ಟೀಂ ಇಂಡಿಯಾ ಸ್ಟಾರ್ ಆಟಗಾರನಿಗೆ ಕೋರ್ಟ್‌ನಿಂದ ಸಮನ್ಸ್!

By Web DeskFirst Published Nov 14, 2018, 6:11 PM IST
Highlights

ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗನ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿದೆ. 2 ಬಾರಿ ವಿಚಾರಣೆಗೆ ಹಾಜರಾಗದ ಕ್ರಿಕೆಟಿಗನ ಮೇಲೆ ಕೋರ್ಟ್ ಗರಂ ಆಗಿದೆ. ಇದೀಗ ಕೋರ್ಟ್ ಅಂತಿಮ ಗಡುವು ನೀಡಿದ್ದು, ಬಂಧನ ವಾರೆಂಟ್ ನೀಡೋ ಎಚ್ಚರಿಕೆ ನೀಡಿದೆ.

ಕೋಲ್ಕತ್ತಾ(ನ.14): ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಜನವರಿ 15ರೊಳಗೆ ಕೋರ್ಟ್‌ಗೆ ಹಾಜರಾಗುವಂತೆ ಕೋಲ್ಕತ್ತಾ ಮ್ಯಾಜಿಸ್ಟ್ರೇಟ್ ಕೋರ್ಟ್ ಸಮನ್ಸ್ ನೀಡಿದೆ. ಚೆಕ್ ಬೌನ್ಸ್ ಪ್ರಕರಣದಡಿ ಕೋರ್ಟ್ ಮೊಹಮ್ಮದ್ ಶಮಿಗೆ ಸಮನ್ಸ್ ನೀಡಿದೆ.

ವಂಚನೆ ಆರೋಪದಡಿ ಪತಿ ಮೊಹಮ್ಮದ್ ಶಮಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಹಸಿನ್ ಜಹಾನ್ ಕಾನೂನು ಹೋರಾಟ ಮುಂದುವರಿಸಿದ್ದಾಳೆ. ಈ ವೇಳೆ ಜೀವನಾಂಶಕ್ಕೆ ಶಮಿ ನೀಡಿರುವ ಚೆಕ್ ಬೌನ್ಸ್ ಆಗಿದೆ ಎಂದು ಮತ್ತೊಂದು ಪ್ರಕರಣ  ದಾಖಲಿಸಿದ್ದಳು. ಇದೀಗ ಈ ಕುರಿತು ವಿಚಾರಣೆಗೆ ಹಾಜರಾಗಲು ಶಮಿಗೆ ಸಮನ್ಸ್ ನೀಡಲಾಗಿದೆ.

ಚೆಕ್ ಬೌನ್ಸ್ ಕುರಿತ ವಿಚಾರಣೆಗೆ ಶಮಿ ಎರಡು ಬಾರಿ ಗೈರಾಗಿದ್ದರು. ಹೀಗಾಗಿ ಜನವರಿ 15ರೊಳಗೆ ಶಮಿ ಖುದ್ದ ಕೋರ್ಟ್‌ಗೆ ಹಾಜರಾಗಲು ಸೂಚಿಸಿದೆ. ಇಷ್ಟೇ ಅಲ್ಲ ಈ ಬಾರಿ ಮತ್ತೆ ಗೈರಾದರೆ ಅರೆಸ್ಟ್ ವಾರೆಂಟ್ ಹೊರಡಿಸಲಾಗುವುದು ಎಂದು ಕೋರ್ಟ್ ಎಚ್ಚರಿಸಿದೆ.

click me!