ಇದೇ ವೇಳೆ ಯುವ ಶಟ್ಲರ್ ಅಶ್ಮಿತಾ ಚಾಲಿಹಾ ಕ್ವಾರ್ಟರ್‌ನಲ್ಲಿ ಚೀನಾದ ಝಾಂಗ್ ಯಿ ಮಾನ್ ವಿರುದ್ಧ 10-21, 12-21ರಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದರು. ಸದ್ಯ ಭಾರತದ ಶಟ್ಲರ್‌ಗಳ ಪೈಕಿ ಸಿಂಧು ಮಾತ್ರ ಕಣದಲ್ಲಿದ್ದಾರೆ.
ಕೌಲಾಲಂಪುರ: 2 ಬಾರಿ ಒಲಿಂಪಿಕ್ಸ್ ಪದಕ ವಿಜೇತ, ಭಾರತದ ತಾರಾ ಶಟ್ಲರ್ ಪಿ.ವಿ.ಸಿಂಧು ಮಲೇಷ್ಯಾ ಮಾಸ್ಟರ್ಸ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಕಳೆದ 2 ವರ್ಷಗಳಿಂದಲೂ ಪ್ರಶಸ್ತಿ ಬರ ಎದುರಿಸುತ್ತಿರುವ ವಿಶ್ವ ನಂ.15 ಸಿಂಧು, ಶುಕ್ರವಾರ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವ ನಂ.6, ಚೀನಾದ ಹ್ಯಾನ್ ಯು ವಿರುದ್ಧ 21-13, 14-21, 21-12ರಲ್ಲಿ ಗೆಲುವು ಸಾಧಿಸಿದರು. 55 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸಿಂಧುಗೆ 2ನೇ ಸುತ್ತಿನಲ್ಲಿ ತೀವ್ರ ಪೈಪೋಟಿ ನೀಡಲು ಹ್ಯಾನ್ ಯು ಯಶಸ್ವಿಯಾದರು. ಆದರೆ ಕೊನೆ ಸುತ್ತಿನಲ್ಲಿ ಮತ್ತೆ ಪ್ರಾಬಲ್ಯ ಸಾಧಿಸಿದ ಸಿಂಧು, ಏಕಮುಖವಾಗಿ ಪಂದ್ಯ ಗೆದ್ದು ಅಂತಿಮ 4ರ ಘಟ್ಟ ಪ್ರವೇಶಿಸಿದರು. ಸೆಮೀಸ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಸಿಂಧುಗೆ ಥಾಯ್ಲೆಂಡ್‌ನ ಬುಸಾನನ್ ಸವಾಲು ಎದುರಾಗಲಿದೆ.
Pusarla V. Sindhu 🇮🇳 puts No.1 seed Han Yue 🇨🇳 to the test. pic.twitter.com/5UVGL3rg6I
— BWF (@bwfmedia)undefined
ಇದೇ ವೇಳೆ ಯುವ ಶಟ್ಲರ್ ಅಶ್ಮಿತಾ ಚಾಲಿಹಾ ಕ್ವಾರ್ಟರ್‌ನಲ್ಲಿ ಚೀನಾದ ಝಾಂಗ್ ಯಿ ಮಾನ್ ವಿರುದ್ಧ 10-21, 12-21ರಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದರು. ಸದ್ಯ ಭಾರತದ ಶಟ್ಲರ್‌ಗಳ ಪೈಕಿ ಸಿಂಧು ಮಾತ್ರ ಕಣದಲ್ಲಿದ್ದಾರೆ.
ಪ್ರೊ ಲೀಗ್ ಹಾಕಿ: ಬೆಲ್ಲಿಯಂ ವಿರುದ್ಧ ಭಾರತಕ್ಕೆ ಸೋಲು
ಆ್ಯಂಟ್ವಪ್(ಬೆಲ್ಸಿಯಂ): ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಭಾರತದ ಪುರುಷ, ಮಹಿಳಾ ತಂಡಗಳು ಬೆಲ್ಲಿಯಂ ವಿರುದ್ಧ ಸೋಲನುಭವಿಸಿದೆ. ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಪುರುಷರ ತಂಡ 1-4 ಗೋಲುಗಳಿಂದ ಪರಾಭವಗೊಂಡಿತು. ಇದರೊಂದಿಗೆ ಭಾರತ ಸದ್ಯ ಅಂಕಪಟ್ಟಿಯಲ್ಲಿ 10 ಪಂದ್ಯಗಳಲ್ಲಿ 17 ಅಂಳೊಂದಿಗೆ 3ನೇ ಸ್ಥಾನದಲ್ಲಿದೆ.
ಮದುವೆಗೆ ಮೊದಲೇ ತಂದೆಯಾಗಿದ್ದ ಹಾರ್ದಿಕ್ ಪಾಂಡ್ಯಗೆ ಕೈಕೊಟ್ರಾ ನತಾಶಾ..? ಮುಂಬೈ ನಾಯಕನಿಗೆ ಬಿಗ್ ಶಾಕ್
ಇದೇ ವೇಳೆ ಮಹಿಳಾ ತಂಡಕ್ಕೆ 0-2 ಗೋಲುಗಳ ಅಂತರದಲ್ಲಿ ಸೋಲು ಎದುರಾಯಿತು. ಸತತ 2 ಸೋಲು ಕಂಡ ಮಹಿಳಾ ತಂಡ ಒಟ್ಟು 10 ಪಂದ್ಯಗಳಲ್ಲಿ ಕೇವಲ 8 ಅಂಕ ಸಂಪಾದಿಸಿದ್ದು, ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲೇ ಬಾಕಿಯಾಗಿದೆ. ಭಾರತದ 2 ತಂಡಗಳಿಗೂ ಶನಿವಾರ ಮತ್ತೆ ಬೆಲ್ಜಿಯಂ ಸವಾಲು ಎದುರಾಗಲಿವೆ.
ಆರ್ಚರಿ ವಿಶ್ವಕಪ್: ಭಾರತ ಮಿಶ್ರ ತಂಡ ಫೈನಲ್‌ಗೆ ಲಗ್ಗೆ
ಯೆಕೋನ್ (ದಕ್ಷಿಣ ಕೊರಿಯಾ): ಆರ್ಚರಿ ವಿಶ್ವಕಪ್‌ನಲ್ಲಿ ಭಾರತದ ಜ್ಯೋತಿ ಸುರೇಖಾ ಬೆನ್ನಂ ಹಾಗೂ ಪ್ರಿಯಾನ್ ಜ್ಯೋತಿ ಸುರೇಖಾ ಕಾಂಪೌಂಡ್ ಮಿಶ್ರ ತಂಡ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ಭಾರತಕ್ಕೆ 2ನೇ ಪದಕ ಖಚಿತವಾಗಿದೆ.
ಶುಕ್ರವಾರ ನಡೆದ ಸೆಮಿಫೈನಲ್ ನಲ್ಲಿ ಭಾರತ ತಂಡ ದಕ್ಷಿಣ ಕೊರಿಯಾ ವಿರುದ್ದ ಸೆಮಿ ಫೈನಲ್‌ನಲ್ಲಿ 158-157 ಅಂಕಗಳಿಂದ ಗೆಲುವು ಸಾಧಿಸಿತು. ಬುಧವಾರ ಕಾಂಪೌಂಡ್ ಮಹಿಳಾ ತಂಡ ವಿಭಾಗದಲ್ಲಿಪರ್‌ನೀತ್ ಕೌರ್-ಅದಿತಿ ಸ್ವಾಮಿ ಫೈನಲ್‌ಗೇರಿ ಪದಕ ಖಚಿತಪಡಿಸಿ ಕೊಂಡಿದ್ದರು. ಇದೇ ವೇಳೆ ರೀಕರ್ವ್ ವಿಭಾಗದಲ್ಲಿ ಮಾಜಿ ವಿಶ್ವನಂ.1 ದೀಪಿಕಾ ಕುಮಾರಿ ಅವರು ಸೆಮಿಫೈನಲ್ ಪ್ರವೇಶಿಸಿ ದ್ದಾರೆ. ಭಾನುವಾರ ಅವರು ವಿಶ್ವನಂ.2, ದಕ್ಷಿಣ ಕೊರಿಯಾದ ಲಿಮ್ ಶಿಯೋನ್ ವಿರುದ್ಧ ಸೆಣಸಲಿದ್ದಾರೆ.
ಆರ್‌ಸಿಬಿ ಕಂಡು ಉರಿದುಕೊಳ್ಳುವವರ ನಡುವೆ ಸ್ಮರಿಸಿಕೊಳ್ಳುವಂತ ಸಂದೇಶ ಸಾರಿದ ನಿಕೋಲಸ್ ಪೂರನ್..!
ಪ್ಯಾರಾ ಅಥ್ಲೆಟಿಕ್ಸ್: ರಿಂಕುಗೆ ಜಾವೆಲಿನ್‌ನಲ್ಲಿ 3ನೇ ಸ್ಥಾನ
ಕೋಟೆ(ಜಪಾನ್): ಇಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ರಿಂಕು ಹೂಡಾ ಪುರುಷರ ಜಾವೆಲಿನ್ ಎಸೆತದಲ್ಲಿ 3ನೇ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ ಆಯೋಜಕರು ಅಧಿಕೃತ ಫಲಿತಾಂಶವನ್ನು ತಡೆ ಹಿಡಿದಿದ್ದಾರೆ. ರಿಂಕು ತಮ್ಮ 4ನೇ ಪ್ರಯತ್ನದಲ್ಲಿ 62.77 ಮೀ. ದೂರ ದಾಖಲಿಸಿ 3ನೇ ಸ್ಥಾನಿಯಾದರು.
ಶ್ರೀಲಂಕಾದ ಪ್ರಿಯಾಂತಾ ಹೆರಾತ್ (64.59 ಮೀ.) 2ನೇ ಸ್ಥಾನಿಯಾಗಿದ್ದು, ಕ್ಯೂಬಾದ ವರೋನಾ ಗೊಂಜಾಲೆಜ್ (65.16 ಮೀ.) ಅಗ್ರಸ್ಥಾನ ಪಡೆದರು. ಆದರೆ ಗೊಂಜಾಲೆಜ್ ವಿರುದ್ಧ ಹೆರಾತ್ ದೂರು ಸಲ್ಲಿಸಿರುವ ಕಾರಣ ಆಯೋಜಕರು ಫಲಿತಾಂಶವನ್ನು ತಡೆ ಹಿಡಿದಿದ್ದಾರೆ. ಭಾರತ ಸದ್ಯ ಕೂಟದಲ್ಲಿ 5 ಚಿನ್ನ, 4 ಬೆಳ್ಳಿ ಹಾಗೂ 3 ಕಂಚಿನೊಂದಿಗೆ 12 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಶನಿವಾರ ಕೂಟದ ಕೊನೆ ದಿನ.