ನನ್ನ ದಾಖಲೆಗಳನ್ನು ಯಾರಿಂದಲೂ ಮುರಿಯಲು ಆಗುವುದಿಲ್ಲ: ಉಸೇನ್‌ ಬೋಲ್ಟ್‌

By Kannadaprabha News  |  First Published May 18, 2024, 10:48 AM IST

ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿರುವ ಬೋಲ್ಟ್‌, ‘ಸದ್ಯಕ್ಕೆ ನನ್ನ ದಾಖಲೆಗಳು ಸುರಕ್ಷಿತ. ಈಗಿರುವ ಅಥ್ಲೀಟ್‌ಗಳ ಪೈಕಿ ಯಾರಿಂದಲೂ ನನ್ನ ದಾಖಲೆ ಮುರಿಯಲು ಆಗುವುದಿಲ್ಲ ಎಂಬ ನಂಬಿಕೆ ನನಗಿದೆ. ಇನ್ನೂ ಕೆಲ ವರ್ಷಗಳ ಕಾಲ ದಾಖಲೆಗಳು ನನ್ನ ಹೆಸರಲ್ಲೇ ಇರಲಿವೆ’ ಎಂದಿದ್ದಾರೆ.


ನವದೆಹಲಿ: ಅತಿವೇಗವಾಗಿ 100 ಮೀ. ಹಾಗೂ 200 ಮೀ. ಓಟ ಪೂರ್ತಿಗೊಳಿಸಿದ ವಿಶ್ವ ದಾಖಲೆ ಹೊಂದಿರುವ ಜಮೈಕಾದ ಉಸೇನ್‌ ಬೋಲ್ಟ್‌, ಸದ್ಯಕ್ಕೆ ತಮ್ಮ ದಾಖಲೆಗಳನ್ನು ಯಾರೂ ಮುರಿಯುವ ನಿರೀಕ್ಷೆ ಇಲ್ಲ ಎಂದಿದ್ದಾರೆ.

ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿರುವ ಬೋಲ್ಟ್‌, ‘ಸದ್ಯಕ್ಕೆ ನನ್ನ ದಾಖಲೆಗಳು ಸುರಕ್ಷಿತ. ಈಗಿರುವ ಅಥ್ಲೀಟ್‌ಗಳ ಪೈಕಿ ಯಾರಿಂದಲೂ ನನ್ನ ದಾಖಲೆ ಮುರಿಯಲು ಆಗುವುದಿಲ್ಲ ಎಂಬ ನಂಬಿಕೆ ನನಗಿದೆ. ಇನ್ನೂ ಕೆಲ ವರ್ಷಗಳ ಕಾಲ ದಾಖಲೆಗಳು ನನ್ನ ಹೆಸರಲ್ಲೇ ಇರಲಿವೆ’ ಎಂದಿದ್ದಾರೆ.

Latest Videos

undefined

100 ಮೀ. ಓಟವನ್ನು 9.58 ಸೆಕೆಂಡ್‌, 200 ಮೀ. ಓಟವನ್ನು 19.19 ಸೆಕೆಂಡ್‌ಗಳಲ್ಲಿ ಬೋಲ್ಟ್‌ ಪೂರ್ತಿಗೊಳಿಸಿ ವಿಶ್ವ ದಾಖಲೆ ಬರೆದಿದ್ದರು. ಸತತ 3 ಒಲಿಂಪಿಕ್ಸ್‌ಗಳಲ್ಲಿ 100 ಮೀ., 200 ಮೀ., ಓಟದಲ್ಲಿ ಚಿನ್ನ ಗೆದ್ದ ಏಕೈಕ ಅಥ್ಲೀಟ್‌ ಎನ್ನುವ ದಾಖಲೆಯೂ ಬೋಲ್ಟ್‌ ಹೆಸರಿನಲ್ಲಿದೆ.

ಟೀಂ ಇಂಡಿಯಾಗೆ ಗೌತಮ್‌ ಗಂಭೀರ್‌ ಹೆಡ್‌ ಕೋಚ್‌? ಬಿಸಿಸಿಐ ಆಸಕ್ತಿ..!

ಒಲಿಂಪಿಕ್ಸ್‌ಗೆ ಮುನ್ನ ಆಯ್ಕೆ ಟ್ರಯಲ್ಸ್ ಬೇಡ: ರೆಸ್ಲರ್ಸ್‌

ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಭಾರತೀಯ ಮಹಿಳಾ ಕುಸ್ತಿಪಟುಗಳು ಒಲಿಂಪಿಕ್ಸ್‌ಗೂ ಮೊದಲು ಮತ್ತೊಂದು ಸುತ್ತಿನ ಆಯ್ಕೆ ಟ್ರಯಲ್ಸ್‌ ನಡೆಸದಂತೆ ಭಾರತೀಯ ಕುಸ್ತಿ ಫಡರೇಶನ್‌ (ಡಬ್ಲ್ಯುಎಫ್‌ಐ)ಗೆ ಮನವಿ ಸಲ್ಲಿಸಿದ್ದಾರೆ. ಇಲ್ಲಿಂದ ಮುಂದಕ್ಕೆ ಮಾನಸಿಕ ನೆಮ್ಮದಿ ಬಹಳ ಮುಖ್ಯ. ತಾವಿಡುವ ಪ್ರತಿ ಹೆಜ್ಜೆ, ಪ್ರತಿ ದಿನ ಕೈಗೊಳ್ಳುವ ಕಾರ್ಯಗಳು ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದರ ಮೇಲೆ ಪರಿಣಾಮ ಬೀರಲಿವೆ ಎಂದು ಅನ್ಶು ಮಲಿಕ್‌ ಸೇರಿದಂತೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಭಾರತದ ಐವರು ಮಹಿಳಾ ಕುಸ್ತಿಪಟುಗಳು ಹೇಳಿದ್ದಾರೆ. 

ಒಲಿಂಪಿಕ್ಸ್‌ ಕೋಟಾ ಪಡೆದ ಕುಸ್ತಿಪಟುಗಳನ್ನೇ ಪ್ಯಾರಿಸ್‌ಗೆ ಕಳುಹಿಸಬೇಕೋ ಅಥವಾ ಕೋಟಾ ಸಿಕ್ಕಿರುವ ತೂಕ ವಿಭಾಗಗಳಿಗೆ ಹೊಸದಾಗಿ ಆಯ್ಕೆ ಟ್ರಯಲ್ಸ್‌ ನಡೆಸಬೇಕೋ ಎನ್ನುವುದನ್ನು ಡಬ್ಲ್ಯುಎಫ್‌ಐ ಇನ್ನೂ ನಿರ್ಧರಿಸಿಲ್ಲ.

IPL 2024 ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಐಪಿಎಲ್‌ಗೆ ಲಖನೌ ವಿದಾಯ; 5 ಬಾರಿಯ ಚಾಂಪಿಯನ್‌ಗೆ ಕೊನೆ ಸ್ಥಾನ

ನಿವೃತ್ತಿಗೆ ಮುನ್ನ ಕೊಹ್ಲಿಯ ಸಲಹೆ ಕೇಳಿದ್ದೆ: ಸುನಿಲ್‌ ಚೆಟ್ರಿ

ಬೆಂಗಳೂರು: ಗುರುವಾರ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ಘೋಷಿಸಿದ ಭಾರತದ ದಿಗ್ಗಜ ಆಟಗಾರ ಸುನಿಲ್‌ ಚೆಟ್ರಿ, ನಿವೃತ್ತಿ ನಿರ್ಧಾರ ಕೈಗೊಳ್ಳುವ ಮುನ್ನ ವಿರಾಟ್‌ ಕೊಹ್ಲಿಯ ಜೊತೆ ಮಾತನಾಡಿ, ಅವರ ಸಲಹೆ ಕೇಳಿದ್ದೆ ಎಂದು ಹೇಳಿದ್ದಾರೆ. 

ಈ ಬಗ್ಗೆ ವರ್ಚುವಲ್‌ ಸಂದರ್ಶನದಲ್ಲಿ ಮಾತನಾಡಿದ ಚೆಟ್ರಿ, ‘ಕೊಹ್ಲಿ ನನ್ನ ಉತ್ತಮ ಸ್ನೇಹಿತ. ನನ್ನನ್ನು ಅವರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಹೀಗಾಗಿ ನಿವೃತ್ತಿ ಬಗ್ಗೆ ಅವರೊಂದಿಗೆ ಚರ್ಚಿಸಿದ್ದೆ’ ಎಂದಿದ್ದಾರೆ. ಇದಕ್ಕೂ ಮುನ್ನ ಆರ್‌ಸಿಬಿಯ ಸಂದರ್ಶನದಲ್ಲಿ ಕೊಹ್ಲಿ ಕೂಡಾ ‘ಸುನಿಲ್‌ ಚೆಟ್ರಿ ತಮ್ಮಲ್ಲಿ ನಿವೃತ್ತಿ ಬಗ್ಗೆ ಮಾತುಕತೆ ನಡೆಸಿದ್ದಾರೆ’ ಎಂದು ತಿಳಿಸಿದ್ದರು. ಭಾರತ ಪರ 150 ಪಂದ್ಯಗಳನ್ನಾಡಿರುವ ಚೆಟ್ರಿ, ಜೂ.6ರಂದು ಕೊನೆ ಬಾರಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಲಿದ್ದಾರೆ.
 

click me!