ಯುಎಸ್ ಓಪನ್ ಟೆನಿಸ್ ಗ್ರ್ಯಾನ್ ಸ್ಲಾಂ ಟೂರ್ನಿಯಲ್ಲಿ ಆಘಾತಕಾರಿ ಫಲಿತಾಂಶ ಹೊರಬಿದ್ದಿದ್ದು, ಸ್ಪೇನ್‌ನ ಕಾರ್ಲೋಸ್ ಅಲ್ಕರಜ್ ಆಘಾತಕಾರಿ ಸೋಲು ಕಂಡು ಹೊರಬಿದ್ದಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ನ್ಯೂಯಾರ್ಕ್: ಗ್ರಾನ್ ಸ್ಲಾಂನಲ್ಲಿ ಸತತ 15 ಪಂದ್ಯ ಗೆದ್ದಿದ್ದ ಸ್ಪೇನ್‌ನ ಕಾರ್ಲೋಸ್ ಆಲ್ಕರಜ್‌ಗೆ ಯುಎಸ್ ಓಪನ್ ಪುರುಷರ ಸಿಂಗಲ್ಸ್‌ನ 2ನೇ ಸುತ್ತಿನಲ್ಲಿ ಸೋಲಿನ ಆಘಾತ ಎದುರಾಗಿದೆ. ವಿಶ್ವ ನಂ.3 ಆಲ್ಕರಜ್‌ಗೆ ವಿಶ್ವ ರ್‍ಯಾಂಕಿಂಗ್‌ನಲ್ಲಿ 74ನೇ ಸ್ಥಾನದಲ್ಲಿರುವ ನೆದರ್‌ಲೆಂಡ್‌ನ ಬೊಟಿಕ್ ವಾನ್ ಡೆ ಝಾಂಡ್‌ಲ್ಸ್ ವಿರುದ್ಧ 1-6, 5-7, 4-6 ನೇರ ಸೆಟ್‌ಗಳಲ್ಲಿ ಸೋಲು ಎದುರಾಯಿತು.
ಈ ವರ್ಷ ಜೂನ್‌ನಲ್ಲಿ ಫ್ರೆಂಚ್ ಓಪನ್, ಜುಲೈನಲ್ಲಿ ವಿಂಬಲ್ಡನ್ ಗೆದ್ದಿದ್ದ ಆಲ್ಕರಜ್ ಈ ವರ್ಷ 3ನೇ ಗ್ಯಾನ್ ಸ್ಲಾಂ ಗೆಲ್ಲುವ ನಿರೀಕ್ಷೆಯಲ್ಲಿದ್ದರು. ಆದರೆ ಸ್ಪೇನ್‌ನ 21ರ ಟೆನಿಸಿಗನಿಗೆ ನಿರಾಸೆ ಉಂಟಾಗಿದೆ. ಇದಕ್ಕೂ ಮುನ್ನ ಆಲ್ಕರಜ್, ಯುಎಸ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್ ಗೂ ಮೊದಲು ಸೋತಿರಲಿಲ್ಲ.
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಒಂದೇ ದಿನ ಭಾರತಕ್ಕೆ 4 ಪದಕ! ಕಾಲಿನ ಸ್ವಾಧೀನ ಕಳೆದುಕೊಂಡ್ರೂ ಕುಗ್ಗದ ಅವನಿ
ಇನ್ನು, ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನದಲ್ಲಿರುವ ಇಟಲಿಯ ಯಾನ್ನಿಕ್ ಸಿನ್ನರ್ ಹಾಗೂ ಪೋಲೆಂಡ್‌ನ ಇಗಾ ಸ್ವಿಯಾಟೆಕ್ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ಸಿಂಗಲ್ಸ್‌ನಲ್ಲಿ 3ನೇ ಸುತ್ತು ಪ್ರವೇಶಿಸಿದರು. ಇದೇ ವೇಳೆ 4 ಗ್ಯಾನ್ ಸ್ಲಾಂಗಳ ಒಡತಿ ಜಪಾನ್‌ನ ನವೊಮಿ ಒಸಾಕ, 2ನೇ ಸುತ್ತಿನಲ್ಲಿ ಗಣರಾಜ್ಯದ ಕ್ಯಾರೋಲಿನಾ ಮುಕೋವಾ ವಿರುದ್ಧ 3-6, 6-7ರಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದರು.
ಬೋಪಣ್ಣ-ಎಬೆನ್ ಜೋಡಿ ಶುಭಾರಂಭ
ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಭಾರತದ ರೋಹನ್ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯ ಎಬೆನ್ ಜೋಡಿ ಯುಎಸ್ ಓಪನ್‌ನಲ್ಲಿ ಶುಭಾರಂಭ ಮಾಡಿದೆ. ಗುರುವಾರ ರಾತ್ರಿ ಪುರುಷರ ಡಬಲ್ಸ್ ಮೊದಲ ಸುತ್ತಿನಲ್ಲಿ ನೆದರ್‌ಲೆಂಡ್ ಸ್ಯಾಂಡರ್ ಅರೆಂಡ್ -ರಾಬಿನ್ ಹಾಸ್ ವಿರುದ್ಧ 6-3, 7-5 ನೇರ ಸೆಟ್‌ಗಳಲ್ಲಿ ಗೆಲುವು ಲಭಿಸಿತು. ಬೋಪಣ್ಣ-ಎಬೆನ್ ಕಳೆದ ಬಾರಿ ಟೂರ್ನಿಯ ರನ್ನರ್ ಆಪ್ ಆಗಿದ್ದರು.
ಯುಎಸ್ ಓಪನ್: 3ನೇ ಸುತ್ತಿಗೆ ಜೋಕೋವಿಚ್, ಗಾಫ್ ಪ್ರವೇಶ
ಓಪನ್ ಅಥ್ಲೆಟಿಕ್ಸ್: ರಾಜ್ಯದ ವಂದನಾಗೆ ಕಂಚಿನ ಪದಕ
ಬೆಂಗಳೂರು: ಶುಕ್ರವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆರಂಭಗೊಂಡ 63ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಪದಕ ಖಾತೆ ತೆರೆದಿದೆ.
ಕೂಟದ ಮೊದಲ ದಿನ ಮಹಿಳೆಯರ 20 ಕಿ.ಮೀ. ವೇಗ ನಡಿಗೆ ಸ್ಪರ್ಧೆಯಲ್ಲಿ ವಂದನಾ 1 ಗಂಟೆ 39 ನಿಮಿಷ 41 ಸೆಕೆಂಡ್‌ಗಳಲ್ಲಿ ಕ್ರಮಿಸಿ 3ನೇ ಸ್ಥಾನ ಪಡೆದರು. ಹರ್ಯಾಣದ ರವಿನಾ(1 ಗಂಟೆ 35.40 ನಿಮಿಷ) ಹಾಗೂ ರೈಲ್ವೇಸ್ ತಂಡದ ಮುನಿತಾ ಪ್ರಜಾಪತಿ (1 ಗಂಟೆ 37:40 ನಿಮಿಷ) ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕ ಜಯಿಸಿದರು.
ಇದೇ ವೇಳೆ ಸರ್ವಿಸಸ್‌ನ ಗುಲ್ವೀರ್ ಸಿಂಗ್ ಪುರುಷರ 5000 ಮೀ. ರೇಸ್‌ನಲ್ಲಿ 13 ನಿಮಿಷ 54.70 ಸೆಕೆಂಡ್‌ಗಳಲ್ಲಿ ಗುರಿ ತಲುಪಿ, ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು.