ಬುಧವಾರ ಮಧ್ಯರಾತ್ರಿ ಪುರುಷರ ಸಿಂಗಲ್ಸ್ 2ನೇ ಸುತ್ತಿನ ಪಂದ್ಯದಲ್ಲಿ ವಿಶ್ವ ನಂ.2 ಜೋಕೋ ಸರ್ಬಿಯಾದವರೇ ಆದ ಲಾಸ್ತೋಡೆರೆ ವಿರುದ್ಧ 6-4, 6-4, 2-0 ಸೆಟ್‌ಗಳಲ್ಲಿ ಮುಂದಿದ್ದಾಗ ವಾಕ್ ಓವರ್ ಪಡೆದರು.
ನ್ಯೂಯಾರ್ಕ್: ದಾಖಲೆಯ 25ನೇ ಗ್ಯಾನ್ ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಹಾಲಿ ಚಾಂಪಿಯನ್, ಸರ್ಬಿಯಾದ ನೋವಾಕ್ ಜೋಕೋವಿಚ್, ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ. ಸತತ 2ನೇ ಬಾರಿ ಯುಎಸ್ ಓಪನ್ ಗೆಲ್ಲುವ ಕಾತರದಲ್ಲಿರುವ ಕೊಕೊ ಗಾಫ್ ಕೂಡಾ ಮುಂದಿನ ಸುತ್ತಿಗೇರಿದ್ದಾರೆ.
ಬುಧವಾರ ಮಧ್ಯರಾತ್ರಿ ಪುರುಷರ ಸಿಂಗಲ್ಸ್ 2ನೇ ಸುತ್ತಿನ ಪಂದ್ಯದಲ್ಲಿ ವಿಶ್ವ ನಂ.2 ಜೋಕೋ ಸರ್ಬಿಯಾದವರೇ ಆದ ಲಾಸ್ತೋಡೆರೆ ವಿರುದ್ಧ 6-4, 6-4, 2-0 ಸೆಟ್‌ಗಳಲ್ಲಿ ಮುಂದಿದ್ದಾಗ ವಾಕ್ ಓವರ್ ಪಡೆದರು. ಸೊಂಟದಲ್ಲಿ ನೋವು ಕಾಣಿಸಿಕೊಂಡ ಕಾರಣ ಲಾಸ್ತೋ 3ನೇ ಸೆಟ್‌ನಲ್ಲಿ ಪಂದ್ಯದಿಂದ ಹಿಂದೆಸರಿದರು. ಯುಎಸ್ ಓಪನ್‌ನಲ್ಲಿ 90ನೇ ಗೆಲುವು ದಾಖಲಿಸಿದ ಜೋಕೋ, 3ನೇ ಸುತ್ತಿನಲ್ಲಿ ಆಸ್ಟ್ರೇಲಿಯಾದ ಅಲೆಕ ಪೋಪಿರಿನ್ ವಿರುದ್ಧ ಸೆಣಸಲಿದ್ದಾರೆ.
undefined
ಮೊದಲ ದಿನವೇ ಎರಡೂ ಕೈಗಳಿಲ್ಲದ ಆರ್ಚರಿ ಪಟು ಶೀತಲ್ ದೇವಿ ವಿಶ್ವದಾಖಲೆ! ವಿಡಿಯೋ ವೈರಲ್
6ನೇ ಶ್ರೇಯಾಂಕಿತ ಆ್ಯಂಡ್ರೆ ರುಬ್ಲೆವ್, 4ನೇ ಶ್ರೇಯಾಂಕಿತ ಅಲೆಕ್ಸಾಂಡರ್ ಜೆರೆವ್ ಕೂಡಾ 2ನೇ ಸುತ್ತಿನಲ್ಲಿ ಗೆಲುವು ಸಾಧಿಸಿದರು. ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವ ನಂ.3, ಅಮೆರಿಕದ 20ರ ಗಾಫ್ ಜರ್ಮನಿಯ ಮರಿಯಾ ವಿರುದ್ಧ ಸುಲಭ ಗೆಲುವು ದಾಖ ಲಿಸಿದರು. ಕಳೆದೆರಡು ಬಾರಿಯ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಅರೆನಾ ಸಬಲೆಂಕಾ, 2 ಬಾರಿ ಗ್ಯಾನ್‌ಸ್ಲಾಂ ವಿಜೇತ ಅಜರೆಂಕಾ 3ನೇ ಸುತ್ತು ಪ್ರವೇಶಿಸಿದರು.
ಶ್ರೀರಾಮ್, ಯೂಕಿ ಭಾಂಬ್ರಿ ಶುಭಾರಂಭ
ಯುಎಸ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಭಾರತ ಎರಡು ಜೋಡಿಗಳು ಶುಭಾರಂಭ ಮಾಡಿದೆ. ಶ್ರೀರಾಮ್ ಬಾಲಾಜಿ-ಅರ್ಜೆಂಟೀನಾದ ಕ್ಯುಡೊ ಆ್ಯಂಡೋಜಿ ಮೊದಲ ಸುತ್ತಿನಲ್ಲಿ ನ್ಯೂಜಿಲೆಂಡ್‌ನ ಮಾರ್ಕಸ್ ಡೇನಿಲ್ - ಮೆಕ್ಸಿಕೋದ ರೆಯೆಸ್ ವೆರೆಲಾ ವಿರುದ್ಧ 5-7, 6-1, 7-6(12-6) ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.
ಶಿವಮೊಗ್ಗ ತಂಡದಲ್ಲೇ ಇದ್ದಾನೆ ಆರ್‌ಸಿಬಿಗೆ ಹೇಳಿ ಮಾಡಿಸಿದಂತ ಆಟಗಾರ..! ಕ್ರೀಸ್‌ಗಿಳಿದ್ರೆ ಸಿಕ್ಸರ್ ಸುರಿಮಳೆ
ಮತ್ತೊಂದು ಪಂದ್ಯದಲ್ಲಿ ಯೂಕಿ ಭಾಂಬ್ರಿ ಹಾಗೂ ಫ್ರಾನ್ಸ್‌ನ ಅಲ್ದಾನೊ ಒಲಿವೆಟ್ಟಿ ಜೋಡಿ ಅಮೆರಿಕದ ಬ್ಯಾನ್ ಸೆಗೆರ್‌ಮಾನ್ - ಪ್ಯಾಟ್ರಿಕ್ ವಿರುದ್ದ 6-3, 6-4 ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿತು.