ಇವನೆಂತಾ ಆಟಗಾರ?: ಏನ್ಮಾಡ್ದಾ ಅಂತಾ ನೀವೇ ನೋಡಿ!

By Web DeskFirst Published Sep 11, 2018, 11:44 AM IST
Highlights

ಕ್ರೀಡಾಸ್ಪೂರ್ತಿ ಮರೆತ ಮೋಟೋ ಜಿಪಿ ಆಟಗಾರ! ಆಟದ ಮಧ್ಯೆ ಪ್ರತಿಸ್ಪರ್ಧಿಯ ಬೈಕ್ ಬ್ರೇಕ್ ಒತ್ತಿದ್ ಭೂಪ! 220 ಕಿ.ಮೀ ವೇಗದಲ್ಲಿದ್ದ ಸ್ಟೆಫೆನಾ ಮಾಂಜಿಯ ಬೈಕ್! ಆಟದಿಂದ ನಿಷೇದಕ್ಕೊಳಗಾದ ರೊಮಾನೋ ಫೆನಾಟಿ  

ಸ್ಯಾನ್ ಮೆರಿನೋ(ಸೆ.11): ಆಟದಲ್ಲಿ ಗೆಲವು ಸೋಲಲ್ಲ ಮುಖ್ಯ. ನೈತಿಕತೆ ಮತ್ತು ಕ್ರೀಡಾಸ್ಪೂರ್ತಿ ಮುಖ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಈ ಕ್ರೀಡಾಸ್ಪೂರ್ತಿಯೇ ಮಾಯವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಸ್ಯಾನ್ ಮೆರೆನೋದಲ್ಲಿ ನಡೆದ ಮೋಟೋ ಜಿಪಿ ಸ್ಪರ್ಧೆಯಲ್ಲಿ ಬೈಕ್ ರೇಸರ್ ಒಬ್ಬ ಆಟದ ಮಧ್ಯೆ ತನ್ನ ಪ್ರತಿಸ್ಪರ್ಧಿಯ ಬೈಕ್ ನ ಬ್ರೇಕ್ ಹಾಕಿ ಎರಡು ವರ್ಷದ ಅವಧಿಗೆ ಆಟದಿಂದ ನಿಷೇಧಕ್ಕೊಳಗಾಗಿದ್ದಾನೆ.

ರೊಮಾನೋ ಫೆನಾಟಿ ಎಂಬ ರೇಸರ್ ಆಟದ ಮಧ್ಯೆ ತನಗಿಂತ ಮುಂದಿದ್ದ ಸ್ಟೆಫೆನಾ ಮಾಂಜಿಯ ಬೈಕ್ ಬ್ರೇಕ್ ಒತ್ತಿದ್ದಾನೆ. ಈ ವೇಳೆ ಮಾಂಜಿ ಗಂಟೆಗೆ ಸುಮಾರು 220 ಕಿ.ಮೀ ವೇಗದಲ್ಲಿ ಬೈಕ್ ಚಲಾಯಿಸುತ್ತಿದ್ದ ಎನ್ನಲಾಗಿದೆ.

FIM MotoGP Stewards 📋

Black flag Romano Fenati for irresponsible riding 🏴 pic.twitter.com/sTqv6nhZer

— MotoGP™🇸🇲🏁 (@MotoGP)

ರೊಮಾನೋ ಕೀಳು ಕೃತ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕ್ರೀಡಾಸ್ಪೂರ್ತಿಗೆ ಧಕ್ಕೆ ತಂದ ಆರೋಪದ ಮೇಲೆ ಆತನನ್ನು ಎರಡು ವರ್ಷಗಳ ಕಾಲ ಆಟದಿಂದ ನಿಷೇಧ ಹೇರಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ರೊಮಾನೋ, ಪ್ರತಿಸ್ಪರ್ಧಿಯನ್ನು ಗೌರವಿಸದ್ದಕ್ಕೆ, ಕ್ರೀಡಾಸ್ಪೂರ್ತಿಗೆ ಧಕ್ಕೆ ತಂದಿದ್ದಕ್ಕೆ ಕ್ರೀಡಾ ಜಗತ್ತಿನ ಮುಂದೆ ಕ್ಷಮೆಯಾಚಿಸುವುದಾಗಿ ತಿಳಿಸಿದ್ದಾನೆ. 

click me!