ಯುಎಸ್ ಓಪನ್ ಗೆದ್ದ ಆಸೀಸ್ ಕ್ರಿಕೆಟರ್!

By Web DeskFirst Published 12, Sep 2018, 1:45 PM IST
Highlights

ಅಮೆರಿಕದ ಕೋಕೋ ವ್ಯಾಂಡಿವೀ ಜತೆ ಡಬಲ್ಸ್ ಪ್ರಶಸ್ತಿ ಗೆದ್ದ ಬಾರ್ಟಿ, 2 ವರ್ಷಗಳ ಹಿಂದೆ ಆಸ್ಟ್ರೇಲಿಯಾದ ಬಿಗ್‌ಬ್ಯಾಶ್ ಲೀಗ್‌ನಲ್ಲಿ ಬ್ರಿಸ್ಬೇನ್ ಹೀಟ್ ಪರ ಆಡಿದ್ದರು. 2013ರಲ್ಲಿ 2 ಗ್ರ್ಯಾಂಡ್‌ಸ್ಲಾಂ ಫೈನಲ್ ಪ್ರವೇಶಿಸಿದ್ದ ಬಾರ್ಟಿ, 2014ರ ಯುಎಸ್ ಓಪನ್ ಬಳಿಕ ಟೆನಿಸ್‌ನಿಂದ ದೂರ ಉಳಿದಿದ್ದರು. 

ನ್ಯೂಯಾರ್ಕ್[ಸೆ.12]: ಯುಎಸ್ ಓಪನ್ ಟೆನಿಸ್ ಗ್ರ್ಯಾಂಡ್‌ಸ್ಲಾಂನ ಮಹಿಳಾ ಡಬಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ ಆಸ್ಟ್ರೇಲಿಯಾದ ಆಶ್ಲೆ ಬಾರ್ಟಿ ವೃತ್ತಿಪರ ಕ್ರಿಕೆಟರ್ ಕೂಡ ಹೌದು ಎನ್ನುವುದು ಬಹುತೇಕರಿಗೆ ಗೊತ್ತಿರದ ವಿಚಾರ. 

ಅಮೆರಿಕದ ಕೋಕೋ ವ್ಯಾಂಡಿವೀ ಜತೆ ಡಬಲ್ಸ್ ಪ್ರಶಸ್ತಿ ಗೆದ್ದ ಬಾರ್ಟಿ, 2 ವರ್ಷಗಳ ಹಿಂದೆ ಆಸ್ಟ್ರೇಲಿಯಾದ ಬಿಗ್‌ಬ್ಯಾಶ್ ಲೀಗ್‌ನಲ್ಲಿ ಬ್ರಿಸ್ಬೇನ್ ಹೀಟ್ ಪರ ಆಡಿದ್ದರು. 2013ರಲ್ಲಿ 2 ಗ್ರ್ಯಾಂಡ್‌ಸ್ಲಾಂ ಫೈನಲ್ ಪ್ರವೇಶಿಸಿದ್ದ ಬಾರ್ಟಿ, 2014ರ ಯುಎಸ್ ಓಪನ್ ಬಳಿಕ ಟೆನಿಸ್‌ನಿಂದ ದೂರ ಉಳಿದಿದ್ದರು. 

ಅತಿಯಾದ ಒತ್ತಡ ನಿಭಾಯಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ 18 ವರ್ಷದ ಆಟಗಾರ್ತಿ ಟೆನಿಸ್ ಬಿಟ್ಟು ಕ್ರಿಕೆಟ್‌ನತ್ತ ವಾಲಿದ್ದರು. ಆದರೆ ೨೦೧೭ರಲ್ಲಿ ಟೆನಿಸ್‌ಗೆ ಮರಳಿದ ಬಾರ್ಟಿ, ಇದೀಗ ಗ್ರ್ಯಾಂಡ್ ಸ್ಲಾಂ ಚಾಂಪಿಯನ್ ಆಗಿದ್ದಾರೆ’

Last Updated 19, Sep 2018, 9:24 AM IST