿವಾಲಯ ಅಮಾನತುಗೊಳಿಸಿತ್ತು. ಬಳಿಕ ಭಾರತೀಯ ಒಲಿಂಪಿಕ್‌ ಸಂಸ್ಥೆ, ಡಬ್ಲ್ಯುಎಫ್‌ಐ ಮೇಲುಸ್ತುವಾರಿಗೆ ಮೂವರು ಸದಸ್ಯರ ಹೊಸ ಸ್ವತಂತ್ರ ಸಮಿತಿ ನೇಮಿಸಿತ್ತು.

ಫೆ.9ರಿಂದ ರಾಷ್ಟ್ರೀಯ ಶಿಬಿರ: ಸ್ವತಂತ್ರ ಸಮಿತಿ

ಪುರುಷ ಹಾಗೂ ಮಹಿಳೆಯರ ರಾಷ್ಟ್ರೀಯ ಕುಸ್ತಿ ಶಿಬಿರ ಕ್ರಮವಾಗಿ ಸೋನೆಪತ್‌ ಹಾಗೂ ಪಟಿಯಾಲಾದಲ್ಲಿ ಫೆ.9ರಿಂದ ಆರಂಭಗೊಳ್ಳಲಿದೆ ಎಂದು ಕುಸ್ತಿ ಸಂಸ್ಥೆಗೆ ನೇಮಿಸಲಾಗಿರುವ ಸ್ವತಂತ್ರ ಸಮಿತಿ ಭಾನುವಾರ ತಿಳಿಸಿದೆ. ಸದ್ಯ ಫೆ.2ರಿಂದ 5ರ ವರೆಗೆ ಜೈಪುರದಲ್ಲಿ ಹಿರಿಯರ ರಾಷ್ಟ್ರೀಯ ಚಾಂಪಿಯನ್‌ಶಿಪ್‌ ನಿಗದಿಯಾಗಿದೆ.

ಕುಸ್ತಿ ಫೆಡರೇಷನ್‌ ಕಚ್ಚಾಟ ರಾಜ್ಯದ 10 ಸಾವಿರ ಕುಸ್ತಿಪಟುಗಳು ಅತಂತ್ರ!

ಕುಸ್ತಿ ವಿವಾದ: ಪ್ರಧಾನಿ ಬಗ್ಗೆ ರಾಹುಲ್ ಗಾಂಧಿ ಕಿಡಿ

ನವದೆಹಲಿ: ಭಾರತ ಕುಸ್ತಿ ಫೆಡರೇಷನ್‌(ಡಬ್ಲ್ಯುಎಫ್‌ಐ)ನ ವಿವಾದಕ್ಕೆ ಸಂಬಂಧಿಸಿದಂತೆ ದೇಶದ ತಾರಾ ಕುಸ್ತಿಪಟುಗಳು ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿದ್ದು, ಇದನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಈ ಬಗ್ಗೆ ‘ಎಕ್ಸ್‌’ನಲ್ಲಿ ಬರೆದುಕೊಂಡಿರುವ ರಾಹುಲ್‌, ‘ದೇಶದ ಯಾವುದೇ ಮಹಿಳೆಗೆ ಸ್ವಾಭಿಮಾನ ಮೊದಲು. ಪ್ರಶಸ್ತಿ, ಗೌರವಗಳೇನಿದ್ದರೂ ಆಮೇಲೆ. ಸ್ವಘೋಷಿತ ಬಾಹುಬಲಿಯಿಂದ ಪಡೆದ ರಾಜಕೀಯ ಲಾಭಗಳ ಬೆಲೆ ಈ ವೀರ ಹೆಣ್ಣುಮಕ್ಕಳ ಕಣ್ಣೀರಿಗಿಂತ ಹೆಚ್ಚೇ? ಪ್ರಧಾನಿ ರಾಷ್ಟ್ರದ ಕಾವಲುಗಾರ. ಆದರೆ ಇಂತಹ ಕ್ರೌರ್ಯಗಳಲ್ಲಿ ಅವರ ಪಾಲಿರುವುದು ನೋಡುವಾಗ ಬೇಸರವಾಗುತ್ತದೆ’ ಎಂದು ಟೀಕಿಸಿದ್ದಾರೆ.

click me!