ಮಿಯಾಮಿ ಮಾಸ್ಟರ್ಸ್‌ನಲ್ಲಿ ಬೋಪಣ್ಣ ಕ್ವಾರ್ಟರ್‌ಗೆ ಲಗ್ಗೆ

By Kannadaprabha News  |  First Published Mar 27, 2024, 8:54 AM IST

ಹಾಲಿ ಆಸ್ಟ್ರೇಲಿಯನ್‌ ಓಪನ್ ಚಾಂಪಿಯನ್‌ ಬೋಪಣ್ಣ-ಎಬ್ಡೆನ್‌ ಜೋಡಿ ಅಂತಿಮ 8ರ ಘಟ್ಟದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಜಾನ್‌ ಪ್ಯಾಟ್ರಿಕ್‌ ಸ್ಮಿತ್‌-ನೆದರ್‌ಲೆಂಡ್ಸ್‌ನ ಸೆಮ್‌ ವೆರ್‌ಬೀಕ್‌ ವಿರುದ್ಧ ಸೆಣಸಾಡಲಿದ್ದಾರೆ.


ಫ್ಲೋರಿಡಾ(ಮಾ.27): ಭಾರತದ ರೋಹನ್ ಬೋಪಣ್ಣ-ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಮಿಯಾಮಿ ಮಾಸ್ಟರ್ಸ್‌ ಎಟಿಪಿ 1000 ಟೆನಿಸ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಸೋಮವಾರ ರಾತ್ರಿ ನಡೆದ ಪುರುಷರ ಡಬಲ್ಸ್‌ ಪ್ರಿ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಮೊನಾಕೊದ ಹ್ಯುಗೊ ನೈಸ್‌-ಪೋಲೆಂಡ್‌ನ ಜಾನ್‌ ಜೀಲೆನ್ಸ್ಕಿ ವಿರುದ್ಧ 7-5, 7-6(3) ಸೆಟ್‌ಗಳಲ್ಲಿ ರೋಚಕ ಗೆಲುವು ಸಾಧಿಸಿದರು.

ಹಾಲಿ ಆಸ್ಟ್ರೇಲಿಯನ್‌ ಓಪನ್ ಚಾಂಪಿಯನ್‌ ಬೋಪಣ್ಣ-ಎಬ್ಡೆನ್‌ ಜೋಡಿ ಅಂತಿಮ 8ರ ಘಟ್ಟದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಜಾನ್‌ ಪ್ಯಾಟ್ರಿಕ್‌ ಸ್ಮಿತ್‌-ನೆದರ್‌ಲೆಂಡ್ಸ್‌ನ ಸೆಮ್‌ ವೆರ್‌ಬೀಕ್‌ ವಿರುದ್ಧ ಸೆಣಸಾಡಲಿದ್ದಾರೆ.

Latest Videos

undefined

ಫಿಫಾ ವಿಶ್ವಕಪ್‌ನ ಅರ್ಹತಾ ಟೂರ್ನಿ: ಆಫ್ಘನ್‌ಗೆ ಶರಣಾದ ಭಾರತ!

ಗುವಾಹಟಿ: 2026ರ ಫಿಫಾ ಫುಟ್ಬಾಲ್‌ ವಿಶ್ವಕಪ್‌ನ ಅರ್ಹತಾ ಟೂರ್ನಿಯಲ್ಲಿ 3ನೇ ಸುತ್ತಿಗೇರುವ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ಮತ್ತೆ ಆಘಾತ ಎದುರಾಗಿದೆ. ಮಂಗಳವಾರ 2ನೇ ಸುತ್ತಿನ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧ 1-2 ಗೋಲುಗಳಿಂದ ಸೋಲನುಭವಿಸಿತು.

150ನೇ ಅಂತಾರಾಷ್ಟ್ರೀಯ ಪಂದ್ಯವಾಡಿದ ಸುನಿಲ್‌ ಚೆಟ್ರಿ 38ನೇ ನಿಮಿಷದಲ್ಲಿ ಗೋಲು ಬಾರಿಸಿದರೂ ಬಳಿಕ ಆಫ್ಘನ್‌ 2 ಗೋಲು ಬಾರಿಸಿ ಪಂದ್ಯವನ್ನು ತನ್ನದಾಗಿಸಿಕೊಂಡಿತು. ದೀರ್ಘ ಸಮಯದಿಂದ ಭಾರತ ಗೋಲು, ಗೆಲುವಿನ ಬರ ಎದುರಿಸುತ್ತಿದ್ದು, ಈ ಬಾರಿಯಾದರೂ ಗೆಲ್ಲಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಭರವಸೆ ಮತ್ತೆ ಹುಸಿಯಾಗಿದೆ.

ನಿಕಿತಾ ಕೈಕೊಟ್ಟಾಗ ಸಿಕ್ಕಿದ್ದೇ ದೀಪಿಕಾ: ಇಲ್ಲಿದೆ ದಿನೇಶ್ ಕಾರ್ತಿಕ್-ದೀಪಿಕಾ ಪಲ್ಲಿಕಲ್ ಇಂಟ್ರೆಸ್ಟಿಂಗ್ ಲವ್‌ ಸ್ಟೋರಿ...!

ಇತ್ತೀಚೆಗಷ್ಟೇ ನಡೆದಿದ್ದ ಉಭಯ ತಂಡಗಳ ನಡುವಿನ ಮೊದಲ ಮುಖಾಮುಖಿ ಗೋಲು ರಹಿತ ಡ್ರಾಗೊಂಡಿತ್ತು. ಸದ್ಯ ವಿಶ್ವ ರ್‍ಯಾಂಕಿಂಗ್‌ನಲ್ಲಿ ಭಾರತ 117ನೇ ಸ್ಥಾನದಲ್ಲಿದ್ದರೆ, ಆಫ್ಘನ್‌ 158ರಲ್ಲಿದೆ.

ಭಾರತ ‘ಎ’ ಗುಂಪಿನಲ್ಲಿ ಆಡಿದ 4 ಪಂದ್ಯಗಳಲ್ಲಿ ಕೇವಲ 1 ಜಯ ಸಾಧಿಸಿದ್ದು, 2 ಸೋಲು, 1 ಡ್ರಾದೊಂದಿಗೆ 4 ಅಂಕ ಸಂಪಾದಿಸಿದೆ. ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಕತಾರ್‌(14 ಅಂಕ) ಅಗ್ರಸ್ಥಾನದಲ್ಲಿದ್ದು, ಅಫ್ಘಾನಿಸ್ತಾನ(4 ಅಂಕ) ಹಾಗೂ ಕುವೈತ್‌(3 ಅಂಕ) ಕ್ರಮವಾಗಿ 3 ಮತ್ತು 4ನೇ ಸ್ಥಾನಗಳಲ್ಲಿವೆ.

ಹಾಕಿ ಇಂಡಿಯಾ ಪ್ರಶಸ್ತಿ ರೇಸಲ್ಲಿ ಶ್ರೀಜೇಶ್‌, ಹರ್ಮನ್‌

ನವದೆಹಲಿ: ಭಾರತದ ತಾರಾ ಹಾಕಿ ಪಟುಗಳಾದ ಶ್ರೀಜೇಶ್‌, ಹರ್ಮನ್‌ಪ್ರೀತ್‌ ಸಿಂಗ್‌ ಹಾಗೂ ಸವಿತಾ ಪೂನಿಯಾ ಹಾಕಿ ಇಂಡಿಯಾದ ವಾರ್ಷಿಕ ಪ್ರಶಸ್ತಿ ರೇಸ್‌ನಲ್ಲಿದ್ದಾರೆ. ದಿಗ್ಗಜ ಗೋಲ್‌ಕೀಪರ್‌ ಶ್ರೀಜೇಶ್‌ ಹಾಗೂ ಪೂನಿಯಾ ಕ್ರಮವಾಗಿ ಪುರುಷರ ಹಾಗೂ ಮಹಿಳಾ ವಿಭಾಗಗಳಲ್ಲಿ ಶ್ರೇಷ್ಠ ಗೋಲ್‌ಕೀಪರ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಪುರುಷರ ತಂಡದ ನಾಯಕ ಹರ್ಮನ್‌ಪ್ರೀತ್‌ ವರ್ಷದ ಆಟಗಾರ ಹಾಗೂ ಶ್ರೇಷ್ಠ ಡಿಫೆಂಡರ್‌ ಪ್ರಶಸ್ತಿಗೆ ನಾಮನಿರ್ದೇಶನ ಗೊಂಡಿದ್ದಾರೆ. ಒಟ್ಟು 8 ವಿಭಾಗಗಳಲ್ಲಿ 32 ಮಂದಿ ಪ್ರಶಸ್ತಿ ರೇಸ್‌ನಲ್ಲಿದ್ದು, ಮಾ.31ಕ್ಕೆ ಹಾಕಿ ಇಂಡಿಯಾ ವಿಜೇತರ ಹೆಸರು ಪ್ರಕಟಿಸಲಿದೆ.

ಇಂದಿನಿಂದ ಬೆಂಗ್ಳೂರಲ್ಲಿ ರಾಜ್ಯ ಮಟ್ಟದ ಗ್ರಾಮೀಣ ಬಾಸ್ಕೆಟ್‌ಬಾಲ್‌ ಕೂಟ

ಬೆಂಗಳೂರು: ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್‌ ಸಂಸ್ಥೆ ಆಯೋಜಿಸುವ ಪುರುಷರ ರಾಜ್ಯ ಮಟ್ಟದ ಗ್ರಾಮೀಣ ಬಾಸ್ಕೆಟ್‌ಬಾಲ್‌ ಲೀಗ್‌ ಫೈನಲ್‌ ಹಂತ ಮಾ.27ರಿಂದ 30ರ ವರೆಗೆ ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪಂದ್ಯಗಳು ನಾಕೌಟ್‌ ಮಾದರಿಯಲ್ಲಿ ಆಯೋಜನೆಗೊಳ್ಳಲಿವೆ. ಮಂಗಳೂರು, ದಾವಣೆಗೆರೆ, ಬಾಗಲಕೋಟೆ ಸೇರಿದಂತೆ ವಿವಿಧ ಕಡೆಗಳಿಂದ ಒಟ್ಟು 16 ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ.

click me!