ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಸ್ಟಾರ್ ಆಟಗಾರ ಔಟ್!

By Web DeskFirst Published Nov 14, 2018, 3:36 PM IST
Highlights

2019ರ ಐಪಿಎಲ್ ಟೂರ್ನಿಗಳಿಗೆ ಫ್ರಾಂಚೈಸಿಗಳು ಮಾಸ್ಟರ್ ಪ್ಲಾನ್ ರೂಪಿಸಿತ್ತಿದೆ. ಈಗಾಗಲೇ ಶಿಖರ್ ಧವನ್ ಸೇರಿದಂತೆ ಕೆಲ ಕ್ರಿಕೆಟಿಗರು ಒಪ್ಪಂದ ಮುರಿದು ಬೇರೆ ತಂಡ ಸೇರಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ತಂಡದ ಸ್ಟಾರ್ ಆಟಗಾರರನ್ನ ಕೈಬಿಟ್ಟಿದೆ.

ಸಿಡ್ನಿ(ನ.13): 2019ರ ಐಪಿಎಲ್ ಟೂರ್ನಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದಂತೆ 8 ಫ್ರಾಂಚೈಸಿಗಳು ಸಿದ್ಧತೆ ಆರಂಭಿಸಿದೆ. ಇದರ ಬೆನ್ನಲ್ಲೇ, ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ತಂಡದ ಸ್ಟಾರ್ ಆಟಗಾರನನ್ನ ಕೈಬಿಟ್ಟಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವೇಗಿ, ಆಸ್ಟ್ರೇಲಿಯಾ ಕ್ರಿಕೆಟಿಗ ಮಿಚೆಲ್ ಸ್ಟಾರ್ಕ್ ಒಪ್ಪಂದವನ್ನ ನವೀಕರಿಸಿಲ್ಲ. ಇಷ್ಟೇ ಅಲ್ಲ ಮಸೇಜ್ ಮೂಲಕ ಕೆಕೆಆರ್ ಫ್ರಾಂಚೈಸಿ ಈ ವಿಚಾರವನ್ನ ಸ್ಟಾರ್ಕ್‌ಗೆ ತಿಳಿಸಿದೆ.

2018ರಲ್ಲಿ ವೇಗಿ ಮಿಚೆಲ್ ಸ್ಟಾರ್ಕ್‌ಗೆ ಬರೋಬ್ಬರಿ 9.4 ಕೋಟಿ ರೂಪಾಯಿ ನೀಡಿ ಕೆಕೆಆರ್ ಖರೀದಿಸಿತ್ತು. ಆದರೆ ಇಂಜುರಿ ಕಾರಣದಿಂದ ಕಳೆದ ಐಪಿಎಲ್ ಪಂದ್ಯ ಆಡಲು ಸಾಧ್ಯವಾಗಿಲ್ಲ. ಇದೀಗ ಇಂಜುರಿಯಿಂದ ಚೇತರಿಸಿಕೊಂಡಿರುವ ಸ್ಟಾರ್ಕ್ ಆಸಿಸ್ ತಂಡ ಸೇರಿಕೊಂಡಿದ್ದಾರೆ.

2019ರ ವಿಶ್ವಕಪ್ ಟೂರ್ನಿ ಇರೋದರಿಂದ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸ್ಟಾರ್ಕ್ ಪಾಲ್ಗೊಳ್ಳೋ ಕುರಿತು ಯಾವುದೇ ಸ್ಪಷ್ಟಣೆ ನೀಡಿಲ್ಲ.  ಕೆಕೆಆರ್‌ನಿಂದ ರಿಲೀಸ್ ಆಗಿರುವ ಮಿಚೆಲ್ ಸ್ಟಾರ್ಕ್ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಳ್ಳುತ್ತಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಆದರೆ ಈ ಕುರಿತು ಆರ್‌ಸಿಬಿಯಾಗಲಿ, ಸ್ಟಾರ್ಕ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

click me!