ತೈವಾನ್ ಓಪನ್ ಅಥ್ಲೆಟಿಕ್ಸ್: ಕರ್ನಾಟಕದ ಜಾವೆಲಿನ್ ಪಟು ಮನುಗೆ ಚಿನ್ನದ ಪದಕ

By Kannadaprabha NewsFirst Published Jun 2, 2024, 11:04 AM IST
Highlights

ಮನು ಮೊದಲ 3 ಪ್ರಯತ್ನಗಳಲ್ಲಿ ಕ್ರಮವಾಗಿ 78.32 ಮೀ, 76.80 ಮೀ., 80.59 ಮೀ. ಎಸೆದರೆ, 4ನೇ ಪ್ರಯತ್ನ ಫೌಲ್ ಆಯಿತು. 5ನೇ ಪ್ರಯತ್ನದಲ್ಲಿ 81.52 ಮೀ. ದೂರ ದಾಖಲಿಸಿದ ಮನು ಕೊನೆ ಪ್ರಯತ್ನದಲ್ಲಿ ಮತ್ತಷ್ಟು ಸುಧಾರಿತ ಪ್ರದರ್ಶನ ನೀಡಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ನವದೆಹಲಿ: ಭಾರತದ ತಾರಾ ಜಾವೆಲಿನ್ ಎಸೆತಗಾರ, ಕರ್ನಾಟಕದ ಡಿ.ಪಿ.ಮನು ತೈವಾನ್ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಶನಿವಾರ ನಡೆದ ಸ್ಪರ್ಧೆಯ ಕೊನೆ ಪ್ರಯತ್ನದಲ್ಲಿ ಮನು 81.58 ಮೀ. ದೂರಕ್ಕೆ ಜಾವೆಲಿನ್ ಎಸೆದು ಅಗ್ರಸ್ಥಾನ ಪಡೆದರು. 

ಮನು ಮೊದಲ 3 ಪ್ರಯತ್ನಗಳಲ್ಲಿ ಕ್ರಮವಾಗಿ 78.32 ಮೀ, 76.80 ಮೀ., 80.59 ಮೀ. ಎಸೆದರೆ, 4ನೇ ಪ್ರಯತ್ನ ಫೌಲ್ ಆಯಿತು. 5ನೇ ಪ್ರಯತ್ನದಲ್ಲಿ 81.52 ಮೀ. ದೂರ ದಾಖಲಿಸಿದ ಮನು ಕೊನೆ ಪ್ರಯತ್ನದಲ್ಲಿ ಮತ್ತಷ್ಟು ಸುಧಾರಿತ ಪ್ರದರ್ಶನ ನೀಡಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

Latest Videos

ಸಿಂಗಾಪುರ ಓಪನ್‌ನಲ್ಲಿ ಭಾರತದ ಸವಾಲು ಅಂತ್ಯ

 ಸಿಂಗಾಪುರ: ಸಿಂಗಾಪುರ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಮಹಿಳಾ ಡಬಲ್ಸ್ ಸೆಮಿಫೈನಲ್‌ನಲ್ಲಿ ತ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್ ಸೋಲುವುದರೊಂದಿಗೆ ಟೂರ್ನಿಯಲ್ಲಿ ಭಾರತದ ಪ್ರಶಸ್ತಿ ಕನಸು ಭಗ್ನಗೊಂಡಿದೆ.

ಶನಿವಾರ 47 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಶ್ರೇಯಾಂಕ ರಹಿತ ಭಾರತೀಯ ಜೋಡಿಗೆ ವಿಶ್ವ ನಂ.4, ಜಪಾನ್‌ನ ನಾಮಿ ಶಿದಾ ವಿರುದ್ಧ 23-21, 21-11 ಗೇಮ್‌ಗಳಲ್ಲಿ ಮಟ್ಟುಯಮಾ-ಚಿಹರು ಸೋಲು ಎದುರಾಯಿತು. ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ವಿಶ್ವ ನಂ.2, ಕ್ವಾರ್ಟರ್‌ನಲ್ಲಿ ವಿಶ್ವ ನಂ.6 ಜೋಡಿಗಳ ವಿರುದ್ಧ ಗೆದ್ದಿದ್ದ ತ್ರೀಸಾ-ಗಾಯತ್ರಿ ಜೋಡಿ ಸೆಮೀಸ್‌ನಲ್ಲಿ ನಿರೀಕ್ಷಿತ ಆಟವಾಡಲು ವಿಫಲವಾಯಿತು.

ಫ್ರೆಂಚ್ ಓಪನ್: ಆಲ್ಕರಜ್, ರಬೈನಾ 4ನೇ ಸುತ್ತಿಗೆ

ಪ್ಯಾರಿಸ್: ಚೊಚ್ಚಲ ಬಾರಿ ಫ್ರೆಂಚ್ ಓಪನ್ ಗ್ಯಾನ್ ಸ್ಲಾಂ ಗೆಲ್ಲುವ ಕಾತರದಲ್ಲಿರುವ ಯುವ ತಾರೆ ಕಾರ್ಲೊಸ್ ಆಲ್ಕರಜ್ ಹಾಗೂ ಎಲೆನಾ ರಬೈಕೆನಾ ಟೂರ್ನಿಯಲ್ಲಿ 4ನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಶುಕ್ರವಾರ ರಾತ್ರಿ ನಡೆದ ಪುರುಷರ ಸಿಂಗಲ್ 3ನೇ ಸುತ್ತಿನಲ್ಲಿ ಸ್ಪೇನ್‌ನ 21ರ ಆಲ್ಕರಜ್ ಅಮೆರಿಕದ ಸೆಬಾಸ್ಟಿಯನ್ ಕೊರ್ಡಾವಿರುದ್ಧ6-4,7-6(7/5), 6-3 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. 9ನೇ ಶ್ರೇಯಾಂಕಿತ ಗ್ರೀಸ್‌ನ ಸ್ಟೆಫಾನೊಸ್ ಸಿಟ್ಟಿಪಾಸ್ ಚೀನಾದ ಝಾಂಗ್ ಝಿಝನ್‌ರನ್ನು 6-3, 6-3, 6-1ರಲ್ಲಿ ಸೋಲಿಸಿ 4ನೇ ಸುತ್ತಿಗೇರಿದರು. 5ನೇ ಶ್ರೇಯಾಂಕಿತ ಡ್ಯಾನಿಲ್ ಮೆಡ್ವಡೆವ್, 2ನೇ ಶ್ರೇಯಾಂಕಿತ ಜಾನಿಕ್ ಸಿನ್ನರ್ ಕೂಡಾ 3ನೇಸುತ್ತಿನಲ್ಲಿ ಗೆಲುವು ಸಾಧಿಸಿದರು.

ಅಭ್ಯಾಸ ಪಂದ್ಯ: ಬಾಂಗ್ಲಾ ವಿರುದ್ಧ ಅಬ್ಬರಿಸಿ ಗೆದ್ದ ಟೀಂ ಇಂಡಿಯಾ

ಶನಿವಾರ ಮಹಿಳಾ ಸಿಂಗಲ್ಸ್ 3ನೇ ಸುತ್ತಿನಲ್ಲಿ 4ನೇ ಶ್ರೇಯಾಂಕಿತ, ಕಜಕಸ್ತಾನದ ರಬೈಕೆನಾ, ಬೆಲ್ಸಿಯಂನ ಎಲೈಸ್ ಮೆರ್ಟೆನ್ಸ್ ವಿರುದ್ದ6-4,6-2ರಲ್ಲಿ ಗೆದ್ದರು. ಹಾಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್, ಬೆಲಾರಸ್‌ನ ರಬೈಕೆನಾ ಸ್ಪೇನ್‌ನ ಪಾಲಾ ಬಡೋಸಾ ವಿರುದ್ಧ 7-5, 6-1ರಲ್ಲಿ ಜಯಭೇರಿ ಬಾರಿಸಿದರು.

ಶ್ರೀರಾಮ್ ಪ್ರಿ ಕ್ವಾರ್ಟರ್‌ ಪ್ರವೇಶ

ಟೂರ್ನಿಯ ಪುರುಷರ ಡಬಲ್ಸ್ ನಲ್ಲಿ ಮೆಕ್ಸಿಕೋದ ವೆರೆಲಾ ಮಾರ್ಟಿ ಜೊತೆ ಕಣಕ್ಕಿಳಿದರುವ ಭಾರತದ ಶ್ರೀರಾಮ್ ಬಾಲಾಜಿ ಪ್ರಿ ಕ್ವಾರ್ಟರ್ ಫೈನಲ್‌ಗೇರಿದರು. ಶನಿವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಭಾರತ-ಮೆಕ್ಸಿಕೋ ಜೋಡಿಗೆ ಫ್ರಾನ್ಸ್‌ನ ಡ್ಯಾನ್ ಆ್ಯಡೆಡ್ -ಥಿಯೊ ಆರಿಬಾಜ್ ವಿರುದ್ಧ 6-4, 3-6, 6-2ರಲ್ಲಿ ಗೆಲುವು ಲಭಿಸಿತು.

click me!