ಟಿ20 ಲೀಗ್: ಎಬಿ ಡಿವಿಲಿಯರ್ಸ್‌ಗೆ ನಾಯಕ ಪಟ್ಟ!

By Web DeskFirst Published Nov 13, 2018, 8:47 PM IST
Highlights

ಸೌತ್ ಆಫ್ರಿಕಾ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಮತ್ತೆ ನಾಯಕನಾಗಿ ಕಣಕ್ಕಿಳಿಯುತ್ತಿದ್ದಾರೆ. ಟಿ20 ಲೀಗ್ ಟೂರ್ನಿಯಲ್ಲಿ ಎಬಿಡಿಗೆ ನಾಯಕತ್ವ ನೀಡಲಾಗಿದೆ. ಎಬಿಡಿ ತಂಡ ಯಾವುದು? ಪಂದ್ಯ ಯಾವಾಗ ಆರಂಭಗೊಳ್ಳಲಿದೆ? ಈ ಕುರಿತ ಮಾಹಿತಿ ಇಲ್ಲಿದೆ.

ಕೇಪ್‌ಟೌನ್(ನ.13): ಸೌತ್ಆಫ್ರಿಕಾದ ನೂತನ ಟಿ20 ಲೀಗ್ ಮಜಾನ್ಸಿ ಸೂಪರ್ ಲೀಗ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ನವೆಂಬರ್ 16 ರಿಂದ ಟೂರ್ನಿ ಆರಂಭಗೊಳ್ಳಲಿದೆ. ಇದರ ಬೆನ್ನಲ್ಲೇ, ಟಿಶ್ವಾನೆ ಸ್ಪಾರ್ಟನ್ ತಂಡದ ನಾಯಕಾಗಿ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಆಯ್ಕೆ ಮಾಡಲಾಗಿದೆ.

32 ದಿನಗಳ ಕಾಲ ನಡೆಯಲಿರುವ ಈ ಲೀಗ್ ಟೂರ್ನಿಯಲ್ಲಿ 6 ತಂಡಗಳು ಪಾಲ್ಗೊಳ್ಳುತ್ತಿದೆ. ಎಬಿಡಿ ತಂಡದಲ್ಲಿ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್, ಶ್ರೀಲಂಕಾದ ಜೀವನ್ ಮೆಂಡೀಸ್, ಜಿಂಬಾಬ್ವೆಯ ಸಿಕಂದರ್ ರಾಜ ಸೇರಿದಂತೆ ಹಲವು ಸೌತ್ಆಫ್ರಿಕಾ ಕ್ರಿಕೆಟಿಗರು ತಂಡದಲ್ಲಿದ್ದಾರೆ.

ಯುವ ಹಾಗೂ ಅನುಭವಿ ಆಟಗಾರರನ್ನೊಳಗೊಂಡ ನಮ್ಮ ತಂಡ ಉತ್ತಮ ಪ್ರದರ್ಶನ ನೀಡಲಿದೆ. ಯುವ ಆಟಗಾರರ ಜೊತೆ ಮತ್ತೆ ಕಣಕ್ಕಿಳಿಯುತ್ತಿರುವುದು ಸಂತಸ ತಂದಿದೆ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

click me!