ATP Ranking: 68ನೇ ಸ್ಥಾನಕ್ಕೇರಿದ ಭಾರತದ ಸುಮಿತ್‌ ನಗಾಲ್‌

By Kannadaprabha News  |  First Published Jul 17, 2024, 10:50 AM IST

ಈ ಮೊದಲು 71ನೇ ಸ್ಥಾನ ಪಡೆದಿದ್ದು ಅವರ ಶ್ರೇಷ್ಠ ಸಾಧನೆ ಎನಿಸಿತ್ತು. 1973ರಿಂದೀಚೆಗೆ ಪುರುಷರ ಸಿಂಗಲ್ಸ್‌ ವಿಶ್ವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 4ನೇ ಅತ್ಯುತ್ತಮ ಸ್ಥಾನ ಪಡೆದ ಭಾರತೀಯ ಎನ್ನುವ ಹಿರಿಮೆಗೆ ನಗಾಲ್‌ ಪಾತ್ರರಾಗಿದ್ದಾರೆ. 71ನೇ ಸ್ಥಾನ ಪಡೆದಿದ್ದ ಶಶಿ ಮೆನನ್‌ರನ್ನು ನಗಾಲ್‌ ಹಿಂದಿಕ್ಕಿದ್ದಾರೆ.


ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿರುವ ಭಾರತದ ಯುವ ಟೆನಿಸಿಗ ಸುಮಿತ್‌ ನಗಾಲ್‌, ಎಟಿಪಿ ಸಿಂಗಲ್ಸ್‌ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ವೃತ್ತಿಬದುಕಿನ 68ನೇ ಸ್ಥಾನಕ್ಕೇರಿದ್ದಾರೆ. 26 ವರ್ಷದ ನಗಾಲ್‌, ಸೋಮವಾರ ಪ್ರಕಟಗೊಂಡ ನೂತನ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 5 ಸ್ಥಾನ ಏರಿಕೆ ಕಂಡಿದ್ದಾರೆ. 

ಈ ಮೊದಲು 71ನೇ ಸ್ಥಾನ ಪಡೆದಿದ್ದು ಅವರ ಶ್ರೇಷ್ಠ ಸಾಧನೆ ಎನಿಸಿತ್ತು. 1973ರಿಂದೀಚೆಗೆ ಪುರುಷರ ಸಿಂಗಲ್ಸ್‌ ವಿಶ್ವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 4ನೇ ಅತ್ಯುತ್ತಮ ಸ್ಥಾನ ಪಡೆದ ಭಾರತೀಯ ಎನ್ನುವ ಹಿರಿಮೆಗೆ ನಗಾಲ್‌ ಪಾತ್ರರಾಗಿದ್ದಾರೆ. 71ನೇ ಸ್ಥಾನ ಪಡೆದಿದ್ದ ಶಶಿ ಮೆನನ್‌ರನ್ನು ನಗಾಲ್‌ ಹಿಂದಿಕ್ಕಿದ್ದಾರೆ. ವಿಜಯ್‌ ಅಮೃತ್‌ರಾಜ್‌ (1980ರಲ್ಲಿ 18ನೇ ಸ್ಥಾನ), ರಮೇಶ್‌ ಕೃಷ್ಣನ್‌ (1985ರಲ್ಲಿ 23ನೇ ಸ್ಥಾನ), ಸೋಮ್‌ದೇವ್‌ ದೇವರ್ಮನ್‌ (2011ರಲ್ಲಿ 62ನೇ ಸ್ಥಾನ) ನಗಾಲ್‌ಗಿಂತ ಉತ್ತಮ ಸ್ಥಾನ ಪಡೆದ ಭಾರತೀಯ ಟೆನಿಸಿಗರೆನಿಸಿದ್ದಾರೆ.

Tap to resize

Latest Videos

undefined

ವಿಶ್ವ ಕಿರಿಯರ ಸ್ಕ್ಯಾಶ್: ಸೆಮಿಗೆ ಭಾರತದ ಶೌರ್ಯ 

ನವದೆಹಲಿ: ಅಮೆರಿಕದ ಹೂಸ್ಟನ್‌ನಲ್ಲಿ ನಡೆಯುತ್ತಿರುವ ವಿಶ್ವ ಕಿರಿಯರ ಸ್ಕ್ಯಾಶ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ 18 ವರ್ಷದ ಶೌರ್ಯ ಬಾವಾ ಸೆಮಿಫೈನಲ್ ಪ್ರವೇಶಿ ಸಿದ್ದು, ಪದಕ ಖಚಿತಪಡಿಸಿಕೊಂಡಿದ್ದಾರೆ. 2014ರಲ್ಲಿ ಕುಶಾಕುಮಾರ್ ಬಳಿಕ ಸೆಮೀಸ್‌ಗೇರಿ ದ ಕೇವಲ 2ನೇ ಭಾರತೀಯ ಎನ್ನುವ ಹಿರಿಮೆಗೆ ಶೌರ್ಯ ಪಾತ್ರರಾಗಿದ್ದಾರೆ. 

Breaking: ಟಿ20 ವಿಶ್ವಕಪ್ ಗೆದ್ದ ಹಾರ್ದಿಕ್ ಪಾಂಡ್ಯಗೆ ಬಿಗ್ ಶಾಕ್ ನೀಡಲು ಮುಂದಾದ ಬಿಸಿಸಿಐ..!

ಕ್ವಾರ್ಟರ್ ಫೈನಲ್‌ನಲ್ಲಿ ಮಲೇಷ್ಯಾದ ಲೋವಾ-ಸರ್ನ್ ವಿರುದ್ಧ ಶೌರ್ಯ 2-11, 11-4, 10-12, 11-8, 12-10ರಲ್ಲಿ ಗೆಲುವು ಸಾಧಿಸಿದರು. ಬಾಲಕಿಯರ ಕ್ವಾರ್ಟರ್ ಫೈನಲ್‌ನಲ್ಲಿ 16 ವರ್ಷದ ಅನಾಹತ್ ಸಿಂಗ್ ಸೋಲುಂಡರು.

ಭಾರತ ಫುಟ್ಬಾಲ್ ತಂಡದ ಕೋಚ್ ನೇಮಕಕ್ಕೆ ಕೇಂದ್ರದ ನೆರವು ಕೋರಿದ ಎಐಎಫ್‌ಎಫ್!

ನವದೆಹಲಿ: ಭಾರತ ಪುರುಷ ಹಾಗೂ ಮಹಿಳಾ ಫುಟ್ಬಾಲ್ ತಂಡಗಳಿಗೆ ನೂತನ ಕೋಚ್ ನೇಮಿಸಲು ನೆರವು ನೀಡುವಂತೆ ಕೇಂದ್ರ ಕ್ರೀಡಾ ಸಚಿವ ಮನ್‌ಸುಖ್ ಮಾಂಡವಿಯಾ ಅವರಿಗೆ ಅಖಿಲ ಭಾರತ ಫುಟ್ಬಾಲ್ ಫೆಡ ರೇಶನ್ (ಎಐಎಫ್‌ಎಫ್) ಮನವಿ ಸಲ್ಲಿಸಿದೆ. 

ಮಂಗಳವಾರ ಸಚಿವರನ್ನು ಭೇಟಿಯಾಗಿದ್ದ ಎಐಎಫ್‌ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ, ಹಂಗಾಮಿ ಕಾರ್ಯದರ್ಶಿ ಸತ್ಯನಾರಾಯಣ ಇನ್ನೂ ಕೆಲ ವಿಚಾರಗಳನ್ನು ಪ್ರಸ್ತಾ ಪಿಸಿದರು. 2026ರ ಏಷ್ಯನ್ ಗೇಮ್ಸ್ ಸಿದ್ಧತೆಗೆ ಬೇಕಿರುವ ನೆರವು ಒದಗಿ ಸುವಂತೆ ಕೋರಿದ ಎಐಎಫ್‌ಎಫ್, ದೇಶದಲ್ಲಿ ಗೋಲ್‌ಕೀಪರ್‌ಗಳಿಗೆ ತರಬೇತಿನೀಡಲು ಅಕಾಡೆಮಿವೊಂದನ್ನು ಸ್ಥಾಪಿಸಲು ಬೇಕಿರುವ ಆರ್ಥಿಕ ನೆರವು ನೀಡುವಂತೆ ಮನವಿ ಸಲ್ಲಿಸಿತು. ಎಐಎಫ್‌ಎಫ್ ಮನವಿ ಯನ್ನು ಪರಿಗಣಿಸುವುದಾಗಿ ಮಾಂಡವೀಯ ಭರವಸೆ ನೀಡಿದರು ಎನ್ನಲಾಗಿದೆ.

ಬೆಂಗಳೂರಿನಲ್ಲಿ ವಿಶ್ವದರ್ಜೆಯ ಲಕ್ಷ್ಯನ್ ಅಕಾಡೆಮಿ ಕಾರ್ಯಾರಂಭ: ಏನಿದರ ವಿಶೇಷತೆ..?

ಜರ್ಮನಿಯ ಫುಟ್ಬಾಲಿಗ ಥಾಮಸ್‌ ಮುಲ್ಲರ್‌ ನಿವೃತ್ತಿ

ಮ್ಯೂನಿಚ್‌(ಜರ್ಮನಿ): ಜರ್ಮನಿಯ ತಾರಾ ಫುಟ್ಬಾಲಿಗ ಥಾಮಸ್‌ ಮುಲ್ಲರ್‌ ಸೋಮವಾರಾ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಫಾರ್ವರ್ಡರ್‌ ಆಗಿದ್ದ 34 ವರ್ಷದ ಮುಲ್ಲರ್‌ ಜರ್ಮನಿ ಪರ 131 ಪಂದ್ಯಗಳನ್ನಾಡಿದ್ದು, 45 ಗೋಲು ಬಾರಿಸಿದ್ದಾರೆ. 2010ರಲ್ಲಿ ಜರ್ಮನಿ ಪರ ಮೊದಲ ಪಂದ್ಯವಾಡಿದ್ದ ಅವರು, 2014ರಲ್ಲಿ ಫಿಫಾ ವಿಶ್ವಕಪ್‌ ವಿಜೇತ ತಂಡದಲ್ಲಿದ್ದರು. ಇತ್ತೀಚೆಗೆ ಯುರೋ ಕಪ್‌ನಲ್ಲಿ ಸ್ಪೇನ್‌ ವಿರುದ್ಧ ಕ್ವಾರ್ಟರ್‌ ಫೈನಲ್‌ನಲ್ಲಿ ಕೊನೆ ಬಾರಿ ಆಡಿದ್ದರು.

click me!