ಪ್ರೊ ಕಬಡ್ಡಿ: ಟೈಟಾನ್ಸ್ ಎದುರು ಪೈರೇಟ್ಸ್‌ಗೆ ಆಘಾತ!

By Web DeskFirst Published Dec 14, 2018, 11:14 AM IST
Highlights

7 ಗೆಲುವುಗಳೊಂದಿಗೆ 4ನೇ ಸ್ಥಾನದಲ್ಲಿರುವ ಬೆಂಗಾಲ್‌ ವಾರಿಯರ್ಸ್’ಗಿನ್ನು 7 ಪಂದ್ಯಗಳು ಬಾಕಿ ಇದ್ದು, ಟೈಟಾನ್ಸ್‌ ಹಿಂದಿಕ್ಕಿ ಪ್ಲೇ-ಆಫ್‌ಗೇರಬಹುದಾದ ಸಾಧ್ಯತೆ ಹೆಚ್ಚಿದೆ. ಪಾಟ್ನಾ 18 ಪಂದ್ಯಗಳಲ್ಲಿ 8ನೇ ಸೋಲು ಕಂಡಿರುವ ಪಾಟ್ನಾ, 52 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿ ಉಳಿದುಕೊಂಡಿದೆ.

ವಿಶಾಖಪಟ್ಟಣಂ[ಡಿ.14]: ಪ್ರೊ ಕಬಡ್ಡಿ 6ನೇ ಆವೃತ್ತಿಯಲ್ಲಿ ತೆಲುಗು ಟೈಟಾನ್ಸ್‌ ತನ್ನ ತವರಿನ ಚರಣವನ್ನು ಗೆಲುವಿನೊಂದಿಗೆ ಮುಕ್ತಾಯಗೊಳಿಸಿದೆ. ಗುರುವಾರ ಇಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಪಾಟ್ನಾ ಪೈರೇಟ್ಸ್‌ ವಿರುದ್ಧ 41-36 ಅಂಕಗಳ ಗೆಲುವು ಸಾಧಿಸಿದ ಟೈಟಾನ್ಸ್‌, ಪ್ಲೇ-ಆಫ್‌ಗೇರುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. 

ತಂಡಕ್ಕಿದು 19 ಪಂದ್ಯಗಳಲ್ಲಿ 8ನೇ ಗೆಲುವಾಗಿದ್ದು, ಉಳಿದಿರುವ 3 ಪಂದ್ಯಗಳಲ್ಲಿ ಗೆಲುವು ಕಾಣಬೇಕಿದೆ. ಆದರೆ 7 ಗೆಲುವುಗಳೊಂದಿಗೆ 4ನೇ ಸ್ಥಾನದಲ್ಲಿರುವ ಬೆಂಗಾಲ್‌ ವಾರಿಯರ್ಸ್’ಗಿನ್ನು 7 ಪಂದ್ಯಗಳು ಬಾಕಿ ಇದ್ದು, ಟೈಟಾನ್ಸ್‌ ಹಿಂದಿಕ್ಕಿ ಪ್ಲೇ-ಆಫ್‌ಗೇರಬಹುದಾದ ಸಾಧ್ಯತೆ ಹೆಚ್ಚಿದೆ. ಪಾಟ್ನಾ 18 ಪಂದ್ಯಗಳಲ್ಲಿ 8ನೇ ಸೋಲು ಕಂಡಿರುವ ಪಾಟ್ನಾ, 52 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿ ಉಳಿದುಕೊಂಡಿದೆ. ಪಾಟ್ನಾ ಈ ಪಂದ್ಯ ಸೋತಿದ್ದು, ಅಗ್ರಸ್ಥಾನದಲ್ಲಿರುವ ಬೆಂಗಳೂರು ಬುಲ್ಸ್‌ಗೆ ಲಾಭ ತಂದಿದೆ. ಉಭಯ ತಂಡಗಳಿಗೆ ಇನ್ನು 4 ಪಂದ್ಯಗಳು ಬಾಕಿ ಇದ್ದು, 12 ಅಂಕಗಳ ಅಂತರವಿದೆ.

ತಾರಾ ರೈಡರ್‌ಗಳಾದ ರಾಹುಲ್‌ ಚೌಧರಿ (13 ಅಂಕ) ಹಾಗೂ ನೀಲೇಶ್‌ ಸಾಳುಂಕೆ (09 ಅಂಕ) ಆಕರ್ಷಕ ಪ್ರದರ್ಶನ ಟೈಟಾನ್ಸ್‌ಗೆ ನೆರವಾಯಿತು. ಮೊದಲಾರ್ಧದಲ್ಲಿ ಅಂಕ ಗಳಿಸದ ಪಾಟ್ನಾ ನಾಯಕ ಪ್ರದೀಪ್‌ ನರ್ವಾಲ್‌, ದ್ವಿತೀಯಾರ್ಧದಲ್ಲಿ ಹೋರಾಡಿ 12 ಅಂಕ ಕಲೆಹಾಕಿದರು. ಆದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಮೊದಲಾರ್ಧದಲ್ಲಿ ಟೈಟಾನ್ಸ್‌ 26-15ರ ಮುನ್ನಡೆ ಪಡೆದುಕೊಂಡಿತು. ದ್ವಿತೀಯಾರ್ಧದಲ್ಲೂ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಿದ ಟೈಟಾನ್ಸ್‌ 5 ಅಂಕಗಳ ಜಯ ಸಾಧಿಸಿತು.

ಟರ್ನಿಂಗ್‌ ಪಾಯಿಂಟ್‌: ಮೊದಲಾರ್ಧದ ಮುಕ್ತಾಯಕ್ಕೆ ಸಾಧಿಸಿದ 11 ಅಂಕಗಳ ಮುನ್ನಡೆ ಟೈಟಾನ್ಸ್‌ ಗೆಲುವಿಗೆ ನೆರವಾಯಿತು.

ಶ್ರೇಷ್ಠ ರೈಡರ್‌: ರಾಹುಲ್‌ (ಟೈಟಾನ್ಸ್‌ 13 ಅಂಕ)

ಶ್ರೇಷ್ಠ ಡಿಫೆಂಡರ್‌: ಮೋಷೆನ್‌ (ಟೈಟಾನ್ಸ್‌, 04 ಅಂಕ)

click me!