Jul 24, 2018, 8:48 PM IST
ಬೆಂಗಳೂರು(ಜು.24): ಆಟ ಆಡೋದು ಸುಲಭ. ಆದರೆ ಆಟದಲ್ಲಿ ಚಾಂಪಿಯನ್ ಆಗೋದು ಕಷ್ಟ. ಅದರಲ್ಲೂ ಎರಡೆರಡು ಆಟದಲ್ಲಿ ಛಾಪು ಮೂಡಿಸೋದು ಅಂದ್ರೆ ಅದು ಸಾಧನೆಯೇ ಸರಿ.
ಅಂತಹ ಅಪರೂಪದ ಸಾಧನೆಯ ಹಾದಿಯಲ್ಲಿರುವ ಬೆಂಗಳೂರಿನ ಹುಡುಗಿಯೊಬ್ಬಳ ಪರಿಚಯ ಇಲ್ಲದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಥ್ರೋ ಬಾಲ್ ಆಡಿ ೬ ಗೋಲ್ಡ್ ಮೆಡೆಲ್ ತನ್ನದಾಗಿಸಿಕೊಂಡಿರುವ ಸಬಿಯಾ ಎಂಬ ಹುಡುಗಿಯ ಸಾಧನೆ ಅಂತಿಂತದ್ದಲ್ಲ.
ಇಷ್ಟೇ ಅಲ್ಲ ಸಬಿಯಾ ಫುಟ್ಬಾಲ್ ಆಟದಲ್ಲೂ ತನ್ನ ಛಾಪು ಮೂಡಿಸಿದ್ದಾಳೆ. ಸಬಿಯಾ ಥ್ರೋ ಬಾಲ್ ನ ಭಾರತ ಮಹಿಳಾ ತಂಡದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರಳಾಗಿದ್ದಾಳೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..