ಅರಸಿ ಬಂದ ಪುರಸ್ಕಾರ ತಿರಸ್ಕರಿಸಿದ ಸಚಿನ್ ತೆಂಡೂಲ್ಕರ್ !

By Web DeskFirst Published Sep 20, 2018, 8:01 PM IST
Highlights

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್‌ ಕ್ರಿಕೆಟ್‌ನಿಂದ ನಿವೃತ್ತಿಯಾದರೂ, ಸಚಿನ್‌ ಸಾಧನೆ ಪರಗಣಿಸಿ ಈಗಲೂ ಪ್ರಶಸ್ತಿಗೂ  ಬರುತ್ತಿದೆ. ಇದೀಗ ಸಚಿನ್ ತೆಂಡೂಲ್ಕರ್ ತಮನ್ನ ಅರಸಿ ಬಂದ ಪುರಸ್ಕಾರವನ್ನ ತಿರಸ್ಕರಿಸಿದ್ದಾರೆ. 

ಕೋಲ್ಕತ್ತಾ(ಸೆ.20): 24 ವರ್ಷ ವಿಶ್ವ ಕ್ರಿಕೆಟ್ ಆಳಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಗರಿಷ್ಟ ದಾಖಲೆಗಳನ್ನ ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.  ಸಚಿನ ಸಾಧನೆ ಪರಿಗಣಿಸಿ ಭಾರತ ರತ್ನ, ಖೇಲ್ ರತ್ನ, ಪದ್ಮಶ್ರೀ ಸೇರಿದಂತೆ ಹಲವು ಪ್ರಶಸ್ತಿಗೆ ಸಚಿನ್ ತೆಂಡೂಲ್ಕರ್ ಭಾಜನರಾಗಿದ್ದಾರೆ. ಇದೀಗ ಸಚಿನ್‌ ತೆಂಡೂಲ್ಕರ್ ತಮಗೆ ಅರಸಿ ಬಂದ  ಪ್ರಶಸ್ತಿಯನ್ನ ತಿರಸ್ಕರಿಸಿದ್ದಾರೆ.

ಕೋಲ್ಕತ್ತಾದ ಜಾದವಪುರ ವಿಶ್ವವಿದ್ಯಾನಿಲಯ ವಾರ್ಷಿಕ ಘಟಿಕೋತ್ಸವಕ್ಕೆ ಸಚಿನ್ ತೆಂಡೂಲ್ಕರ್‌ಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿತ್ತು. ಇದಕ್ಕಾಗಿ ಜಾದವಪುರ ಯುನಿವರ್ಸಿಟಿ ಸಚಿನ್ ತೆಂಡೂಲ್ಕರ್‌ಗೆ ಇ-ಮೇಲ್ ಮೂಲಕ ಗೌರವ ಡಾಕ್ಟರೇಟ್ ಮನವಿ ಮಾಡಿತ್ತು.

ಜಾದವಪುರ ವಿಶ್ವವಿದ್ಯಾನಿಲಯದ ಮನವಿಯನ್ನ ಸಚಿನ್ ತೆಂಡೂಲ್ಕರ್ ತಿರಸ್ಕರಿಸಿದ್ದಾರೆ. ಈ ಕುರಿತು ಜಾದಪುರ ಯುನಿವರ್ಸಿಟಿ ಉಪ ಕುಲಪತಿ ಸುರಂಜನ್ ದಾಸ್ ಸ್ಪಷ್ಟಪಡಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ಗೌರವ ಡಾಕ್ಟರೇಟ್ ಪದವಿ ತಿರಸ್ಕರಿಸಿದ್ದು ಇದೇ ಮೊದಲಲ್ಲ. 2011ರಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾನಿಯ ಸಚಿನ್ ತೆಂಡೂಲ್ಕರ್‌ಗೆ ಗೌರವ ಡಾಕ್ಟರೇಟ್ ನೀಡಲು ಮುಂದಾಗಿತ್ತು. ಆದರೆ ಸಚಿನ್ ಈ ಮನವಿಯನ್ನ ತಿರಸ್ಕರಿಸಿದ್ದರು.

click me!