11 ಅಂಕ ಗಳಿಸಿದ ಪ್ರದೀಪ್ ನರ್ವಾಲ್, ಪಾಟ್ನಾ ಗೆಲುವಿಗೆ ಅಡಿಪಾಯ ಹಾಕಿಕೊಟ್ಟರೆ 10 ಅಂಕಗಳಿಸಿದ ಮಂಜೀತ್ ಜಯದಲ್ಲಿ ಮಿಂಚಿದರು. ಪ್ರದೀಪ್ 11 ಅಂಕ ಗಳಿಸಿ ಪ್ರೊ ಕಬಡ್ಡಿ ಇತಿಹಾಸದಲ್ಲಿ ಗರಿಷ್ಠ ಸೂಪರ್ 10 (33) ಮಾಡಿದ ದಾಖಲೆ ಬರೆದರೆ, ಜೈಪುರ ನಾಯಕ ಅನೂಪ್ ಕುಮಾರ್ ಲೀಗ್‌ನಲ್ಲಿ 500 ರೈಡಿಂಗ್ ಅಂಕ ಪೂರೈಸಿದರು.
ಪಾಟ್ನಾ: ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ಪ್ರೊ ಕಬಡ್ಡಿ 6ನೇ ಆವೃತ್ತಿಯ ತವರಿನ ಚರಣವನ್ನು ಭರ್ಜರಿ ಗೆಲುವಿನೊಂದಿಗೆ ಆರಂಭಿಸಿದೆ. ಶನಿವಾರ ಇಲ್ಲಿ ನಡೆದ ಅಂತರ ವಲಯ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 41-30 ಅಂಕಗಳ ಗೆಲುವು ಸಾಧಿಸಿತು.
11 ಅಂಕ ಗಳಿಸಿದ ಪ್ರದೀಪ್ ನರ್ವಾಲ್, ಪಾಟ್ನಾ ಗೆಲುವಿಗೆ ಅಡಿಪಾಯ ಹಾಕಿಕೊಟ್ಟರೆ 10 ಅಂಕಗಳಿಸಿದ ಮಂಜೀತ್ ಜಯದಲ್ಲಿ ಮಿಂಚಿದರು. ಪ್ರದೀಪ್ 11 ಅಂಕ ಗಳಿಸಿ ಪ್ರೊ ಕಬಡ್ಡಿ ಇತಿಹಾಸದಲ್ಲಿ ಗರಿಷ್ಠ ಸೂಪರ್ 10 (33) ಮಾಡಿದ ದಾಖಲೆ ಬರೆದರೆ, ಜೈಪುರ ನಾಯಕ ಅನೂಪ್ ಕುಮಾರ್ ಲೀಗ್‌ನಲ್ಲಿ 500 ರೈಡಿಂಗ್ ಅಂಕ ಪೂರೈಸಿದರು. ಮೊದಲಾರ್ಧದ ಮುಕ್ತಾಯಕ್ಕೆ ಪಾಟ್ನಾ 22-15ರ ಮುನ್ನಡೆ ಪಡೆಯಿತು. ದ್ವಿತೀಯಾರ್ಧದ 30ನೇ ನಿಮಿಷದಲ್ಲಿ ಜೈಪುರವನ್ನು ಆಲೌಟ್ ಮಾಡಿ ಮುನ್ನಡೆಯನ್ನು 33-21ಕ್ಕೆ ಹೆಚ್ಚಿಸಿಕೊಂಡು ಗೆದ್ದಿತು.
ಟರ್ನಿಂಗ್ ಪಾಯಿಂಟ್: 30ನೇ ನಿಮಿಷದಲ್ಲಿ ಜೈಪುರ ಆಲೌಟ್ ಆಗಿದ್ದು ಪಾಟ್ನಾ ಗೆಲುವಿಗೆ ಪ್ರಮುಖ ಕಾರಣವಾಯಿತು.
ಗುಜರಾತ್‌ಗೆ ಗೆಲುವು
ಶುಕ್ರವಾರ ರಾತ್ರಿ ನಡೆದ 2ನೇ ಪಂದ್ಯದಲ್ಲಿ ಗುಜರಾತ್, ತಮಿಳ್ ತಲೈವಾಸ್ ತಂಡವನ್ನು 36-25 ಅಂಕಗಳ ಅಂತರದಿಂದ ಸೋಲಿಸಿತು. ರೈಡಿಂಗ್ ಕೌಶಲ ಮೆರೆದ ಸಚಿನ್ ತಂಡಕ್ಕೆ 11 ಅಂಕ ತಂದರೆ, ಟ್ಯಾಕಲಿಂಗ್‌ನಲ್ಲಿ ಪರ್ವೇಶ್ ಭೈಸ್ವಾಲ್ 4 ಅಂಕಗಳೊಂದಿಗೆ ಗಮನ ಸೆಳೆದರು. ಆರಂಭದಲ್ಲಿ ಎರಡೂ ತಂಡಗಳು ಸಮಬಲದ ಹೋರಾಟ ನಡೆಸಿದವು. ಮೊದಲಾರ್ಧದ ಮುಕ್ತಾಯದ ವೇಳೆಗೆ ಗುಜರಾತ್, 16-14ರಿಂದ ಕೊಂಚ ಮುನ್ನಡೆ ಹೊಂದಿತು. ದ್ವಿತೀಯಾರ್ಧ ಆರಂಭಿಕ 3 ನಿಮಿಷದಲ್ಲಿ 5 ಅಂಕ ಗಳಿಸಿದ ಗುಜರಾತ್ ಭರ್ಜರಿ ಆರಂಭ ಪಡೆಯಿತು. ಕೊನೆವರೆಗೂ ಇದೇ ಪ್ರದರ್ಶನ ಮುಂದುವರಿಸಿದ ಗುಜರಾತ್ ಪಂದ್ಯವನ್ನು ತನ್ನತ್ತ ವಾಲಿಸಿಕೊಂಡಿತು.
ಟರ್ನಿಂಗ್ ಪಾಯಿಂಟ್: ಮೊದಲಾರ್ಧದಲ್ಲಿ ಮಿಂಚಿದ್ದ ತಲೈವಾಸ್ ಆಟಗಾರರು ದ್ವಿತೀಯಾರ್ಧದಲ್ಲಿ ಕಳಪೆ ಪ್ರದರ್ಶನ ತೋರಿದ್ದು ಗುಜರಾತ್ ಗೆಲುವಿಗೆ ಕಾರಣವಾಯಿತು.