ಈ ಗ್ರಾಮೀಣ ಪ್ರತಿಭೆಯೂ ಆಗಬಹುದು ನೀರಜ್ ಚೋಪ್ರಾ, ಪ್ರೋತ್ಸಾಹಿಸಿ ಎಂದು ಮನವಿ ಮಾಡಿದ ನಟಿ ಶ್ವೇತಾ ಶ್ರೀವಾತ್ಸವ್

By Naveen Kodase  |  First Published Mar 30, 2024, 3:58 PM IST

ಶ್ವೇತಾ ಶ್ರೀವಾತ್ಸವ್, ನಾನು ನನ್ನ ಕೈಲಾದ ಸಪೋರ್ಟ್ ಮಾಡ್ತೇನೆ. ದೇಶದ ಪರವಾಗಿ ಕ್ರೀಡೆಯಲ್ಲಿ ಪದಕ ಗೆಲ್ಲುವ ಕನಸು ಇಟ್ಟುಕೊಂಡಿರುವ ಮನೋಜ್‌ಗೆ ಒಳಿತಾಗಲಿ. ಹಾಗೆಯೇ ದಯವಿಟ್ಟು ಕ್ರೀಡೆ ಬಗ್ಗೆ ಗೊತ್ತಿರುವವರು, ಕ್ರೀಡಾ ಪ್ರೇಮಿಗಳು ಸಪೋರ್ಟ್ ಮಾಡಿ ನೆರವಾಗಿ ಎಂದು ಮನವಿ ಮಾಡಿಕೊಂಡಿದ್ದಾರೆ.


ಬೆಂಗಳೂರು(ಮಾ.30): ಗ್ರಾಮೀಣ ಪ್ರದೇಶದಲ್ಲಿ ಹಲವಾರು ಕ್ರೀಡಾ ಪ್ರತಿಭೆಗಳಿರುತ್ತವೆ. ಆದರೆ ಅವರಿಗೆ ಸೂಕ್ತ ಮಾರ್ಗದರ್ಶನದ ಕೊರತೆಯಿಂದಾಗಿ ಹಲವಾರು ಪ್ರತಿಭೆ ನಶಿಸಿ ಹೋಗುತ್ತಿವೆ. ಇದೀಗ ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಶ್ವೇತಾ ಶ್ರೀವಾತ್ಸವ್, ಚಿಕ್ಕಮಗಳೂರು ಜಿಲ್ಲೆಯ ಗ್ರಾಮೀಣ ಜಾವೆಲಿನ್ ಥ್ರೋ ಪಟುವೊಬ್ಬರು ಪರಿಚಯ ಮಾಡಿಕೊಟ್ಟಿದ್ದು, ಸೂಕ್ತ ನೆರವು ಸಿಕ್ಕಿದರೆ ಈತನೂ ಮುಂದೊಂದು ದಿನ ಮತ್ತೊಬ್ಬ ನೀರಜ್ ಚೋಪ್ರಾ ಆಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಖ್ಯಾತಿಯ ನಟಿ ಶ್ವೇತಾ ಶ್ರೀವಾತ್ಸವ್, ಚಿಕ್ಕಮಗಳೂರಿನ ರೆಸಾರ್ಟ್‌ವೊಂದಕ್ಕೆ ಭೇಟಿ ನೀಡಿದಾಗ ಮನೋಜ್ ಕೆ ಎನ್ನುವ ಗ್ರಾಮೀಣ ಜಾವೆಲಿನ್ ಥ್ರೋ ಪಟುವಿನ ಪರಿಚಯವಾಗಿದೆ. ಒಲಿಂಪಿಕ್ಸ್‌ ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ದೇಶದ ಮನೆಮಾತಾಗಿರುವ ನೀರಜ್ ಚೋಪ್ರಾ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಜಾವೆಲಿನ್ ಥ್ರೋನಲ್ಲಿ ಮನೋಜ್ ಎನ್ನುವ 17 ವರ್ಷದ ಗ್ರಾಮೀಣ ಪ್ರತಿಭೆ ಸುಮಾರು 45 ಮೀಟರ್ ದೂರ ಜಾವೆಲಿನ್ ಎಸೆಯುತ್ತಿದ್ದು, ಇಂತಹ ಹುಡುಗನಿಗೆ ಸೂಕ್ತ ನೆರವಿನ ಅಗತ್ಯವಿದೆ ಎಂದು ಸೋಷಿಯಲ್ ಮೀಡಿಯಾ ಮೂಲಕ ಮನವಿ ಮಾಡಿಕೊಂಡಿದ್ದಾರೆ.

Tap to resize

Latest Videos

undefined

KKR ಎದುರು ಆರ್‌ಸಿಬಿ ಸೋಲಿಗೆ ಕಾರಣಗಳೇನು..? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

ಚಿಕ್ಕಮಗಳೂರಿನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಮನೋಜ್, 10ನೇ ತರಗತಿಯಲ್ಲಿದ್ದಾಗ ನಮ್ಮ ದೈಹಿಕ ಶಿಕ್ಷಕರ ಸಹಕಾರದಿಂದ ಹಲವು ಕ್ರೀಡಾಕೂಟದಲ್ಲಿ ಭಾಗವಹಿಸಿ ಸಾಧನೆ ಮಾಡಿದೆ. ಆದರೆ ಸ್ಪಾನ್ಸರ್‌ಗಳ ಕೊರತೆಯಿಂದಾಗಿ ರಾಜ್ಯ ಹಾಗೂ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಲು ಸಾಧ್ಯವಾಗಲಿಲ್ಲ. ತಾಲೂಕು ಹಂತದಲ್ಲಿ ಯಾರಾದರೂ ನನಗೆ ಸಪೋರ್ಟ್ ಮಾಡಿದ್ದರೆ ನಾನು ರಾಷ್ಟ್ರಮಟ್ಟಕ್ಕೆ ಹೋಗುತ್ತಿದ್ದೆ, ರಾಜ್ಯಮಟ್ಟದಲ್ಲಿ ಪದಕ ಗೆಲ್ಲುತ್ತಿದ್ದೆ. ನಮ್ಮಂತ ಹುಡುಗರಿಗೆ ಸಪೋರ್ಟ್ ಮಾಡಿದರೆ, ಗ್ರಾಮೀಣ ಹುಡುಗರು ಸಾಧನೆ ಮಾಡಲು ಸಾಧ್ಯ ಎಂದು ಮನೋಜ್ ಹೇಳಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿರುವ ಶ್ವೇತಾ ಶ್ರೀವಾತ್ಸವ್, ನಾನು ನನ್ನ ಕೈಲಾದ ಸಪೋರ್ಟ್ ಮಾಡ್ತೇನೆ. ದೇಶದ ಪರವಾಗಿ ಕ್ರೀಡೆಯಲ್ಲಿ ಪದಕ ಗೆಲ್ಲುವ ಕನಸು ಇಟ್ಟುಕೊಂಡಿರುವ ಮನೋಜ್‌ಗೆ ಒಳಿತಾಗಲಿ. ಹಾಗೆಯೇ ದಯವಿಟ್ಟು ಕ್ರೀಡೆ ಬಗ್ಗೆ ಗೊತ್ತಿರುವವರು, ಕ್ರೀಡಾ ಪ್ರೇಮಿಗಳು ಸಪೋರ್ಟ್ ಮಾಡಿ ನೆರವಾಗಿ ಎಂದು ಮನವಿ ಮಾಡಿಕೊಂಡಿದ್ದಾರೆ.

 

click me!