ಚಂದ್ರನ್ ರಂಜಿತ್ ರೈಡಿಂಗ್’ನಲ್ಲಿ ಡೆಲ್ಲಿಗೆ ಮೊದಲ ಅಂಕ ತಂದಿತ್ತರು. ಬಳಿಕ ಹರಿಯಾಣ ಸ್ಟೀಲರ್ಸ್ ಪರ ನವೀನ್ ಅಂಕದ ಖಾತೆ ತೆರೆದರು. ಮೊದಲಾರ್ಧದ 5ನೇ ನಿಮಿಷದಲ್ಲಿ ಉಭಯ ತಂಡಗಳು 5-5 ಅಂಕಗಳ ಸಮಬಲ ಸಾಧಿಸಿದ್ದವು.
ಗ್ರೇಟರ್ ನೋಯ್ಡಾ[ನ.08]: ದಬಾಂಗ್ ಡೆಲ್ಲಿ-ಹರಿಯಾಣ ಸ್ಟೀಲರ್ಸ್ ನಡುವಿನ ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ದಬಾಂಗ್ ಡೆಲ್ಲಿ 39-33 ಅಂಕಗಳಿಂದ ಕೊನೆಗೂ ಗೆಲುವಿನ ನಗೆ ಬೀರಿದೆ. ಈ ಗೆಲುವಿನೊಂದಿಗೆ ಡೆಲ್ಲಿ ನಾಲ್ಕನೇ ಸ್ಥಾನದಲ್ಲೇ ಮುಂದುವರೆದಿದೆ.
ಚಂದ್ರನ್ ರಂಜಿತ್ ರೈಡಿಂಗ್’ನಲ್ಲಿ ಡೆಲ್ಲಿಗೆ ಮೊದಲ ಅಂಕ ತಂದಿತ್ತರು. ಬಳಿಕ ಹರಿಯಾಣ ಸ್ಟೀಲರ್ಸ್ ಪರ ನವೀನ್ ಅಂಕದ ಖಾತೆ ತೆರೆದರು. ಮೊದಲಾರ್ಧದ 5ನೇ ನಿಮಿಷದಲ್ಲಿ ಉಭಯ ತಂಡಗಳು 5-5 ಅಂಕಗಳ ಸಮಬಲ ಸಾಧಿಸಿದ್ದವು. ಆನಂತರ ಡೆಲ್ಲಿ ಆಕ್ರಮಣಕಾರಿಯಾಟಕ್ಕೆ ಮುಂದಾಯಿತು. 16ನೇ ನಿಮಿಷದ ವೇಳೆಗೆ ಡೆಲ್ಲಿ 14-13 ಅಂಕಗಳ ಮುನ್ನಡೆ ಕಾಯ್ದುಕೊಂಡಿತ್ತು. ಪಂದ್ಯ ಮುಕ್ತಾಯಕ್ಕೆ ಕೊನೆಯ 2 ನಿಮಿಷಗಳಿದ್ದಾಗ ಮೊನು ಗೋಯೆತ್ ಯಶಸ್ವಿ ರೈಡಿಂಗ್ ನಡೆಸುವ ಮೂಲಕ ಹರಿಯಾಣ ತಂಡ ಮೊದಲ ಬಾರಿಗೆ ಮುನ್ನಡೆ ಕಾಯ್ದುಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಹರ್ಯಾಣ ಮೊದಲಾರ್ಧ ಮುಕ್ತಾಯದ ವೇಳೆಗೆ 19-15 ಅಂಕಗಳ ಮುನ್ನಡೆ ಸಾಧಿಸಿತು.
A match you will come back to see again and again! 😍 soared higher to clip ' wings, winning 39-33.
— ProKabaddi (@ProKabaddi)ಮೊದಲಾರ್ಧದ ಹಿನ್ನಡೆ ಮೆಟ್ಟಿನಿಲ್ಲಲು ದ್ವಿತಿಯಾರ್ಧದಲ್ಲಿ ಡೆಲ್ಲಿ ಆಕ್ರಮಣಕಾರಿಯಾಟಕ್ಕೆ ಮುಂದಾಯಿತು. ಸ್ಟಾರ್ ರೈಡರ್ ಮಿರಾಜ್ ಶೇಕ್, ನವೀನ್ ಕುಮಾರ್ ಆಕರ್ಷಕ ಪ್ರದರ್ಶನ ತೋರುವ ಮೂಲಕ ಮುನ್ನಡೆ ಸಾಧಿಸುವಲ್ಲಿ ಡೆಲ್ಲಿ ಯಶಸ್ವಿಯಾಯಿತು. ದ್ವಿತಿಯಾರ್ಧದ ಮೂರನೇ ನಿಮಿಷದಲ್ಲಿ ಸ್ಟೀಲರ್ಸ್ ಆಲೌಟ್ ಮಾಡಿದ ಡೆಲ್ಲಿ 24-20 ಅಂಕಗಳ ಮುನ್ನಡೆ ಸಾಧಿಸಿತು. ಆ ಬಳಿಕ ನಿರಂತರ ಅಂಕ ಹೆಚ್ಚಿಸಿಕೊಳ್ಳುತ್ತಾ ಸಾಗಿದ ಡೆಲ್ಲಿ 6 ಅಂಕಗಳ ರೋಚಕ ಗೆಲುವು ಸಾಧಿಸಿತು.
ಹರಿಯಾಣ ಪರ ಮೋನು ಗೋಯೆತ್ ರೈಡಿಂಗ್’ನಲ್ಲಿ 11 ಅಂಕ ಸಂಪಾದಿಸಿದರೇ, ಡೆಲ್ಲಿ ಪರ ನವೀನ್ ಕುಮಾರ್ 9 ಅಂಕ ಪಡೆದರು. ಡಿಫೆಂಡಿಂಗ್’ನಲ್ಲಿ ರವೀಂದ್ರ ಪೆಹಾಲ್ 6 ಅಂಕ ಕಲೆಹಾಕಿದರು.