ಪ್ರೈಮ್‌ ವಾಲಿಬಾಲ್‌ ಲೀಗ್‌: ಮುಂಬೈ ಮೆಟಿಯೋರ್ಸ್‌ ಮಣಿಸಿ ಮೊದಲ ಜಯ ಗಳಿಸಿದ ಬೆಂಗಳೂರು ಟಾರ್ಪಿಡೋಸ್‌

By Suvarna News  |  First Published Feb 13, 2023, 9:19 AM IST

ಮುಂಬೈ ಮೆಟಿಯೋರ್ಸ್‌ ಎದುರು ಬೆಂಗಳೂರು ಟಾರ್ಪಿಡೋಸ್‌ ತಂಡಕ್ಕೆ ಭರ್ಜರಿ ಜಯ
ಎರಡನೇ ಆವೃತ್ತಿಯ ಪ್ರೈಮ್ ವಾಲಿಬಾಲ್ ಲೀಗ್‌ನಲ್ಲಿ ಬೆಂಗಳೂರಿಗೆ ಮೊದಲ ಗೆಲುವು
ಸ್ವೆಟೆಲಿನ್‌ ತ್ಸ್ವೆಟಾನೊವ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನ
 


ಬೆಂಗಳೂರು(ಫೆ.13): ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರುಪೇ ಪ್ರೈಮ್‌ ವಾಲಿಬಾಲ್‌ ಲೀಗ್‌ ಎರಡನೇ ಆವೃತ್ತಿಯಲ್ಲಿ ಬೆಂಗಳೂರು ಟಾರ್ಪಿಡೋಸ್‌ 15-10, 12-15, 15-13, 15-9, 15-9 ಅಂತರದಲ್ಲಿ ಮುಂಬೈ ಮೆಟಿಯೋರ್ಸ್‌ ತಂಡವನ್ನು ಸೋಲಿಸಿ ಲೀಗ್‌ನಲ್ಲಿ ಮೊದಲ ಜಯ ದಾಖಲಿಸಿದೆ. ಪಂದ್ಯದಲ್ಲಿಉತ್ತಮ ಪ್ರದರ್ಶನ ನೀಡಿದ ಸ್ವೆಟೆಲಿನ್‌ ತ್ಸ್ವೆಟಾನೊವ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಹಿಂದಿನ ತಪ್ಪುಗಳನ್ನು ಪುನರಾವರ್ತಿಸದಂತೆ ಎಚ್ಚರಿಕೆ ವಹಿಸಿದ ಟಾರ್ಪಿಡೋಸ್‌, ಮೃದುವಾದ ಸರ್ವ್‌ಗಳೊಂದಿಗೆ ಆಟವನ್ನು ಪ್ರಾರಂಭಿಸಿದರೆ, ತ್ಸ್ವೆಟಾನೊವ್‌ ಮತ್ತು ಮುಜ್ಬೀಬ್‌ ಪಾಯಿಂಟ್‌ ಗಳನ್ನು ಗೆಲ್ಲಲು ಸ್ಪೈಕ್‌ ಗಳನ್ನು ಮಾಡುತ್ತಲೇ ಇದ್ದರು. ಅನು ಜೇಮ್ಸ್ ಅವರ ಸ್ಪೈಕ್‌ಗಳನ್ನು ಬೆಂಗಳೂರು ನಾಯಕ ಪಂಕಜ್‌ ಶರ್ಮಾ ನಿರ್ಬಂಧಿಸಿದ್ದರಿಂದ ಮುಂಬೈಗೆ ಮಧ್ಯದಲ್ಲಿ ಪರಿಣಾಮಕಾರಿ ಸಂವಹನದ ಕೊರತೆ ಎದುರಾಯಿತು.

Tap to resize

Latest Videos

ಲಿಬೆರೊ ರತೀಶ್‌ ಮಧ್ಯದಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಪ್ರಾರಂಭಿಸಿದಾಗ, ಹರ್ದೀಪ್‌ ಅವರ ಆಕ್ರಮಣಕಾರಿ ಪ್ರದರ್ಶನದೊಂದಿಗೆ   ಟಾರ್ಪಿಡೋಸ್‌  ಆಟದಲ್ಲಿ ತಮ್ಮ ಸ್ಥಾನವನ್ನು ಕಂಡುಕೊಳ್ಳಲು ಪ್ರಾರಂಭಿಸಿದವು. ಆದರೆ ಇಬಿನ್‌ ಜೋಸ್‌ ಟಾರ್ಗೆಟ್‌ ಮಾಡಲು ಸ್ಥಳಗಳನ್ನು ಹುಡುಕುತ್ತಲೇ ಇದ್ದರು ಮತ್ತು ಬೆಂಗಳೂರನ್ನು ನಿಯಂತ್ರಣದಲ್ಲಿರಿಸಿದರು.

𝐇𝐨𝐭 𝐚𝐬 𝐅𝐢𝐫𝐞 🔥

David Lee’s boys finally come to the Season 2 party 🥳 pic.twitter.com/ddvwDkIXZM

— Prime Volleyball (@PrimeVolley)

ಚುರುಕಾದ ಆಟದೊಂದಿಗೆ ಮೆಟಿಯೋರ್ಸ್‌ ನಾಯಕ ಕಾರ್ತಿಕ್‌ ಮತ್ತು ಬ್ರಾಂಡನ್‌ ಗ್ರೀನ್ವೇ ತ್ಸ್ವೆಟಾನೊವ್‌ ಅವರ ಮಾರಕ ಸ್ಪೈಕ್‌ಗಳನ್ನು ತಡೆಯುವುದು ಕಷ್ಟವಾಯಿತು. ಆದರೆ ಮುಂಬೈ ನಿಧಾನಗೊಂಡಾಗ, ಹರ್ದೀಪ್‌ ಚೆಂಡಿನ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಾರಂಭಿಸಿದರು. ಹಾಗೆಯೇ ಆಟದ ಸಮತೋಲನವನ್ನು ಸರಿದೂಗಿಸಿದರು. ಹರ್ದೀಪ್‌ ಎರಡು ರಕ್ಷಣಾತ್ಮಕ ತಪ್ಪುಗಳನ್ನು ಮಾಡಿದ ನಂತರ, ಮೆಟಿಯೋರ್ಸ್‌ ಮುಖ್ಯ ಕೋಚ್‌ ಸನ್ನಿ ಜೋಸೆಫ್‌ ಅಬ್ದುಲ್‌ ರಹೀಮ್‌ ಮತ್ತು ಜಿತಿನ್‌ ಎನ್‌.ಅವರನ್ನು ಕಳುಹಿಸಿದರು. ರಚನೆಯಲ್ಲಿನ ಬದಲಾವಣೆಯು   ಟಾರ್ಪಿಡೋಸ್‌,   ತಂಡವನ್ನು ಬೆಚ್ಚಿಬೀಳಿಸಿತು. ಟ್ವೆಟಾನೊವ್‌ ಮತ್ತೊಮ್ಮೆ ತಂಡದ ಹೋರಾಟವನ್ನು ಸಮಬಲಕ್ಕೆ ತಂದರು. ಹೀಗಾಗಿ ಟಾರ್ಪಿಡೋಸ್‌ ತಂಡ ನಿಯಂತ್ರಣವನ್ನು ಮರಳಿ ಪಡೆಯಿತು.

ಫೀಲ್ಡಿಂಗ್‌ಗಾಗಿ ಸಚಿನ್‌, ಮೈಕಲ್‌ ವಾನ್‌ರಿಂದ ಭೇಷ್‌ ಎನಿಸಿಕೊಂಡ ಬೆಳಗಾವಿಯ ಕಿರಣ್ ತಾರಲೇಕರ್!

ನಾಯಕ ಕಾರ್ತಿಕ್‌ ಉತ್ತಮ ಪ್ರದರ್ಶನ ನೀಡದ ಕಾರಣ ಒತ್ತಡದಲ್ಲಿದ್ದ ಮುಂಬೈ  ರಕ್ಷಣಾತ್ಮಕವಾಗಿ ಹೆಣಗಾಡಿತು, ಮತ್ತು ಇಬಿನ್‌, ಮುಜೀಬ್‌ ಮತ್ತು ತ್ಸ್ವೆಟಾನೊವ್‌ ಪ್ರಬಲ ಸ್ಪೈಕ್‌ಗಳೊಂದಿಗೆ ಆಸರೆಯಾದರು. ಆಟವು ಅವರ ಕೈಯಿಂದ ಜಾರಿದ ಕಾರಣ, ಮೆಟಿಯೋರ್ಸ್‌ ಬಲವಂತದ ತಪ್ಪುಗಳನ್ನು ಮಾಡಿದವು. ಟ್ವೆಟಾನೋವ್‌ ಅವರು ಟಾರ್ಪಿಡೋಸ್‌ ತಂಡದ ಹೋರಾಟವನ್ನು 4-1 ಗೋಲುಗಳಿಂದ ಗೆಲ್ಲಲು ನೆರವಾದರು.

ಪ್ರೈಮ್‌ ವಾಲಿಬಾಲ್‌ ಲೀಗ್‌ನ ಹೈದರಾಬಾದ್‌ ಲೆಗ್‌ನ ಆರಂಭಿಕ ದಿನದಂದು ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಫೆಬ್ರವರಿ 15ರಂದು ಹೈದರಾಬಾದ್‌ ಬ್ಲ್ಯಾಕ್‌ ಹಾಕ್ಸ್‌ ತಂಡವು ಕೊಚ್ಚಿ ಬ್ಲೂಸ್ಪೈಕರ್ಸ್‌ ವಿರುದ್ಧ ಸೆಣಸಲಿದೆ.

click me!