ಕುಸ್ತಿಪಟುವಾಗಿದ್ದ ತೋಮರ್ ಕಬಡ್ಡಿ ಸ್ಟಾರ್ ಆಗಿದ್ದೇಗೆ..?

By Web Desk  |  First Published Oct 26, 2018, 12:24 PM IST

ಪ್ರೊ ಕಬಡ್ಡಿ 6ನೇ ಲೀಗ್‌ನಲ್ಲಿ ನಿತಿನ್ ತೋಮರ್ ನೀಡುತ್ತಿರುವ ಅಮೋಘ ಪ್ರದರ್ಶನ ಪುಣೇರಿ ಪಲ್ಟನ್ ತಂಡದ ಆತ್ಮವಿಶ್ವಾಸವನ್ನು ಇಮ್ಮಡಿಯಾಗಿಸಿದೆ. ಸದ್ಯ ಲೀಗ್‌ನಲ್ಲಿ ನಿತಿನ್ ಆಡಿರುವ 10 ಪಂದ್ಯಗಳಲ್ಲಿ ಒಟ್ಟು 96 ಅಂಕಗಳನ್ನು ಕಲೆಹಾಕಿದ್ದಾರೆ. ಉತ್ತರ ಪ್ರದೇಶದಲ್ಲಿ ಜನಿಸಿದ ನಿತಿನ್ ಬಾಲ್ಯದಲ್ಲಿ ಒಬ್ಬ ಕುಸ್ತಿಪಟುವಾಗಿದ್ದ. ಆದರೆ, ಆತ ಕಬಡ್ಡಿಪಟುವಾಗಿದ್ದು ಹೇಗೆ? ಸದ್ಯ ಪುಣೆ ತಂಡದ ಬಲ, ದೌರ್ಬಲ್ಯ, ಫಿಟ್ನೆಸ್ ಬಗ್ಗೆ ‘ಕನ್ನಡಪ್ರಭ’ ನಡೆಸಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.


ಪ್ರೊ ಕಬಡ್ಡಿ 6ನೇ ಲೀಗ್‌ನಲ್ಲಿ ನಿತಿನ್ ತೋಮರ್ ನೀಡುತ್ತಿರುವ ಅಮೋಘ ಪ್ರದರ್ಶನ ಪುಣೇರಿ ಪಲ್ಟನ್ ತಂಡದ ಆತ್ಮವಿಶ್ವಾಸವನ್ನು ಇಮ್ಮಡಿಯಾಗಿಸಿದೆ. ಸದ್ಯ ಲೀಗ್‌ನಲ್ಲಿ ನಿತಿನ್ ಆಡಿರುವ 10
ಪಂದ್ಯಗಳಲ್ಲಿ ಒಟ್ಟು 96 ಅಂಕಗಳನ್ನು ಕಲೆಹಾಕಿದ್ದಾರೆ. ಉತ್ತರ ಪ್ರದೇಶದಲ್ಲಿ ಜನಿಸಿದ ನಿತಿನ್ ಬಾಲ್ಯದಲ್ಲಿ ಒಬ್ಬ ಕುಸ್ತಿಪಟುವಾಗಿದ್ದ. ಆದರೆ, ಆತ ಕಬಡ್ಡಿಪಟುವಾಗಿದ್ದು ಹೇಗೆ? ಸದ್ಯ ಪುಣೆ ತಂಡದ ಬಲ, ದೌರ್ಬಲ್ಯ, ಫಿಟ್ನೆಸ್ ಬಗ್ಗೆ ‘ಕನ್ನಡಪ್ರಭ’ ನಡೆಸಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

* ಪ್ರಸಕ್ತ ಆವೃತ್ತಿಯಲ್ಲಿ ನಿಮ್ಮ ಪ್ರದರ್ಶನ ಹೇಗನ್ನಿಸುತ್ತಿದೆ?
ಉತ್ತಮ ಪ್ರದರ್ಶನ ಮೂಡಿ ಬರುತ್ತಿರುವುದಕ್ಕೆ ಸಂತಸವಾಗುತ್ತಿದೆ. ಕಳೆದ ಲೀಗ್‌ನಲ್ಲಿ ಎಸಗಿರುವ ತಪ್ಪುಗಳನ್ನು ತಿದ್ದಿಕೊಂಡಿದ್ದೇನೆ. ಕೋಚ್ ಅಶನ್ ಕುಮಾರ್, ನನ್ನನ್ನು ಮೊದಲಿನಿಂದಲೂ
ಗಮನಿಸುತ್ತಿದ್ದಾರೆ. ಪಂದ್ಯದ ವೇಳೆ ನಾನು ಪದೇ ಪದೆ ಎಸಗುವ ತಪ್ಪುಗಳನ್ನು ತಿಳಿಸಿ, ತಿದ್ದಿಕೊಳ್ಳುವಂತೆ ಮಾಡಿದ್ದಾರೆ. ಅಭ್ಯಾಸದ ವೇಳೆ ಕೋಚ್ ಹೇಳಿರುವ ತಂತ್ರಗಳು ಪಂದ್ಯದ ವೇಳೆ
ಸಹಾಯಕ್ಕೆ ಬರುತ್ತಿವೆ. ರೈಡಿಂಗ್‌ನಲ್ಲಿ ಸ್ವಲ್ಪ ನಿಧಾನವಾಗಿದ್ದೆ. ಆದರೆ, ಈ ಋತುವಿನಲ್ಲಿ ಹೆಚ್ಚು ವೇಗ ರೂಢಿಸಿಕೊಂಡಿದ್ದು, ನನ್ನ ಸಹಾಯಕ್ಕೆ ಬರುತ್ತಿದೆ.

Tap to resize

Latest Videos

* ರಕ್ಷಣಾ ವಿಭಾಗದಲ್ಲಿ ಎಡವುತ್ತಿದೆಯಲ್ಲ?
ಈವರೆಗೂ ಆಡಿರುವ ಪಂದ್ಯಗಳಲ್ಲಿ ಬಹುತೇಕ ಪಂದ್ಯಗಳನ್ನು ರಕ್ಷಣಾ ವಿಭಾಗದ ವೈಫಲ್ಯದಿಂದಲೇ ಸೋತಿದ್ದೇವೆ. ಬುಧವಾರ ಯೋಧಾ ವಿರುದ್ಧದ ಪಂದ್ಯದಲ್ಲೂ ನಮ್ಮ ರಕ್ಷಣಾ ವಿಭಾಗ ಎಡವಿತು. ಹೀಗಾಗಿ ಸ್ಪರ್ಧಾತ್ಮಕ ಪಂದ್ಯವನ್ನು ಕಳೆದುಕೊಳ್ಳಬೇಕಾಯಿತು. ಪಂದ್ಯದ ಬಳಿಕ ರಕ್ಷಣಾ ವಿಭಾಗಕ್ಕೆ ಹೆಚ್ಚು ಒತ್ತು ನೀಡಿ ಸುಧಾರಿಸಿಕೊಳ್ಳಲು ಪ್ರಯತ್ನಿಸಿದ್ದೇವೆ. ಆದರೂ ಸಾಧ್ಯವಾಗಿಲ್ಲ.

* ಫಿಟ್ನೆಸ್, ನಿತ್ಯದ ಅಭ್ಯಾಸದ ಬಗ್ಗೆ ಹೇಳಿ?
ಒಬ್ಬ ಕ್ರೀಡಾಪಟುಗೆ ಫಿಟ್ನೆಸ್ ಬಹಳಷ್ಟು ಮುಖ್ಯ. ಯಾವುದೇ ಸಂದರ್ಭದಲ್ಲೂ ಫಿಟ್ನೆಸ್ ಇಲ್ಲದೆ ಅಂಗಳಕ್ಕಿಳಿಯಲು ಸಾಧ್ಯವಿಲ್ಲ. ಅದರಲ್ಲೂ ಲೀಗ್ ಸುಧೀರ್ಘವಾಗಿರುವುದರಿಂದ ಮುಗಿಯುವವರೆಗೂ ಫಿಟ್ನೆಸ್ ಕಾಪಾಡಿಕೊಳ್ಳುವುದು ಮುಖ್ಯ. ಫಿಸಿಯೋಗಳ ನಿರ್ದೇಶನದಂತೆ ಮಾತ್ರ ಆಹಾರ ಸೇವನೆ, ಹೆಚ್ಚು ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುತ್ತೇವೆ. ಪ್ರತಿದಿನ ಮಾಂಸಾಹಾರ ಮತ್ತು ಡ್ರೈಫ್ರುಟ್ಸ್‌ಗಳನ್ನು ಹೆಚ್ಚಾಗಿ ಸೇವಿಸುತ್ತೇವೆ. ಬೆಳಗ್ಗೆ ಮತ್ತು ಸಂಜೆ ಕನಿಷ್ಠವೆಂದರೂ 2 ರಿಂದ 3 ಗಂಟೆಗಳ ಅಭ್ಯಾಸ ನಡೆಸುತ್ತೇವೆ. ತರಬೇತಿ ವೇಳೆ ನಮ್ಮ ದೌರ್ಬಲ್ಯಗಳನ್ನು ತಿದ್ದಿಕೊಳ್ಳಲು ಪ್ರಯತ್ನಿಸುತ್ತೇವೆ. ರುಚಿ ರುಚಿ ಖಾದ್ಯಗಳನ್ನು ನೋಡಿದರೆ ತಿನ್ನಬೇಕೆನಿಸುತ್ತದೆ. ಕೋಚ್ ಕಣ್ಣು ತಪ್ಪಿಸಿ ಹೋಗಿ ತಿನ್ನಬೇಕು ಅಂತ ಅನ್ನಿಸಿದ್ದೂ ಇದೆ. ಆದರೆ ಹಾಗೆ ಮಾಡುವುದರಿಂದ ನಮಗೆ ನಷ್ಟ. ಹಾಗಾಗಿ ತಿನ್ನವುದಿಲ್ಲ.

* ಕೋಚ್ ಸಹಕಾರ ಹೇಗಿದೆ?
ಕೋಚ್ ಅಶನ್ ಕುಮಾರ್ ಬಹಳಷ್ಟು ಅನುಭವಿಯಾಗಿದ್ದಾರೆ. ಕಬಡ್ಡಿ ಬಗ್ಗೆ ಬಹಳಷ್ಟು ತಿಳಿದಿದ್ದಾರೆ. ಪಂದ್ಯದ ವೇಳೆ ಒತ್ತಡ ನಿಭಾಯಿಸುವ ಕಲೆ, ಎದುರಾಳಿ ಆಟಗಾರ ತಂತ್ರಗಳನ್ನು ವಿಫಲಗೊಳಿಸುವುದರ ಕುರಿತು ಚೆನ್ನಾಗಿ ತಿಳಿದುಕೊಂಡಿದ್ದಾರೆ. ತರಬೇತಿ ವೇಳೆ ನಮ್ಮ ಪ್ರತಿ ತಪ್ಪುಗಳನ್ನು ಗುರುತಿಸಿ, ಸುಧಾರಿಸಿಕೊಳ್ಳಲು ಮಾರ್ಗದರ್ಶನ ನೀಡುತ್ತಾರೆ. 

*ಕುಸ್ತಿಪಟುವಾಗಿದ್ದ ನೀವು ಕಬಡ್ಡಿ ಪಟು ಆಗಿದ್ದು ಹೇಗೆ?
ಶಾಲಾ, ಕಾಲೇಜು ದಿನಗಳಲ್ಲಿ ಕುಸ್ತಿಪಟುವಾಗಿದ್ದೆ. ಆದರೆ, ನಮ್ಮ ಊರಿನ ಅಕ್ಕಪಕ್ಕದ ಹಳ್ಳಿಗಳಲ್ಲಿ ಕಬಡ್ಡಿ ಭಾರೀ ಜನಪ್ರಿಯ. ಹೀಗಾಗಿ ನನಗೂ ಕಬಡ್ಡಿ ಬಗ್ಗೆ ಆಸಕ್ತಿ ಬೆಳೆಯಿತು. ಕಬಡ್ಡಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದನ್ನು ಕಂಡು ಮನೆಯಲ್ಲಿಯೂ ಪ್ರೋತ್ಸಾಹ ಸಿಕ್ಕಿತು. ಮುಂದೆ ಸಣ್ಣಪುಟ್ಟ ಕಬಡ್ಡಿ ಲೀಗ್‌ಗಳಲ್ಲಿ ಆಡಿಕೊಂಡು, ಮುಂದೆ ಬರುಬರುತ್ತಾ ಪೂರ್ಣ ಪ್ರಮಾಣದ ಕಬಡ್ಡಿ ಪಟುವಾದೆ. 

ಸಂದರ್ಶನ: ಮಲ್ಲಪ್ಪ ಸಿ. ಪಾರೇಗಾಂವ, ಕನ್ನಡಪ್ರಭ

click me!