ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌: ಕ್ವಾರ್ಟರ್‌ಗೆ ಲಗ್ಗೆಯಿಟ್ಟ ಸೈನಾ

By Web Desk  |  First Published Sep 28, 2018, 9:32 AM IST

5ನೇ ಶ್ರೇಯಾಂಕಿತೆ ಸೈನಾ, ಕ್ವಾರ್ಟರ್‌ಫೈನಲ್‌ನಲ್ಲಿ 2017ರ ವಿಶ್ವ ಚಾಂಪಿಯನ್‌, 3ನೇ ಶ್ರೇಯಾಂಕಿತೆ ಜಪಾನ್‌ನ ನಜೋಮಿ ಒಕುಹಾರರನ್ನು ಎದುರಿಸಲಿದ್ದಾರೆ. ಜಪಾನ್‌ ಆಟಗಾರ್ತಿ ವಿರುದ್ಧ ಸೈನಾ 6-3 ಗೆಲುವು-ಸೋಲಿನ ದಾಖಲೆ ಹೊಂದಿದ್ದರೂ, ಕಳೆದ 2 ಮುಖಾಮುಖಿಗಳಲ್ಲಿ ಭಾರತೀಯ ಆಟಗಾರ್ತಿ ಸೋಲುಂಡಿದ್ದರು.

ಸೋಲ್‌(ಸೆ.28): ಭಾರತದ ತಾರಾ ಶಟ್ಲರ್‌ ಸೈನಾ ನೆಹ್ವಾಲ್‌, ಇಲ್ಲಿ ನಡೆಯುತ್ತಿರುವ ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. 

ಗುರುವಾರ ನಡೆದ ಮಹಿಳಾ ಸಿಂಗಲ್ಸ್‌ ಪ್ರಿ ಕ್ವಾರ್ಟರ್‌ ಪಂದ್ಯದಲ್ಲಿ ಸೈನಾ, ಕೊರಿಯಾದ ಕಿಮ್‌ ಗಾ ಯುನ್‌ ವಿರುದ್ಧ 21-18, 21-18 ನೇರ ಗೇಮ್‌ಗಲ್ಲಿ ಗೆಲುವು ಸಾಧಿಸಿದರು. ಕೇವಲ 37 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸೈನಾ ಪ್ರಾಬಲ್ಯ ಮೆರೆದರು.

Tap to resize

Latest Videos

5ನೇ ಶ್ರೇಯಾಂಕಿತೆ ಸೈನಾ, ಕ್ವಾರ್ಟರ್‌ಫೈನಲ್‌ನಲ್ಲಿ 2017ರ ವಿಶ್ವ ಚಾಂಪಿಯನ್‌, 3ನೇ ಶ್ರೇಯಾಂಕಿತೆ ಜಪಾನ್‌ನ ನಜೋಮಿ ಒಕುಹಾರರನ್ನು ಎದುರಿಸಲಿದ್ದಾರೆ. ಜಪಾನ್‌ ಆಟಗಾರ್ತಿ ವಿರುದ್ಧ ಸೈನಾ 6-3 ಗೆಲುವು-ಸೋಲಿನ ದಾಖಲೆ ಹೊಂದಿದ್ದರೂ, ಕಳೆದ 2 ಮುಖಾಮುಖಿಗಳಲ್ಲಿ ಭಾರತೀಯ ಆಟಗಾರ್ತಿ ಸೋಲುಂಡಿದ್ದರು.

ಜನವರಿಯಲ್ಲಿ ಇಂಡೋನೇಷ್ಯಾ ಮಾಸ್ಟ​ರ್‍ಸ್ನಲ್ಲಿ ಫೈನಲ್‌ಗೇರಿದ್ದ ಸೈನಾ, ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದರು. ಈ ವರ್ಷ ಅದೊಂದೇ ಪ್ರಶಸ್ತಿ ಅವರು ಗೆದ್ದಿರುವುದು.
 
click me!