ಕುಮಟಾ ತಂಡ ರಾಜ್ಯಮಟ್ಟದ ವಾಲಿವಾಲ್ ಚಾಂಪಿಯನ್

By Kannadaprabha News  |  First Published Aug 3, 2018, 10:21 AM IST

ಸಮೀಪದ ಹುಲಿಗಿ ಗ್ರಾಮದಲ್ಲಿ ಕೋರಮಂಡಲ ಫರ್ಟಿಲೈಸರ್ ಸಂಸ್ಥೆಯಿಂದ ಇತ್ತೀಚೆಗೆ ಆಯೋಜಿಸಲಾದ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕುಮಟಾ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ


ಬೆಂಗಳೂರು ತಂಡವು ರನ್ನರ್ ಅಫ್ ಸ್ಥಾನ ಪಡೆದಿದೆ. ಕಮಲಾಪುರ ತಂಡ ೩ನೇ ಸ್ಥಾನ ಹಾಗೂ ರಾಯಚೂರು ತಂಡವು ೪ನೇ ಸ್ಥಾನ ಪಡೆದುಕೊಂಡಿದೆ. ವಿಜೇತ ಕುಮಟಾ ತಂಡದ ನಾಯಕ ರಮೇಶ ಅವರಿಗೆ ಕೋರಮಂಡಲ್ ಫರ್ಟಿಲೈಸರ್ ಜನರಲ್ ಮ್ಯಾನೇಜರ್ ಗೋಪಾಲ ಅವರು ಪಾರಿತೋಷಕ ಹಾಗೂ ₹ ೨೦ ಸಾವಿರ ಬಹುಮಾನ ವಿತರಿಸಿದರು.

ರನ್ನರ್‌ಅಪ್ ಬೆಂಗಳೂರು ತಂಡಕ್ಕೆ ₹ ೧೫ ಸಾವಿರ ಬಹುಮಾನ, ೩ನೇ ಸ್ಥಾನ ಪಡೆದ ಕಮಾಲಾಪುರ ತಂಡಕ್ಕೆ ₹ ೧೦ಸಾವಿರ ಬಹುಮಾನ ಹಾಗೂ ೪ನೇ ಸ್ಥಾನ ಪಡೆದ ರಾಯಚೂರು ತಂಡಕ್ಕೆ ₹ ೫ಸಾವಿರ ಬಹುಮಾನ ವಿತರಿಸಿದರು. ಹುಲಿಗಿ ಗ್ರಾಮದಲ್ಲಿ ವಾಲಿಬಾಲ್ ಆಟಕ್ಕೆ ಪ್ರೋತ್ಸಾಹ ನೀಡಿದ ನಿಟ್ಟಿನಲ್ಲಿ ಸಂಸ್ಥೆಯಿಂದ ಗ್ರಾಮಕ್ಕೆ ಹೊನಲು-ಬೆಳಕಿನ (ಪ್ಲಡ್ ಲೈಟ್) ಸಾಮಗ್ರಿ ವಿತರಿಸಿದರು.

Tap to resize

Latest Videos

click me!