8ನೇ ಹಾಕಿ ಇಂಡಿಯಾ ಚುನಾವಣೆಯಲ್ಲಿ ಮುಷ್ತಾಕ್‌ರನ್ನು ಅವಿರೋಧವಾಗಿ ಚುನಾಯಿಸಲಾಯಿತು. ನಿರ್ಗಮಿತ ಅಧ್ಯಕ್ಷ ರಾಜಿಂದರ್ ಸಿಂಗ್ ಅವರ ಅಧಿಕಾರವಧಿ ಸೋಮವಾರ ಕೊನೆಗೊಂಡಿದೆ.
ನವದೆಹಲಿ(ಅ.02): ಬಿಹಾರದ ಮೊಹಮದ್ ಮುಷ್ತಾಕ್ ಅಹ್ಮದ್, ಹಾಕಿ ಇಂಡಿಯಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸೋಮವಾರ ನಡೆದ 8ನೇ ಹಾಕಿ ಇಂಡಿಯಾ ಚುನಾವಣೆಯಲ್ಲಿ ಮುಷ್ತಾಕ್‌ರನ್ನು ಅವಿರೋಧವಾಗಿ ಚುನಾಯಿಸಲಾಯಿತು. ನಿರ್ಗಮಿತ ಅಧ್ಯಕ್ಷ ರಾಜಿಂದರ್ ಸಿಂಗ್ ಅವರ ಅಧಿಕಾರವಧಿ ಸೋಮವಾರ ಕೊನೆಗೊಂಡಿದೆ. ಮಣಿಪುರ ಹಾಕಿ ಸಂಸ್ಥೆಯ ಜ್ಞಾನೇಂದ್ರ ಹಿರಿಯ ಉಪಾಧ್ಯಕ್ಷರಾಗಿ, ಜಮ್ಮು ಕಾಶ್ಮೀರದ ಅಸಿಮಾ ಅಲಿ ಮತ್ತು ಜಾರ್ಖಂಡ್‌ನ ಬೋಲಾನಾಥ್ ಸಿಂಗ್ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
Heartiest congratulations go to Md. Mushtaque Ahmad on being elected as the President of Hockey India at the 8th Hockey India Congress & Elections on 1st October 2018.
Read here: https://t.co/6iXrS9Stz9 pic.twitter.com/Su1naLSBBq
ಭಾರತ ಮಹಿಳಾ ತಂಡದ ಮಾಜಿ ನಾಯಕಿ ಅಸುಂತಾ ಲಾಕ್ರಾ ಚತ್ತೀಸ್’ಗಢ ಹಾಕಿ ಸಂಸ್ಥೆಯ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಕರ್ನಾಟಕ ಹಾಕಿ ಸಂಸ್ಥೆಯ ಅಧ್ಯಕ್ಷ ಎಸ್.ವಿ.ಎಸ್ ಸುಬ್ರಮಣ್ಯ ಗುಪ್ತಾ ಕಾರ್ಯಕಾರಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.