ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಮೇರಿ ಕೋಮ್ ಹೊಸ ದಾಖಲೆ! ಭಾರತದ ಬಾಕ್ಸಿಂಗ್ ತಾರೆ ಎಂ.ಸಿ. ಮೇರಿ ಕೋಮ್ ದಾಖಲೆಯ ಚಿನ್ನದ ಪದಕ! 8 ಕೆಜಿ ಲೈಟ್ ಫ್ಲೈವೇಟ್ ವಿಭಾಗದ ಫೈನಲ್‌ನಲ್ಲಿ ಚಿನ್ನಕ್ಕೆ ಮುತ್ತಿಟ್ಟ ಮೇರಿ ಕೋಮ್! ಪ್ರತಿಸ್ಪರ್ಧಿ ಉಕ್ರೇನ್‌ನ ಎಚ್ ಓಕೋಟೊ ವಿರುದ್ಧ 5-0 ಅಂತರದ ಗೆಲುವು
ನವದೆಹಲಿ(ನ.24): ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್ ನಲ್ಲಿ ಭಾರತದ ಬಾಕ್ಸಿಂಗ್ ತಾರೆ ಎಂ.ಸಿ. ಮೇರಿ ಕೋಮ್ ದಾಖಲೆಯ ಆರನೇಯ ಬಾರಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಇಂದು ನಡೆದ 48 ಕೆಜಿ ಲೈಟ್ ಫ್ಲೈವೇಟ್ ವಿಭಾಗದ ಫೈನಲ್ ಹಣಾಹಣಿಯಲ್ಲಿ ಉಕ್ರೇನ್‌ನ ಎಚ್ ಓಕೋಟೊ ವಿರುದ್ಧ 5-0 ಅಂತರದ ಗೆಲುವು ಸಾಧಿಸುವ ಮೂಲಕ, ಆರು ಬಾರಿ ವಿಶ್ವ ಚಾಂಪಿಯನ್‌ಶಿಪ್ ಗೆದ್ದ ವಿಶ್ವದ ಮೊದಲ ಬಾಕ್ಸಿಂಗ್ ತಾರೆ ಎಂಬ ಗೌರವಕ್ಕೆ ಮೇರಿ ಕೋಮ್ ಪಾತ್ರವಾಗಿದ್ದಾರೆ.
ಮೇರಿ ಕೋಮ್ ಈ ಹಿಂದೆ ಐದು ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕದೊಡನೆ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಆಗಿ ಮಿಂಚಿದ್ದರು. ಮೇರಿ ಕೋಮ್ 2010ರಲ್ಲಿ ಕೊನೆಯದಾಗಿ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ನಲ್ಲಿ ಚಿನ್ನ ಗೆದ್ದಿದ್ದರು.
A proud moment for Indian sports.
Congratulations to Mary Kom for winning a Gold in the Women’s World Boxing Championships. The diligence with which she’s pursued sports and excelled at the world stage is extremely inspiring. Her win is truly special.
ಇನ್ನು ಮೇರಿ ಕೋಮ್ ಅವರ ಈ ಅಭೂತಪೂರ್ವ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಶಂಸೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.