19 ಪಂದ್ಯಗಳಲ್ಲಿ ಪಾಟ್ನಾಗಿದು 9ನೇ ಸೋಲು. ತಂಡ 52 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಬುಲ್ಸ್ 18 ಪಂದ್ಯಗಳಿಂದ 64 ಅಂಕ ಪಡೆದಿದ್ದು, ಮುಂದಿನ ಪಂದ್ಯದಲ್ಲಿ ಜಯಿಸಿದರೆ, ತಂಡದ ಅಂಕ 69ಕ್ಕೇರಲಿದೆ.
ಪಂಚಕುಲಾ[ಡಿ.17]: ಪ್ರೊ ಕಬಡ್ಡಿ 6ನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ನಿರ್ಣಾಯಕ ಹಂತದಲ್ಲಿ ಸೋಲಿನ ಹಳಿಗಿಳಿದಿದೆ. ಭಾನುವಾರ ಇಲ್ಲಿನ ತೌ ದೇವಿ ಲಾಲ್ ಕ್ರೀಡಾಂಗಣದಲ್ಲಿ ನಡೆದ ‘ಬಿ’ ವಲಯದ ಪಂದ್ಯದಲ್ಲಿ ಪಾಟ್ನಾ, ಯುಪಿ ಯೋಧಾ ವಿರುದ್ಧ 31-47 ಅಂತರದಲ್ಲಿ ಪರಾಭವಗೊಂಡಿತು.
Standout performances from raiders and defenders alike made sure and walked away with convincing wins on the night.
Here's the night in pictures.
For more such moments, click on https://t.co/In5qqtOLts pic.twitter.com/bFFja2qJ9o
ಇದರೊಂದಿಗೆ ಬೆಂಗಳೂರು ಬುಲ್ಸ್, ‘ಬಿ’ ವಲಯದಲ್ಲಿ ಅಗ್ರಸ್ಥಾನದೊಂದಿಗೆ ಪ್ಲೇ-ಆಫ್ ಗೇರುವ ಸಾಧ್ಯತೆ ಹೆಚ್ಚಿದೆ. 19 ಪಂದ್ಯಗಳಲ್ಲಿ ಪಾಟ್ನಾಗಿದು 9ನೇ ಸೋಲು. ತಂಡ 52 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಬುಲ್ಸ್ 18 ಪಂದ್ಯಗಳಿಂದ 64 ಅಂಕ ಪಡೆದಿದ್ದು, ಮುಂದಿನ ಪಂದ್ಯದಲ್ಲಿ ಜಯಿಸಿದರೆ, ತಂಡದ ಅಂಕ 69ಕ್ಕೇರಲಿದೆ. ಪಾಟ್ನಾ ತನಗೆ ಉಳಿದಿರುವ 3 ಪಂದ್ಯಗಳಲ್ಲಿ ಗೆದ್ದರೂ
ಗರಿಷ್ಠ 15 ಅಂಕ ಸಂಪಾದಿಸಲಿದ್ದು, ಒಟ್ಟಾರೆ 67ಕ್ಕೇರಬಹುದು. ಆದರೆ 4ನೇ ಸ್ಥಾನದಲ್ಲಿರುವ ಬೆಂಗಾಲ್ ವಾರಿಯರ್ಸ್ ಗೆ ಇನ್ನೂ 6 ಪಂದ್ಯ ಬಾಕಿ ಇದ್ದು, ಗರಿಷ್ಠ 30 ಅಂಕ ಗಳಿಸಬಹುದಾಗಿದೆ. ಹೀಗಾಗಿ, ಬೆಂಗಾಲ್ ಫಲಿತಾಂಶದ ಮೇಲೆ ಬುಲ್ಸ್ ಕಣ್ಣಿಡಬೇಕಿದೆ.
14ನೇ ನಿಮಿಷದಲ್ಲಿ ಪಾಟ್ನಾವನ್ನು ಆಲೌಟ್ ಮಾಡಿದ ಯು.ಪಿ, 15-10ರಲ್ಲಿ ಮುನ್ನಡೆಯಿತು. ಮೊದಲಾರ್ಧದ ಮುಕ್ತಾಯಕ್ಕೆ ಯುಪಿ 22-17ರ ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದಲ್ಲೂ ಪಾಟ್ನಾ ಪುಟಿದೇಳಲಿಲ್ಲ. 24ನೇ ನಿಮಿಷ 2ನೇ ಬಾರಿ, 29ನೇ ನಿಮಿಷದಲ್ಲಿ 3ನೇ ಬಾರಿಗೆ ಆಲೌಟ್ ಆದ ಕಾರಣ ಯೋಧಾ ಮುನ್ನಡೆ 38-21ಕ್ಕೇರಿತು. ಇದರೊಂದಿಗೆ ಯೋಧಾ ಗೆಲುವು ಖಚಿತವಾಯಿತು. ಪಂದ್ಯದುದ್ದಕ್ಕೂ ರೈಡ್ ಮಷಿನ್ ಪ್ರದೀಪ್ ನರ್ವಾಲ್ ವೈಫಲ್ಯ ಅನುಭವಿಸಿದರು.
ಶ್ರೇಷ್ಠ ರೈಡರ್:ಪ್ರಶಾಂತ್ (ಯೋಧಾ, 10 ಅಂಕ)
ಶ್ರೇಷ್ಠ ಡಿಫೆಂಡರ್: ಸಚಿನ್ (ಯೋಧಾ, 05 ಅಂಕ]
ಗುಜರಾತ್ ತಂಡಕ್ಕೆ 15ನೇ ಗೆಲುವು:
‘ಎ’ ವಲಯದಲ್ಲಿ ಅಗ್ರಸ್ಥಾನದೊಂದಿಗೆ ಪ್ಲೇ-ಆಫ್‌ಗೇರಲು ಪೈಪೋಟಿ ಹೆಚ್ಚುತ್ತಿದೆ. ಜೈಪುರ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ 34-30ರಲ್ಲಿ ಗೆದ್ದ ಗುಜರಾತ್, 15ನೇ ಗೆಲುವು ಸಂಪಾದಿಸಿದೆ.
Fortune favours again!
Leaving no stone unturned, Sunil Kumar & Co. ensured a panga-packed performance to go all the way against the home team.
Relive the match here: https://t.co/T7BoxSLJu6. pic.twitter.com/1Gg5vgl0h0
20 ಪಂದ್ಯಗಳಿಂದ 83 ಅಂಕ ಪಡೆದು 2ನೇ ಸ್ಥಾನದಲ್ಲಿದೆ. ತವರು ಚರಣದ ಮೊದಲೆರಡು ಪಂದ್ಯಗಳಲ್ಲಿ ಅಜೇಯವಾಗಿದ್ದ ಪ್ಯಾಂಥರ್ಸ್ ತಂಡಕ್ಕೆ ಇದು 11ನೇ ಸೋಲಾಗಿದೆ.
ವರದಿ: ಸ್ಪಂದನ್ ಕಣಿಯಾರ್, ಕನ್ನಡಪ್ರಭ